ರಾಮನಗರದಲ್ಲಿ ಸಲ್ಲದವರು ಚಿಕ್ಕಬಳ್ಳಾಪುರದಲ್ಲಿ ಸಲ್ಲುವರೇ?
ಹೊಸಕೋಟೆ: ರಾಮನಗರದಲ್ಲಿ ಸೋಲಿನ ಭೀತಿಯಿಂದ ಪಲಾಯನಗೊಂಡಿರುನ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಜನರಿಗೆ ಮೋಸ ಮಾಡಲು ಪ್ರಯತಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದರು.
ಅವರು ಪಟ್ಟಣದ ಬಸ್‌ಸ್ಟಾಂಡಿನಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಅಪ್ಪ, ಮಕ್ಕಳಿಗೆ ಮಾತ್ರ ಸೀಮಿತವ್ದ ಪಕ್ಷವಾಗಿದ್ಗು ರಾಜ್ಯದಲ್ಲಿ ರೈತರು ಸಂಕಷ್ಟಗಳಿಗೆ ಸಿಲುಕಿದ ಸಂದರ್ಭಗಳಲ್ಲಿ ಮೌನವಾಗಿದ್ದು ಚುನಾವಣೆ ಸ ಮೀಪಿಸುತ್ತಿದ್ದಂತೆ ಮೊಸಳೆ ಕಣ್ಣೀರು ಹರಿಸುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಕ್ಷೇತ್ರದ ಜನರ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕುಮಾರಸ್ವಾಮಿಗೆ ಮತದಾರರೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ 3-4 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಜೆಡಿಎಸ್ ಅಭ್ಯರ್ಥಿಗಳಿಂದ ಸ್ಪರ್ಧೆ ಇದೆ. ಉಳಿದೆಡೆ ತನ ಅಸ್ತಿತ್ವವನೆ ಅದು ಕಳೆದುಕೊಂಡಿದೆ. ಕೋಮುವಾದಿಯಾದ ಬಿಜೆಪಿ ರಾಷ್ಟ್ರದ ವೈವಿಧ್ಯತೆಯನು ಕಾಪಾಡಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಮಾತನಾಡಿ ಕ್ಷೇತ್ರದಲ್ಲಿ ಬಹಳಷ್ಚು ಅಭಿವೃದ್ಧಿ ಕಾರ್ಯಗಳನು ಜಾರಿಗೊಳಿಸಿರುವುದನು ಮತದಾರರು ಅರಿತು ಮತ್ತೊಂದು ಅವಕಾಶ ನೀಡಬೇಕು. ಎತ್ತಿನಹೊಳೆ ಯೋಜನೆಯನು 3 ನರ್ಷಗಳಲ್ಲಿ ಪೂರೈಸಿ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಂಕಣಬದ್ಧರಾಗುವುದಾಗಿಯೂ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಏತ ನೀರಾವರಿ ಯೋಜನೆ ಜಾರಗೊಳಿಸುವುದಾಗಿ ತಿಳಿಸಿದರು.