ರೈತರ ಧ್ವನಿ ಜೆಡಿಎಸ್‌ಗೆ ಮತ ನೀಡಿ
ನೆಲಮಂಗಲ: ರೈತರ ಪರ ಧ್ವನಿಯಾಗಿರುವ ಜೆಡಿಎಸ್‌ಗೆ ಮತ ನೀಡುವಂತೆ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾಸ್ವಾಮಿ ಪರ ಸಾವಿರಾರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿ ಮಾತನಾಡಿ, ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರ ಯೋಜನೆಗಳು, ಗ್ರಾಮ ವಾಸ್ಥವ್ಯ, ಬಡವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ನಿರ್ವಹಿಸಿದ ಕಾರ್ಯಗಳು ಅವರಿಗೆ ವರದಾನವಾಗಿ ಜನತೆ ಅವರಿಗೆ ಮತ ನೀಡಲು ಉತ್ಸುಕರಾಗಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಅವರು ಕಳೆದ 5 ವರ್ಷದ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಲ್ಲ, ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾದದ್ದು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಎನ್.ಪಿ.ಹೇಮಂತ್ ಕುಮಾರ್, ಪುರಸಭೆ ಅಧ್ಯಕ್ಷ ಎಂ. ನಾರಾಯಣ್, ಜಿ.ಪಂ.ಸದಸ್ಯ ಕಾಂತರಾಜು, ಮುಖಂಡರಾದ ಗಂಗಣ್ಣ, ರಂಗಸ್ವಾಮಿ, ಪಿಳ್ಳಪ್ಪ, ಶಿವಕುಮಾರ್, ಗಣೇಶ್, ಸೀತಾರಾಮು, ನಾಗರಾಜು, ರಾಜಣ್ಣ ಸೇರಿದಂತೆ ಅನೇಕರು ಇದ್ದರು.
ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಸುರೇಶ್
ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ತೀವ್ರವಾಗಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಹಾಗೂ ಕೆರೆಗಳಿಗೆ ನೀರನ್ನು ತುಂಬಿಸುವ ಮೂಲಕ ನೀರಾವರಿಗೆ ಅನುಕೂಲತೆ, ಅಂತರ್ಜಲ ವೃದ್ಧಿ ಮಾಡುವುದು ತಮ್ಮ ಧ್ಯೇಯವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದ್ದಾರೆ.
ಅವರು ಕನಕಪುರ ಪಟ್ಟಣ ವ್ಯಾಪ್ತಿಯ ವಾರ್ಡ್‌ಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಮುಖಂಡರಾದ ಆರ್.ಕೃಷ್ಣಮೂರ್ತಿ,ಪಟ್ಟಣಪ್ರಾಧಿಕಾರ ಅಧ್ಯಕ್ಷ ವಿಜಯದೇವ್, ಜಿಪಂ ಸದಸ್ಯ ಇಕ್ಬಾಲ್ ಹುಸೇನ್, ಜಿಲಾ ್ಲಉಪಾಧ್ಯಕ್ಷ ವಿ.ಶ್ರೀನಿವಾಸ್, ಪುರಸಭಾಸದಸ್ಯೆ ಹೇಮಾರಾಜು, ರೋಹಿಣಿಪ್ರಿಯಾ, ಕುರೂಪೇಟೆ ಜಗದೀಶ್, ಕೆ.ಎನ್.ದಿಲೀಪ್, ಕೆಂಪರಾಜು ಮೊದಲಾದವರು ಪಾಲ್ಗೊಂಡಿದ್ದರು.