ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೇಕಲ್: ಶೇ. 62.30 ಮತದಾನ

Srinivasa Murthy VN
Updated On : 19 Apr 2014, 1:09 am

ಆನೇಕಲ್ಲು: ಆನೇಕಲ್ ತಾಲೂಕಿನ 320 ಮತಗಟ್ಟೆಗಳಿಂದ ಶೇ. 62.30 ಮತದಾನವಾಗಿದೆ. ಒಟ್ಟು ಮತಗಳು 3,05,750 ಆಗಿದ್ದು ಅವುಗಳ ಪೈಕಿ 1,90,478 ಮತಗಳು ಚಲಾವಣೆಯಾಗಿದೆ ಎಂದು ಉಪಚುನಾವಣಾಧಿಕಾರಿ ಎಚ್. ಎನ್. ಶಿವೇಗೌಡ ತಿಳಿಸಿದ್ದಾರೆ. 1,20,775 ಪುರುಷರು ಹಾಗೂ 87,693 ಮಹಿಳೆಯರು  ಮತ್ತು ಲೈಂಗಿಕ ಅಲ್ಪ ಸಂಖ್ಯಾತರು 10 ಮತದಾನದಲ್ಲಿ ಪಾಲ್ಗೊಂಡಿದ್ದಾರೆ.  ತಾಲೂಕಿನ ಅರೆನೂರಿನಲ್ಲಿ (ಬೂತ್ ಸಂಖ್ಯೆ 168) ಅತಿ ಹೆಚ್ಚು ಅಂದರೇ 541 ಮತಗಳ ಪೈಕಿ 488 ಮತಗಳು ಚಲಾವಣೆಯಾಗಿದ್ದು ಶೇ. 90 ದಾಖಲೆಯಾಗಿದೆ. ಅಂತೆಯೇ ಬೂತ್ ಸಂಖ್ಯೆ 74 ಶಾಂತಿಪುರದ ವಡ್ಡರ ಪಾಳ್ಯದಲ್ಲಿ 679 ಮತಗಳಿದ್ದು ಕೇವಲ 224 ಮತಗಳು ಶೇ. 33 ಚಲಾವಣೆಯಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ನೀಡಿದ ಸಹಕಾರಕ್ಕೆ  ಶಿವೇಗೌಡ ಕೃತಜ್ಞತೆ ಸಲ್ಲಿಸಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ  ಶೇ.82
ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಮತದಾನದಲ್ಲಿ ಶೇ.81.96 ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ್ ಕೇಶವಮೂರ್ತಿ ತಿಳಿಸಿದ್ದಾರೆ.  96914 ಪುರುಷ ಮತದಾರರಿದ್ದು ಅವರಲ್ಲಿ 81176 ಮಂದಿ ಮತಚಲಾಯಿಸಿ ಶೇ. 83.76 ರಷ್ಟು ಹಾಗೂ 94306 ಮಹಿಳಾ ಮತದಾರರಿದ್ದು ಅವರಲ್ಲಿ 75557 ಮಂದಿ ತಮ್ಮ ಮತ ಚಲಾಯಿಸಿ ಶೇ.81.11 ರಷ್ಟು ಮತದಾನವಾಗಿದೆ.  ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಶಾಂತರೀತಿಯ ಮತದಾನವಾಗಿದೆ ಎಂದು ತಹಸೀಲ್ದಾರ್ ತಿಳಿಸಿದರಲ್ಲದೆ ತೂಬಗೆರೆ ಹೋಬಳಿ ಮತಗಟ್ಟೆಗಳಲ್ಲಿನ ಮತಯಂತ್ರಗಳು ಗುರುವಾರ ರಾತ್ರಿ 10.30 ರ ಹೊತ್ತಿಗೆ ಬಂದ ಕಾರಣ ಚುನಾವಣೆ ಬಗ್ಗೆ ಅಂಕಿ ಅಂಶ ಸಂಗ್ರಹಿಸಲು ವಿಳಂಬವಾಗಿದೆ ಎನ್ನಲಾಗಿದೆ.  ದೇವನಹಳ್ಳಿ ತಾಲೂಕು ಪಂಡಿತಪುರದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಕುಟುಂಬದವರು ಮತಚಲಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement