ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಚ್ಚೇಗೌಡರನ್ನು ಬೆಂಬಲಿಸಿ

Srinivasa Murthy VN
Updated On : 13 Apr 2014, 12:44 pm

ಸೂಲಿಬೆಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ  ಹಾಗೂ ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಬಿಜೆಪಿ  ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರನ್ನು ಬೆಂಬಲಿಸಲು ತಾಪಂ ಮಾಜಿ ಅಧ್ಯಕ್ಷ ಬಿ.ವಿ ರಾಜಶೇಖರ್ ಗೌಡ ಮನವಿ ಮಾಡಿದ್ದಾರೆ.
ನಂದಗುಡಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿರುವ ರಾಜಶೇಖರ್ ಗೌಡರು, ಕಳೆದ 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರ ಜನ ಸಾಮಾನ್ಯರಿಗೆ ನೀಡಿದ ಕೊಡುಗೆ ಬೆಲೆ ಏರಿಕೆ, ಹಗರಣಗಳ ಮೂಲಕ ದೇಶದ ಸಂಪತ್ತು ಲೂಟಿ. ಇಂಥ ಸರ್ಕಾರವನ್ನು ಮತ್ತೇ ತಂದು ದೇಶದ ಅಧೋಗತಿಗೆ ಕಾರಣರಾಗುವುದು ಬೇಡ. ದೇಶದ ಹಿತರಕ್ಷಣೆ, ಸಮಗ್ರ ಅಭಿವೃದ್ಧಿ, ನದಿ ಜೋಡಣೆಯಂಥ ಜನಪರವಾದ ಯೋಜನೆಗಳ ಕನಸು ಹೊತ್ತಿರುವ ಬಿಜೆಪಿಯ ನರೇಂದ್ರ ಮೋದಿ ಅವರಿಗೆ ಒಂದು ಬಾರಿ ಅವಕಾಶ ಕೊಡಿ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಗ್ರಾಮೀಣ ಭಾಗದ ಜನರು ಯಾವ ಸರ್ಕಾರ ಏನು ಮಾಡಿದೇ ಎಂಬುದನ್ನು ಚಿಂತನೆ ಮಾಡಿ ಈ ಬಾರಿ ಬಿಜೆಪಿಯ  ಬಚ್ಚೇಗೌಡರಿಗೆ ಮತ ನೀಡುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನ ಮಾಡಬೇಕು. ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ರಾಮನಗರದಲ್ಲಿ ಸೋಲುವ ಭಯದಿಂದ ಕ್ಷೇತ್ರದಿಂದ ಪಲಾಯನ ಮಾಡಿ ಇಲ್ಲಿಗೆ ಬಂದಿದ್ದಾರೆ. ಅವರು ಗೆದ್ದು ಈ ಕ್ಷೇತ್ರ ಬಿಟ್ಟು ಮತ್ತೆ ಪರಾರಿಯಾಗಲ್ಲ ಎನ್ನುವದಕ್ಕೆ ಏನು ಗ್ಯಾರೆಂಟಿ ಇದೆ. ಕಾರ್ಕಳದಲ್ಲಿ ಮೂರು ಬಾರಿ ಸೋತು ಪುನರ್ಜನ್ಮ ನೀಡಿದ ಚಿಕ್ಕಬಳ್ಳಾಪುರಕ್ಕೆ  ಮೊಯ್ಲಿ ಮಾಡಿದ್ದೇನು ಎಂಬುದನ್ನು ಮತದಾರರು ನೋಡಿದ್ದು, ಇವರಿಬ್ಬರನ್ನು ಬಿಟ್ಟು ಸ್ಥಳೀಯ ವ್ಯಕ್ತಿ ಬಚ್ಚೇಗೌಡರಿಗೆ ಆರ್ಶಿವಾದ ಮಾಡಿ ಗೆಲ್ಲಿಸಿ ಎಂದ ಮತದಾರರಲ್ಲಿ ಮನವಿ ಮಾಡಿದ್ದಾರೆ.
ತಾಪಂ, ಜಿಪಂ ಮುಖಂಡರು ಈ ವೇಳೆ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement