ಸೂಲಿಬೆಲೆ: ಸೂಲಿಬೆಲೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಕೊರೆದು ಹಾಗೇ ಬಿಟ್ಟಿರುವ ಕೊಳವೆ ಬಾವಿಗಳನ್ನು ಆ.14 ರೊಳಗೆ ಮುಚ್ಚುವಂತೆ ಸೂಲಿಬೆಲೆ ಗ್ರಾಪಂ ಆದೇಶ ನೀಡಿದೆ.ಸೂಲಿಬೆಲೆ ಗ್ರಾಪಂ ವ್ಯಾಪ್ತಿಯ ರಾಂಪುರ, ಕದನಪುರ ಗ್ರಾಮಗಳಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಚಾಲನೆಯಲ್ಲಿರುವ ಮತ್ತು ವಿಫಲವಾಗಿರುವ ಕೊಳವೆ ಬಾವಿಗಳ ಮಾಹಿತಿಯನ್ನು ಬಾವಿಗಳ ಮಾಲೀಕರು ಕಡ್ಡಾಯವಾಗಿ ಗ್ರಾಪಂಗೆ ನೀಡಬೇಕು. ವಿಫಲವಾಗಿರುವ ಕೊಳುವೆಬಾವಿಗಳು ಇದ್ದಲ್ಲಿ ಆ.14 ರೊಳಗೆ ಮುಚ್ಚಿ ಈ ಬಗ್ಗೆ ಗ್ರಾಪಂ ಮಾಹಿತಿಯನ್ನು ನೀಡಬೇಕು. ತಪ್ಪಿದಲ್ಲಿ ಅಂಥ ಜಮೀನು ಮಾಲೀಕರಿಗೆ ರು.5000 ಸಾವಿರ ದಂಡವನ್ನು ವಿಧಿಸಲಾಗುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಆ.15 ರ ನಂತರ ಮುಚ್ಚದೇ ಹಾಗೇ ಬಿಟ್ಟಿರುವ ಕೊಳವೆ ಬಾವಿಗಳ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ರು.250 ಬಹುಮಾನ ನೀಡಲಾಗುವುದು ಎಂದು ಪಿಡಿಒ ಸುಂದರ್ ತಿಳಿಸಿದ್ದಾರೆ.