ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ

Srinivasa Murthy VN
Updated On : 16 Apr 2014, 2:05 am

ನೆಲಮಂಗಲ: ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿರುವ  ಪುಣ್ಯಕ್ಷೇತ್ರ ಶ್ರೀಮದ್ ಶಮಗಿರಿ (ಕೌಂಡಿನ್ಯಾಶ್ರಮ ) ವೃಷಾಭಾಪುರಿ ಎಂದು ಪುರಾಣ ಪ್ರಸಿದ್ಧಿಯಾಗಿ ನೆಲೆಸಿರುವ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ  ಮಂಗಳವಾರ  ನೆರವೇರಿತು.  
ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ಸ್ವಾಮಿಗೆ ಹಣ್ಣು-ಕಾಯಿ ಅರ್ಪಿಸುವ ಮೂಲಕ ಭಕ್ತಿ ಭಾವ ಮೆರೆದರು. ಶ್ರೀ ಸ್ವಾಮಿಯ ದರ್ಶನಕ್ಕಾಗಿ ದೂರದೂರುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಭಾಗ್ಯ ಪಡೆದರು. ದೇವಸ್ಥಾನದಲ್ಲಿ ಚಿಕ್ಕಗರುಡೋತ್ಸವ, ಗಜೇಂದ್ರಮೋಕ್ಷ, ಕಲ್ಯಾಣೋತ್ಸವ, ಗರುಡೋತ್ಸವ ಮತ್ತು  ಮೇಣೇವು ಸೇವೆ, ಕುದುರೆ ಮಹೋತ್ಸವ, ದವನೋತ್ಸವ, ಶೇಷವಾಹನೋತ್ಸವ  ಪೂಜೆ,  ನವಗ್ರಹ ಕಳಸ, ರಥ ಪ್ರತಿಷ್ಠೆ,  ಅಭಿಷೇಕ ಹಾಗೂ ಹವನ, ಶಯನೋತ್ಸವ, ಸಂಪ್ರೋಕ್ಷಣೆಯಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ದೇವಸ್ಥಾನದ ಪ್ರಧಾನ ಅರ್ಚಕರಾದ ಡಿ.ನಾರಾಯಣಭಟ್ಟರು ನೆರವೇರಿಸಿದರು. ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಧರ್ಮದರ್ಶಿ ಸಮಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಯಿಂದ ಭಕ್ತರಿಗೆ ಪಾನಕ, ಹೆಸರುಬೇಳೆ, ಮಜ್ಜಿಗೆ ವಿತರಿಸಿದರು. ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೀಪಾಲಂಕಾರದೊಂದಿಗೆ ವಿಶೇಷವಾಗಿ ಅಲಂಕರಿಸಿ  ರಥದಲ್ಲಿ   ಜಾನಪದ ಕಲಾತಂಡಗಳನ್ನು ಕುಣಿಸುವ ಮೂಲಕ ಭಕ್ತ ಸಮೂಹ ಮೆರವಣಿಗೆ ನಡೆಸಿತು.

ಅಂಬೇಡ್ಕರ್ ಆಶಯ ಈಡೇರಿಸಿ: ದಿನೇಶ್
ಆನೇಕಲ್ಲು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಹೋರಾಟ ಹಾಗೂ ಸಂಘಟನೆ ಮಂತ್ರದಿಂದ ದೇಶದಲ್ಲಿ ಐಕ್ಯತೆ, ಸಹೋದರತೆ ಹಾಗೂ ಸಮಾನತೆಗಾಗಿ ಭದ್ರ ಬುನಾದಿ ಹಾಕಿದರು ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷ ದಿನೇಶ್ ತಿಳಿಸಿದ್ದಾರೆ.
ಅವರು ಸಮಿತಿ ವತಿಯಿಂದ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತ ಕರಪತ್ರ ವಿತರಿಸಿ ಮಾತನಾಡಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅಪಾರವಾದ ಗೌರವ ಅಭಿಮಾನವಿದ್ದ ಅಂಬೇಡ್ಕರ್ ಅವರು ತಮ್ಮ ಜೀವಿತ ಅವಧಿಯಲ್ಲಿ ಶಿಸ್ತು ಬದ್ಧ ಕ್ರಮವನ್ನು ಅಳವಡಿಸಿಕೊಂಡು ದೇಶದ ಇತರ ನಾಯಕರಿಗೆ ಮಾದರಿಯಾಗಿದ್ದರು ಎಂದರು. ಹೊಸಬೆಳಕು ಟ್ರಸ್ಟ್ ಸಂಸ್ಥಾಪಕ ಹಾಗೂ ಸಮಿತಿಯ ಕಾರ್ಯದರ್ಶಿ ಜಿಗಣಿ ರಾಮಕೃಷ್ಣ ಮಾತನಾಡಿ ಮತದಾನ ಹಕ್ಕು ಚಲಾಯಿಸುವುದು ನಮ್ಮ ಹಕ್ಕು. ಉತ್ತಮ ನೇತಾರನನ್ನು ಆಯ್ಕೆ ಮಾಡುವುದು ಕರ್ತವ್ಯವಾಗುತ್ತದೆ. ಭ್ರಷ್ಟಾಚಾರ ರಹಿತ, ಶುದ್ಧ ಚಾರಿತ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಸಂಸತ್ತಿಗೆ ಒಳ್ಳೆಯ ಅಭ್ಯರ್ಥಿಯನ್ನು ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು. ಸಮತಿಯಿ ರವಿಶಾಸ್ತ್ರ್ರಿ, ರಾಜಾರಾಂ, ಇಂತಿಯಾಜ್, ರವಿ ರೆಡ್ಡಿ, ಸಂಪತ್ ಅವರು ಕರಪತ್ರ ವಿತರಣೆ ಮಾಡಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement