ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಂಡರ್‌ಲಾ ಹಾಲಿಡೇಸ್‌ನ 10 ಮುಖಬೆಲೆಯ ಷೇರು ಬಿಡುಗಡೆ

Srinivasa Murthy VN
Updated On : 17 Apr 2014, 1:50 am

ಬೆಂಗಳೂರು: ವಂಡರ್‌ಲಾ ಹಾಲಿಡೇಸ್ 10 ಮುಖಬೆಲೆಯ ಈಕ್ವಿಟಿ ಷೇರಿಗೆ 115ರಿಂದ 125 ದರ ನಿಗದಿಮಾಡಿ ಬಿಡುಗಡೆ ಮಾಡಲಾಗಿದೆ. ಏ.21ರಿಂದ ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಪ್ರವರ್ತಕ ಅರುಣ್ ಕೆ. ಚಿಟ್ಟಿಲಪಿಳ್ಳಿ ತಿಳಿಸಿದ್ದಾರೆ.
ಈಕ್ವಿಟಿ ಷೇರುಗಳನ್ನು ವಿವರಣಾ ಪತ್ರದಲ್ಲಿ ನಮೂದಿಸಿರುವ ದರ ಪಟ್ಟಿಗೆ ಅನುಸಾರವಾಗಿ, ಭದ್ರತೆ ಮತ್ತು ಷೇರು ವಿಕ್ರಯ ಮಂಡಳಿ ನಿಬಂಧನೆಗೆ ಅನುಸಾರವಾಗಿ 10 ಮುಖಬೆಲೆಯ ಒಟ್ಟು 14.50 ಕೋಟಿಯಷ್ಟು ಈಕ್ವಿಟಿ ಷೇರುಗಳನ್ನು ಸಾರ್ವಜನಿಕರಿಗೆ ವಿತರಿಸಲು ನಿರ್ಧರಿಸಿರುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.
ದರಪಟ್ಟಿಯನ್ನು ಪ್ರತಿ ಈಕ್ವಿಟಿ ಷೇರಿಗೆ 115 ರಿಂದ 125 ಎಂದು ನಿಗದಿಪಡಿಸಲಾಗಿದೆ. ಕನಿಷ್ಠ 100 ಈಕ್ವಿಟಿ ಷೇರುಗಳನ್ನು ಬಿಡ್ ಮಾಡಬಹುದು. ನಂತರ 100ರ ಗುಣಕದಲ್ಲಿ ಬಿಡ್ ಮಾಡಬಹುದು ಬಿಡ್ ಅವಧಿ ಏ. 23ರಂದು ಅಂತ್ಯಗೊಳ್ಳಲಿದೆ ಎಂದು ಅವರು ಹೇಳಿದರು. ಸಾರ್ವಜನಿಕ ವಿತರಣೆಯ ಆರಂಭದ ಒಂದು ದಿನ ಮುಂಚಿತವಾಗಿ ಆಂಕರ್ ದಾಖಲಾತಿ ಆರಂಭವಾಗಲಿದೆ. ವಿತರಣೆ ಕಂಪನಿ ಈಕ್ವಿಟಿ ಷೇರುಗಳ ಬಂಡವಾಳದ ಶೇ 25.66 ರಷ್ಟಾಗಿದೆ. ಸಾರ್ವಜನಿಕ ವಿತರಣೆಗೆ ಕ್ರಿಸಿಲ್ ಲಿ. ಕ್ರಿಸಿಲ್ ಐಪಿಒ ಗ್ರೇಡ್ 4/5 ಎಂದು ನೀಡಿದ್ದು ಭಾರತದಲ್ಲಿ ಸಾರ್ವಜನಿಕ ಸೆಕ್ಯೂರಿಟಿಗಳಿಗೆ ಸಂಬಂಧಿಸಿದ ಮೂಲ ಅಗತ್ಯಗಳನ್ನು ಹೊಂದಿರುವುದನ್ನು ಬಿಂಬಿಸಲಿದೆ. ಷೇರುಗಳನ್ನು ರೆಡ್ ಹೆರ್ರಿಂಗ್ ವಿವರಣಾ ಪತ್ರಿಕೆ ಮೂಲಕ ವಿತರಿಸಲಿದ್ದು ಇದು ಬಿಎಸ್‌ಇ ಲಿ., ರಾಷ್ಟ್ರೀಯ ಷೇರು ವಿನಿಮಯ  ಕೇಂದ್ರ ಲಿ. ನಲ್ಲೂ ಸೇರಿದೆ. ಸಾರ್ವಜನಿಕ ವಿತರಣೆಯನ್ನು ಸೆಮಿ ನಿಬಂಧನೆಗಳು 2009, ನಿಯಮ 26(1) ಅನ್ವಯ, ಬುಕ್ ಬಿಲ್ಡಿಂಗ್ ಪ್ರಕ್ರಿಯೆ ಮೂಲಕ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಇದರ ಪೈಕಿ ಶೇ.50 ರಷ್ಟನ್ನು ಅರ್ಹ ಸಾಂಸ್ಥಿಕ ಖರೀದಿದಾರರು (ಕ್ಯೂಐಬಿ) ಅವರಿಗೆ ಹಂಚಿಕೆ ಮಾಡಲಾಗಿದ್ದು ಶೇ.30 ರಷ್ಟನ್ನು ವಿವೇಚನಾ ಆಧಾರದಲ್ಲಿ ಆಂಕರ್ ಹೂಡಿಕೆದಾರರಿಗೆ (ಆಂಕರ್ ಇನ್‌ವೆಸ್ಟ್‌ಮೆಂಟ್ ಪೋರ್ಷನ್) ಹಂಚಿಕೆ ಮಾಡಲಾಗುತ್ತದೆ. ಆಂಕರ್ ಇನ್‌ವೆಸ್ಟ್‌ಮೆಂಟ್ ಪೋರ್ಷನ್‌ನಲ್ಲಿ ಒಂದು ವೇಳೆ ನಿರೀಕ್ಷಿತ ಕಡಿಮೆ ಚಂದಾದಾರರಾದಲ್ಲಿ ಉಳಿದ ಈಕ್ವಿಟಿ ಷೇರುಗಳನ್ನು ಕ್ಯೂಐಬಿ ಭಾಗಕ್ಕೆ ಸೇರ್ಪಡೆಗೊಳಿಸಬಹುದಾಗಿದೆ ಎಂದರು.

ಶೋಭಾಗೆ ಪಿಎಚ್.ಡಿ
ಬೆಂಗಳೂರು: ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಕೆ. ಶೋಭಾ ಅವರು ಮಂಡಿಸಿದ 'ಇನ್‌ವಿಟ್ರೋ ಸ್ಟಡೀಸ್ ಇನ್ಸ್ ನೋಥಾಪೋಡೈಟಿಸ್ ಫಿಯೋಟಿಡಾ (ವೈಟ್) ಸ್ಲೀಮರ್-ಎ ತ್ರೆಟನ್ಡ್ ಸ್ಪೀಷೀಸ್ ಆಫ್ ವೆಸ್ಟರ್ನ್ ಗಾಟ್ಸ್‌' ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಬೆಂಗಳೂರು ವಿವಿಯ ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಡಾ.ಡಿ.ಎಚ್. ತೇಜಾವತಿ ಇವರಿಗೆ ಮಾರ್ಗದಶಕರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement