ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮುಕ್ತ ವಿಶ್ವವಿದ್ಯಾಲಯದ ಪದವಿ ಪೂರಕ ಪರೀಕ್ಷೆ

Srinivasa Murthy VN
Updated On : 4 Aug 2014, 12:09 pm

ರಾಮಗನರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪದವಿ ಪೂರಕ ಪರೀಕ್ಷೆಗಳು 2014ರ ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ನಡೆಯಲಿದ್ದು, ದಂಡ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಪಾವತಿಸಲು ಸೆ.6 ಕಡೆ ದಿನವಾಗಿರುತ್ತದೆ. ರು.200 ರ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಸೆ.15 ಕಡೆಯ ದಿನ. ಪ್ರಥಮ ಮತ್ತು ದ್ವಿತಿಯ ಬಿ.ಎ, ಬಿ.ಕಾಂ ತರಗತಿಗಳ ಪೂರ್ಣ ಪರೀಕ್ಷೆ ಹಾಗೂ 5 ಮತ್ತು ಅದಕ್ಕೂ ಹೆಚ್ಚಿನ ಪತ್ರಿಕೆಗಳಿಗೆ ರು.850, 1 ಪತ್ರಿಕೆಗೆ ರು.450, 2ಕ್ಕೆ ರು.500, 3ಕ್ಕೆ ರು.600, 4 ಪತ್ರಿಕೆಗಳಿಗೆ ರು.700 ಪರೀಕ್ಷಾ ಶುಲ್ಕವಿದ್ದು, ಮೂರನೇ ಬಿ.ಎ, ಬಿ.ಕಾಂ ತರಗತಿಗಳಿಗೆ ಪೂರ್ಣ ಪರೀಕ್ಷೆ, 5 ಮತ್ತು ಅದಕ್ಕೂ ಹೆಚ್ಚಿನ ಪತ್ರಿಕೆಗಳಿಗೆ ರು.950, 1 ಪತ್ರಿಕೆಗೆ ರು.450, 2ಕ್ಕೆ ರು.500, 3ಕ್ಕೆ ರು.600, 4 ಪತ್ರಿಕೆಗಳಿಗೆ ರು.700 ಪರೀಕ್ಷಾ ಶುಲ್ಕ ಪಾವತಿಸಬೇಕಿರುತ್ತದೆ. ಹೆಚ್ಚಿನ ವಿವರಗಳಿಗೆ ಕ.ರಾ.ಮು.ವಿ. ವೆಬ್‌ಸೈಟ್ ಅಥವಾ ರಾಮನಗರ ಪ್ರಾದೇಶಿಕ ಕೇಂದ್ರ ಕಚೇರಿ ದೂ.080-27274443, ಮೊ.9620973666 ಸಂಪರ್ಕಿಸಬಹುದು.

10 ರೊಳಗೆ ಪ್ರಥಮ ಡಿ.ಇಡಿ ಕೋರ್ಸ್‌ಗೆ ದಾಖಲಾತಿ
ರಾಮಗನರ: 2014-15ನೇ ಸಾಲಿಗೆ ಪ್ರಥಮ ಡಿ.ಇಡಿ ಕೋರ್ಸ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯು ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಮನಗರ ನೋಡಲ್ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆದು ಆ.10 ರೊಳಗೆ ಪ್ರಥಮ ಡಿ.ಇಡಿ ಕೋರ್ಸ್‌ಗೆ ದಾಖಲಾತಿ ಪಡೆಯುವಂತೆ ಡಯಟ್‌ನ ಉಪ ನಿರ್ದೇಶಕರು (ಅಭಿವೃದ್ಧಿ) ತಿಳಿಸಿದ್ದಾರೆ.

ತಾ.ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ಸಭೆ
ರಾಮಗನರ: ಆಗಸ್ಟ್ 26ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುವ ರಾಮನಗರ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲು ಆ.5ರ ಸಂಜೆ 4ಕ್ಕೆ ಸಭೆ ನಡೆಯಲಿದೆ. ತಾಲೂಕಿನ ಸಾಹಿತ್ಯಾಸಕ್ತರು, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎಲ್ಲಾ ಕನ್ನಡಪರ ಚಿಂತಕರು ಈ ಸಭೆಯಲ್ಲಿ ಭಾಗವಹಿಸಿ, ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು  ಕಸಾಪ ತಾಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಕೋರಿದ್ದಾರೆ.

ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ
ರಾಮಗನರ: ಆ.26ರಂದು ನಡೆಯುವ ರಾಮನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರತರಲಾಗುತ್ತಿರುವ ಸ್ಮರಣ ಸಂಚಿಕೆಗೆ ತಾಲೂಕಿಗೆ ಸಂಬಂಧಪಟ್ಟ ಇತಿಹಾಸ, ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಪಟ್ಟ ಲೇಖನ, ಕವನ, ಬರಹಗಳನ್ನು ಸಂಗ್ರಹಿಸಲಾಗುತ್ತಿದೆ. ತಾಲೂಕಿನ ಲೇಖಕರು, ಕವಿಗಳು, ಬರಹಗಾರರು ತಮ್ಮ ಲೇಖನಗಳನ್ನು ಆ.5ರೊಳಗೆ ಕಳುಹಿಸುವಂತೆ ಗೌರವ ಕಾರ್ಯದರ್ಶಿ ಬಿ.ಟಿ. ಕೃಷ್ಣಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಚಿಕೆಯ ಸಂಪಾಕದ ರಮೇಶ್ ಮೊ.9900269083 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement