ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಾತ್ಯತೀತ ಜನತಾದಳದಿಂದ ಕಾಂಗ್ರೆಸ್‌ಗೆ ಸೇರ್ಪಡೆ

Srinivasa Murthy VN
Updated On : 17 Apr 2014, 1:49 am

ಕನಕಪುರ: ಜಾತ್ಯತೀತ ಜನತಾದಳದ ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಜಾತೀಯತೆ ಹಾಗೂ ನಿರ್ಲಕ್ಷ್ಯಗಳಿಂದ ಬೇಸತ್ತು ಹಾರೋಹಳ್ಳಿ ಹೋಬಳಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಅವರು ಕನಕಪುರ ತಾಲೂಕನ್ನು ಅಭಿವೃದ್ಧಿಗೊಳಿಸುತ್ತಿರುವ ಪರಿ ಮೆಚ್ಚುಗೆಗೆ ಪಾತ್ರವಾಗಿದೆ.ಅವರ ನಾಯಕತ್ವ ಒಪ್ಪಿ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಬೆಂಬಲಿಸಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದಾಗಿ ಮುಖಂಡ ಕೀರಣಗೆರೆ ಜಗದೀಶ್ ಹೇಳಿದ್ದಾರೆ.
ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಮುಖಂಡರಾದ ಶಂಕರ್, ಚಂದ್ರು,ಅಗರ ಶಿವರಾಜು, ಸಿದ್ಧರಾಜು, ಲೋಕೇಶ್, ನಿಂಗಯ್ಯ, ರಾಜು, ನಾಗೇಶ್ ಮೊದಲಾದವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡುತ್ತಿದ್ದರು.
ಈ ಹಿಂದೆ ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಹಾರೋಹಳ್ಳಿ ಮರಳವಾಡಿ ಹೋಬಳಿಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು ಜನರ ನೋವಿಗೆ ಕಾರಣವಾಗಿದೆ. ಸಂಸದರ ನಿಧಿಯನ್ನೂ ಸಮರ್ಪಕವಾಗಿ ಅಭಿವೃದ್ಧಿಗೆ ಬಳಸಿಲ್ಲ, ಜಕ್ಕಸಂದ್ರ ಟಿ.ಹೊಸಳ್ಳಿ ರಸ್ತೆ ಹತ್ತಾರು ವರ್ಷಗಳಿಂದ ಹಾಳಾಗಿದ್ದು ದುರಸ್ತಿಗೆ ಕಾಳಜಿಯನ್ನು ತೋರಿಲ್ಲ. ಗ್ರಾಮಗಳ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲಾಗಿಲ್ಲ. ಹೋಬಳಿಯಲ್ಲಿ ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿದಿದ್ದು ಯಾವುದೇ ಏತನೀರಾವರಿ ಅಥವಾ ಕೆರೆಗಳಿಗೆ ನೀರುಣಿಸುವ ಕಾರ್ಯ ಕೈಗೆತ್ತಿಕೊಳ್ಳಲಿಲ್ಲ, ಹತ್ತಾರು ವರ್ಷ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ. ಈ ಭಾಗದ ಜೆಡಿಎಸ್ ಮುಖಂಡರಾಗಿದ್ದ ಸಿಂಧ್ಯಾ ಅವರು ಪಕ್ಷ ತೊರೆದಿರುವುದು ಜೆಡಿಎಸ್ ದುರ್ಬಲಗೊಂಡಂತಾಗಿದೆ. ಈ ಎಲ್ಲಾ ಕಾರಣಗಳಿಂದ ಮನನೊಂದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಕೀರಣಗೆರೆ ಜಗದೀಶ್ ನುಡಿದರು.

19ರಿಂದ  ರಾಜ್ಯ ಮಟ್ಟದ ವೀರಶೈವ ವಧು- ವರರ ಸಮಾವೇಶ
ಬೆಂಗಳೂರು:  ವೀರಶೈವ ಲಿಂಗಾಯತ ಹಾಗೂ ಜಂಗಮ ವಧು- ವರರ ಮತ್ತು ಪಾಲಕರ ರಾಜ್ಯ ಮಟ್ಟದ ಸಮಾವೇಶ ಎರಡು ದಿನಗಳ ಕಾಲ  ನಗರದಲ್ಲಿ ನಡೆಯಲಿದೆ. ಏ.19, 20ಕ್ಕೆ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್, ಮರಿಯಪ್ಪನ ಪಾಳ್ಯ ಮೆಟ್ರೋ ಸ್ಟೇಶನ್ ಪಿಲ್ಲರ್ ನಂ.209ರ ಹತ್ತಿರ, ರಾಜಾಜಿನಗರ 2ನೇ ಹಂತ, ಬೆಂಗಳೂರು-21 ಇಲ್ಲಿ ಸಮಾವೇಶ ನಡೆಯಲಿದೆ. ಆಸಕ್ತ ವಧು- ವರರು ಎರಡು ಫೋಟೋ, ಜಾತಕವನ್ನು ಕಡ್ಡಾಯವಾಗಿ ತರತಕ್ಕದ್ದು. ಟ್ರಸ್ಟ್‌ನ ರವಿ  ಹಂದಿಗೋಳ ಅಧ್ಯಕ್ಷತೆ ವಹಿಸುವರು. ಈ ಸಮಾವೇಶದಲ್ಲಿ ವಧು- ವರರನ್ನು ಪರಿಚಯಿಸಲಾಗುತ್ತದೆ. ಮಾತುಕತೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇಷ್ಟಪಟ್ಟಲ್ಲಿ ಮದುವೆ ನಿಶ್ಚಯದವರೆಗೆ ಸೇವಾ ಕಾರ್ಯ ನಡೆಯುತ್ತದೆ. ವಿಧವೆ, ವಿಧುರ, ಮರು ವಿವಾಹ ಆಗುವವರು, ಅಂಗವಿಕಲರು ಮತ್ತು ಅವರ ಪಾಲಕರು ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ-7204139739.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement