ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಚಿಕ್ಕಬಳ್ಳಾಪುರ ಕ್ಷೇತ್ರದ ನೀರಾವರಿ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ'

Srinivasa Murthy VN
Updated On : 17 Apr 2014, 1:50 am

ಸೂಲಿಬೆಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನದಿ ಜೋಡಣೆಯ ಕಾರ್ಯ ಬಿಜೆಪಿಯ ಅಜೆಂಡವಾಗಿದ್ದು,ಇದರ ಕಾರ್ಯ ಸಾಧನೆಗಾಗಿ ಬಿಜೆಪಿಯ ಬಚ್ಚೇಗೌಡರಿಗೆ ಮತ ನೀಡಿ ನರೇಂದ್ರ ಮೋದಿ ಪ್ರಧಾನಿಯಾಗಲು ಪ್ರತಿಯೊಬ್ಬ ಮತದಾರರು ಸಹಕರಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಬಿ.ಎನ್. ಗೋಪಾಲಗೌಡ ಹೇಳಿದರು.
ಸೂಲಿಬೆಲೆ ಪಟ್ಟಣಧಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರಿಗೆ ಮತ ನೀಡುವಂತೆ ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಕೇಂದ್ರದ ಯುಪಿಎ ಸರ್ಕಾರ ಮತದಾರರ ವಿಶ್ವಾಸವನ್ನು ಕಳೆದುಕೊಂಡಿದೆ.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವೀರಪ್ಪ ಮೊಯ್ಲಿ ಕೊಟ್ಟ ಭರವಸೆಗಳು ಈಡೇರಿಸಿಲ್ಲ. ಮತ್ತೇ ಅವರಿಗೆ ಮತ ನೀಡಿ ಏನು ಪ್ರಯೋಜನೆ. ಕಾಂಗ್ರೆಸ್ ಸರ್ಕಾರ ದಲಿತರು, ಅಲ್ಪ ಸಂಖ್ಯಾತರನ್ನು ತಮ್ಮ ವೋಟ್ ಬ್ಯಾಂಕ್ ಬಳಿಸಿಕೊಂಡು ಅಧಿಕಾರ ಸಿಕ್ಕ ನಂತರ ಅವರನ್ನು ಕಡೆಗಣಿಸಲಾಗುತ್ತಿದೆ. ಈ ಕಾರಣದಿಂದಲೇ ಈ ಸಮುದಾಯಗಳು ಇಂದಿಗೂ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಭ್ರಷ್ಟಚಾರ ಯುಪಿಎ ಸಾಧನೆಯಾಗಿದೆ. ರಾಮನಗರದಲ್ಲಿ ಸೋಲುವ ಭಯದಿಂದ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದಿರುವ ಕುಮಾರಸ್ವಾಮಿ ಈ ಹಿಂದೆ ಸಂಸದನಾಗಿದಲೂ ಏನು ಮಾಡಿಲಿಲ್ಲ. ತೃತೀಯರಂಗ ಕೇಂದ್ರದಲ್ಲಿ ಅಧಿಕಾರ ಹಿಡಿಯಲ್ಲ. ರಾಷ್ಚ್ರೀಯ ಪಕ್ಷಗಳಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶವಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಲು ಹಾಗೂ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರು ಗೆಲವು ಸಾಧಿಸಲು ಪ್ರತಿಯೊಬ್ಬ ಮತದಾರ ಬಿಜೆಪಿಯತ್ತ ಒಲವು ತೋರಬೇಕು ಎಂದು  ಹೇಳಿದರು.
ಯುವ ಮುಖಂಡ ನಾರಾಯಣಗೌಡ, ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

ಬ್ರಾಹ್ಮಣ ಯುವಜನರಿಗೆ ಭಾಷಣ ಸ್ಪರ್ಧೆ
ಬೆಂಗಳೂರು: ಆಚಾರ್ಯತ್ರಯ ಸೇವಾ ಪ್ರತಿಷ್ಠಾನ 'ಅನಾದಿಕಾಲದಿಂದ ಇರುವ ವಿಜ್ಞಾನ- ತಂತ್ರಜ್ಞಾನ ಮತ್ತು  ಬ್ರಾಹ್ಮಣರ ಪರಸ್ಪರ ಸಂಬಂಧ ಹಾಗೂ ಪ್ರಭಾವ' ಕುರಿತು ನಗರದಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಿದೆ. 16 ರಿಂದ 25 ವಯಸ್ಸಿನ ಬ್ರಾಹ್ಮಣ ಯುವ ಜನರಿಗೆ ಮಾತ್ರ ಉಚಿತ ಪ್ರವೇಶವಿದೆ. ಮೇ 1 ರಂದು ಸ್ಪರ್ಧೆ ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ- 9448354624.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement