ಬೆಂಗಳೂರು ಗ್ರಾಮಾಂತರ

ಒಂಟಿ ಮಹಿಳೆ ಮೇಲೆ ದಾಳಿ ಮಾಡಿದವರ ಬಂಧನ

ದೊಡ್ಡಡಬಳ್ಳಾಪುರ:  ದೊಡ್ಡಬಳ್ಳಾಪುರ ಉಪವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಸರಹದ್ದಿನಲ್ಲಿ ಬರುವ ಅದ್ದೆ ಶ್ರೀನಿಧಿ ಲೇಔಟ್ನಲ್ಲಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಮಹಿಳೆ ಮೇಲೆ ದಾಳಿ ಮಾಡಿ ಹಣ-ಆಭರಣ ದೋಚಿದ್ದ ಸುಲಿಗೆಕೋರರನ್ನು ಬಂಧಿಸುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಒಡಿಶಾ ರಾಜ್ಯದ ಜಗತ್ಪುರ ಜಿಲ್ಲೆ ಮೂಲದ ಮಹ್ಮದ್ ಬಿಲಾಲ್(22) ಮತ್ತು ಬೆಂಗಳೂರಿನ ರವಿ(20) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಪ್ರಕರಣದ ವಿಚಾರಣೆಯಲ್ಲಿ ತಾವೇ ಸುಲಿಗೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಬಂಧಿತರಿಂದ ದೋಚಿದ್ದ ಎಲ್ಲ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಭರಣಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಡಿವೈಎಸ್ಪಿ ಕೋನಪ್ಪರೆಡ್ಡಿ ತಿಳಿಸಿದ್ದಾರೆ.
ಘಟನೆ ವಿವರ: ಶ್ರೀನಿಧಿ ಲೇಔಟ್ನಲ್ಲಿನ ಮನೆಯಲ್ಲಿ ವಾಸವಾಗಿರುವ ತೇಜಸ್ವಿನಿ ಎಂಬಾಕೆ ತನ್ನ ಕಾರಿನಲ್ಲಿ ಬಂದು ನೆಲಮಹಡಿಯಲ್ಲಿ ಕಾರು ನಿಲ್ಲಿಸಿ ಮೊದಲ ಮಹಡಿಯಲ್ಲಿರುವ ತನ್ನ ಮನೆಯ ಬಾಗಿಲು ತೆಗೆಯುತ್ತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಹೆದರಿಸಿ ಮನೆಯ ಒಳಗೆ ನುಗ್ಗಿದ್ದಾರೆ. ಆ ವೇಳೆ ಮಾರಕಾಸ್ತ್ರಗಳನ್ನು ತೋರಿಸಿ ಆಕೆಯ ಕೈಕಾಲು ಹಿಡಿದು ಆಕೆಯ ಬಳಿ ಇದ್ದ ಚಿನ್ನದ ಬಳೆ, ಚಿನ್ನದ ಸರ, ಎರಡು ಉಂಗುರ, ಎರಡು ಜೊತೆ ಕಿವಿಯೋಲೆ, ಒಂದು ಕ್ಯಾಮರಾ ಮತ್ತು 2 ಸಾವಿರ ನಗದು ದೋಚಿದ್ದರು. ಮಹ್ಮದ್ ಬಿಲಾಲ್ ತೇಜಸ್ವಿನಿ ಅವರಿಂದ ಎಟಿಎಂ ಕಾಡ್ಅನ್ನು ಕಸಿದುಕೊಂಡು ಪಿನ್ ನಂಬರ್ ಕೇಳಿ ಬರೆದುಕೊಂಡು ಆಕೆಯ ಕಾರ್ನ ಕೀ ಪಡೆದು ಅದರಲ್ಲೇ ಹೊರಹೋಗಿ 25 ಸಾವಿರ ಹಣ ಪಡೆದು ಹಿಂತಿರುಗಿ ಬಂದು ಕಾರ್ಡ್ ಮತ್ತು ಕಾರ್ ಕೀ ಹಿಂತಿರುಗಿಸಿ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಇಬ್ಬರೂ  ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ತೇಜಸ್ವಿನಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಡಿವೈಎಸ್ಪಿ ಕೋನಪ್ಪರೆಡ್ಡಿ, ದೊಡ್ಡಬಳ್ಳಾಪುರ ಸಿಪಿಐ ಶಿವಾರೆಡ್ಡಿ, ರಾಜಾನುಕುಂಟೆ ಎಸೈ ಲೂಯಿರಾಮರೆಡ್ಡಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಆರೋಪಿ ಮತ್ತು ಮಾಲು ಪತ್ತೆಗಾಗಿ ತಂಡ ಒಡಿಶಾಗೆ ತೆರಳಿ ಕಾರ್ಯಾಚರಣೆ ನಡೆಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT