ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಡವರ ಏಳಿಗೆಗೆ ಶ್ರಮಿಸಿ ಕಾಯಕ ಧರ್ಮ ಪಾಲಿಸಿ: ಶಾಂತಮುನಿ ಶ್ರೀ

Srinivasa Murthy VN
Updated On : 2 Aug 2014, 11:49 am

ದೊಡ್ಡಬಳ್ಳಾಪುರ: ಬಡವರ ಏಳಿಗೆಗೆ ಶ್ರಮಿಸಿ ಕಾಯಕ ಧರ್ಮವನ್ನು ಪಾಲಿಸಬೇಕಾದ್ದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯ ಎಂದು ಶಿವಗಂಗೆಯ ಮೇಲಣಗವಿ ಮಠದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ದೊಡ್ಡಬಳ್ಳಾಪುರ ತಾಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಬಸವಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾವಂತರಾಗಿ, ಉತ್ತಮ ಉದ್ಯೋಗಿಗಳಾಗಿ ಉನ್ನತ ಹುದ್ದೆಗೆ ಹೋದ ನಂತರ ತಾವು ಬೆಳೆದ ಪರಿಸರದಲ್ಲಿನ ಬಡವರ ಏಳಿಗೆಗೆ ಶ್ರಮಿಸಬೇಕು. 12ನೇ ಶತಮಾನದಲ್ಲಿ ಬಸವಣ್ಣರಾದಿಯಾಗಿ ಅನೇಕ ಶಿವಶರಣರು ಸಾರಿದ ಸಮಾನತೆ, ಕಾಯಕ ಧರ್ಮ ನಮ್ಮ ಉಸಿರಾಗಿರಬೇಕು. ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನಗಳೇ ಯಶಸ್ಸಿನ ಮೆಟ್ಟಿಲು ಎಂದು ಅವರು ಅಭಿಪ್ರಾಯಪಟ್ಟರು.
ತಾಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ನ ಗೌ.ಅಧ್ಯಕ್ಷ ಎಚ್.ಜಿ. ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬಿ.ವಿ. ಬಸವರಾಜು, ಕೋಶಾಧ್ಯಕ್ಷ ಕೆ.ಎಚ್. ಪ್ರಸನ್ನ, ಮುಖಂಡ ಜಿ.ಎಸ್. ಉಮಾಶಂಕರ್, ನಿರ್ದೇಶಕರಾದ ಎಸ್. ದಯಾನಂದ್, ಟಿ.ಎಸ್. ಮಹದೇವ್, ಆರ್. ದಯಾನಂದಸ್ವಾಮಿ, ಹೋಟೆಲ್ ರಾಜು, ಶಿವಾನಂದಪ್ಪ, ಎಸ್. ಪ್ರಕಾಶ್, ಪಿ.ಸಿ. ರಾಜಣ್ಣ, ಜೆ.ವೈ. ಮಲ್ಲಪ್ಪ, ಪಾಪಣ್ಣ ಸೇರಿದಂತೆ ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು, ಅಕ್ಕನ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement