ಡಿ.ಕೆ.ಸುರೇಶ್ಗೆ ಅತಿ ಹೆಚ್ಚು ಮತ
ಚನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ಗೆ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಲಿದೆ ಎಂದು ನಗರಸಭಾ ಉಪಾಧ್ಯಕ್ಷ ಮುದ್ದುಕೃಷ್ಣೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ತಮ್ಮ ಅಪಾರ ಬೆಂಬಲಿಗರರೊಂದಿಗೆ ಮತಯಾಚನೆ ಮಾಡಿದ ಅವರು, ಡಿ.ಕೆ.ಸುರೇಶ್ ಕೇವಲ 6 ತಿಂಗಳ ಅವಧಿಯಲ್ಲಿ ಸಂಸದರಾಗಿ ಮಾಡಿರುವ ಕೆಲಸವನು ಯಾವ ಸಂಸದರೂ ಮಾಡಿಲ್ಲ, ಪಟ್ಟಣದ ಎಲೇಕೇರಿ ರಸ್ತೆಗೆ ರೇಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಸಂಸದರನು ಕೋರಲಾಗುತ್ತಿತ್ತಾದರೂ ಈ ಭಾಗದ ಜನತೆಯ ಸಮಸ್ಯೆಗಳಿಗೆ ಯಾರೂ ಗಮನ ಹರಿಸಿರಲಿಲ್ಲ. ಆದರೆ ನಮ್ಮ ಮನವಿಗೆ ಕೆಲವೇ ತಿಂಗಳಲ್ಲಿ ಸ್ಪಂದಿಸಿದ ಡಿ.ಕೆ.ಸುರೇಶ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಂಜೂರಾತಿ ಕೊಡಿಸಿ ನಮ್ಮ ಸಮಸ್ಯೆಯನು ಬಗೆಹರಿಸಿದ್ದಾರೆ ಎಂದು ತಿಳಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ. ವೀರೇಗೌಡ ಮಾತನಾಡಿ, ಡಿ.ಕೆ.ಸುರೇಶ್ 6 ತಿಂಗಳ ಅವಧಿಯಲ್ಲಿ ಅಹರ್ನಿಶಿ ದುಡಿಯುವ ಮೂಲಕ ಜನರ ಮನಗೆದ್ದಿದ್ದಾರೆ. ಸದಾಕಾಲ ತಮ್ಮ ಸುಖ ದುಃಖಗಳಿಗೆ ಸ್ಪಂದಿಸುವ ಸಂಸದನನು ಆಯ್ಕೆ ಮಾಡಿ ಕೊಳ್ಳಲಿದ್ದಾರೆ. ಈ ತಾಲೂಕಿನಲ್ಲಿ ಸುರೇಶ್ ಪರ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಚಲಾವಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.