ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಜೆಪಿ ಅಭ್ಯರ್ಥಿ ಮುನಿರಾಜಗೌಡರ ವಾಹನದ ಮೇಲೆ ಕಲ್ಲು ತೂರಾಟ

Srinivasa Murthy VN
Updated On : 13 Apr 2014, 12:45 pm

ಕುಣಿಗಲ್ : ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜಗೌಡರ ವಾಹನದ ಮೇಲೆ ಕಲ್ಲು ತೂರಾಟ ನಡೆದು, ಬಿಜೆಪಿ ಕಾರ್ಯಕರ್ತನೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ತಾವರೆಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
 ಮುನಿರಾಜುಗೌಡ, ಶನಿವಾರ ತಾಲೂಕಿನ ವಿವಿಧ ಹೋಬಳಿಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ, ಹುಲಿಯೂರುದುರ್ಗ ಹೋಬಳಿಯ ತಾವರೆಕೆರೆ ಗ್ರಾಮಕ್ಕೆ ರಾತ್ರಿ ಎಂಟೂವರೆ ಗಂಟೆ ವೇಳೆಗೆ ಆಗಮಿಸಿದರು.ಅಪರಿಚತನೊಬ್ಬ  ರೋಡ್ ಶೋ ವಾಹನದ ಮೇಲೆ ಕಲ್ಲು ತೂರಿದ್ದು, ಇದು ತಾಲೂಕು ಬಿಜೆಪಿ ಕಾರ್ಯದರ್ಶಿ ವೆಂಕಟೇಶ್ ತಲೆಗೆ ಬಡಿದ ಕಾರಣ ಗಾಯವಾಯಿತು. ಕೂಡಲೆ ರೋಡ್ ಶೋನಲ್ಲಿದ್ದವರು ಎಚ್ಚೆತ್ತು ಆತ ಯಾರೆಂಬುದನ್ನು ನೋಡಲು ಮುಂದಾದಾಗ ಮತ್ತೆ ಕಲ್ಲುತೂರಾಟ ನಡೆದು ಮುನಿರಾಜಗೌಡರ ಖಾಸಗಿ ಕಾರಿಗೆ ಕಲ್ಲುತಾಗಿ ಜಖಂಗೊಂಡಿತು.      ಗಾಯಾಳುವನ್ನು ಕುಣಿಗಲ್ ಆಸ್ಪತ್ರೆಗೆ ಸಾಗಿಸಿದ ಕಾರ್ಯಕರ್ತರು, ಕಲ್ಲುಕತೂರಾಟ ನಡೆಸಿದವರ ಬಗ್ಗೆ ಗ್ರಾಮಸ್ಥರಲ್ಲಿ, ಗ್ರಾಮದಲ್ಲಿ ವಿಚಾರಣೆ ನಡೆಸಲು ಮುಂದಾದಾಗ ಈ ಘಟನೆಗೆ  ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಬಿಜೆಪಿ ಮುಖಂಡರಾದ ನಟರಾಜು, ತಿಮ್ಮಪ್ಪ ಇತರರು ಆರೋಪಿಸಿದ್ದಾರೆ.  ಸ್ಥಳೀಯ ಪೊಲೀಸರು ರೋಡ್ ಶೋಗೆ ಸೂಕ್ತ ಬಂದೋಬಸ್ತ್ ಕಲ್ಪಿಸದಿರುವುದು ಘಟನೆಗೆ ಕಾರಣವೆಂದು ಆರೋಪಿಸಿ, ಅಭ್ಯರ್ಥಿ ಮುನಿರಾಜಗೌಡ ಧರಣಿ ಕುಳಿತರು.  ಸ್ಥಳಕ್ಕೆ ಚುನಾವಣಾಧಿಕಾರಿಗಳು ಆಗಮಿಸಿ ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement