ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಧರ್ಮ ಉಳಿಯಬೇಕಾದರೆ ಆಚರಣೆಗಳು ಬದಲಾಗಬೇಕಿದೆ

Srinivasa Murthy VN
Updated On : 9 Feb 2014, 11:49 am

ಮಾಗಡಿ: ಜಗತ್ತಿನಲ್ಲಿ ಧರ್ಮ ಉಳಿಯಬೇಕಾದರೆ ಆಚರಣೆಗಳು ಬದಲಾಗಬೇಕಿದೆ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮಿಜೀ ನುಡಿದರು.
ಅವರು ಮಾಗಡಿ ತಾಲೂಕಿನ ಬೆಳಗುಂಬ ಪಂಚಾಯ್ತಿ ವ್ಯಾಪ್ತಿಯ ಬ್ಯಾಡರಹಳ್ಳಿಯಲ್ಲಿ ಬಸವೇಶ್ವರ ಯುವಕರ ಜೀರ್ಣೋದ್ಧಾರ ಸಮಿತಿ  ಏರ್ಪಡಿಸಿದ್ದ ನೂತನ ಬಸವೇಶ್ವರಸ್ವಾಮಿ ದೇವಾಲಯದ ಉದ್ಘಾಟನೆ, ಗುರುವಂದನೆ ಹಾಗೂ  ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಭಕ್ತಿಯ ಪ್ರತೀಕವೇ ಗುರುವಂದನೆ, ಕೇವಲ ಧಾರ್ಮಿಕ ಚಿಂತನೆ ಮಾಡಿದರೆ ಸಾಲದು, ಆಚರಣೆಗೆ ಬರಬೇಕು.   ಯುವಕರು ಭವ್ಯ ಭಾರತ ದೇಶದ ಸಂಪತ್ತು.
ಯುವಕರು ದುಡಿಯುವುದನ್ನು ಉಸಿರಾಗಿಸಿಕೊಳ್ಳಬೇಕು. ಸಂಸ್ಕಾರವಂತರಾಗಿ ಬಾಳನ್ನು ಹಸನು ಮಾಡಿಕೊಳ್ಳಬೇಕು. ಕುಡಿತದಿಂದ ಕುಟುಂಬ ನಾಶವಾಗುತ್ತದೆ.ಜತೆಗೆ ಸಮಾಜವು ಸಹ ಕ್ಷೀಣಿಸುತ್ತದೆ. ಯುವಕರು ದುಶ್ಚಟಗಳಿಂದ ದೂರ ಉಳಿಯಬೇಕು. ವಿದ್ಯಾವಂತರಾಗಬೇಕು. ಸಂಸ್ಕಾರವಂತರಾಗಬೇಕು. ಸಂಸ್ಕೃತಿ, ಪರಂಪರೆ, ಧರ್ಮದ ಸಾಮರಸ್ಯ ಕಾಪಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ಸಿದ್ಧಗಂಗಾ ಮಠ ಮಾದರಿ: ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯಗಳಿಗೆ ಹೋಗುವುದರಿಂದ ಮನುಷ್ಯನಿಗೆ ಮನಶಾಂತಿ ಲಭಿಸುತ್ತದೆ. ಕುಗ್ರಾಮ ಬ್ಯಾಡರಹಳ್ಳಿಯಲ್ಲಿ ಸುಂದರವಾದ ಬಸವೇಶ್ವರ ದೇವಾಲಯ ನಿರ್ಮಿಸುವ ಮೂಲಕ ಸುಜ್ಞಾನದೆಡೆಗೆ ನಡೆದಿದ್ದಾರೆ. ಪ್ರತಿಯೊಬ್ಬರು  ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಮನುಷ್ಯನಿಗೆ ಮುಕ್ತಿ ಸಿಗುತ್ತದೆ. ಕರ್ನಾಟಕ ರತ್ನ ಡಾ.ಶಿವಕುಮಾರಸ್ವಾಮಿಜೀ ಹಳ್ಳಿ ಮಕ್ಕಳಿಗೆ ಅನ್ನ, ಜ್ಞಾನ, ವಸತಿ ನೀಡುವ ಮೂಲಕ ಸರ್ಕಾರಕ್ಕೆ ಸಿದ್ಧಗಂಗಾ ಮಠ ಮಾದರಿಯಾಗಿದೆ. ಡಾ.ಶಿವಕುಮಾರಸ್ವಾಮಿ ಅವರ ಮಾರ್ಗದಲ್ಲಿ ನಡೆದರೆ ಮಾತ್ರ ಗುರುವಂದನೆ ಸಾರ್ಥಕವಾಗುತ್ತದೆ. ಹೃದಯದ ಅಂತರಂಗವನ್ನು ಶುದ್ಧಿ ಮಾಡಿಕೊಂಡು ಸತ್ಯದ ಮಾರ್ಗದಲ್ಲಿ ನಡೆಯೋಣ ಎಂದರು.
 ಗದ್ದುಗೆಮಠದ ಮಹಂತಸ್ವಾಮೀಜಿ ಮಾತನಾಡಿ ಐಕ್ಯತೆಯ ಪ್ರತೀಕ ದೇವಾಲಯಗಳು. ಹಿರಿಯರು, ಕಿರಿಯರಿಗೆ ಸಂಸ್ಕಾರ, ಸಂಸ್ಕೃತಿಯ ಪರಂಪರೆ ಮಾರ್ಗದರ್ಶನ ನೀಡಬೇಕು ಎಂದರು.  ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಸದಸ್ಯ ಎ.ಮಂಜು. ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಜಿ.ಪಂ. ಸದಸ್ಯ ವಿಜಯಕುಮಾರ್, ಸಮಾಜ ಸೇವಕ ಕೆ. ಬಾಗೇಗೌಡ, ಜಿ.ಪಂ. ಮಾಜಿ ಸದಸ್ಯ ಶಿವರುದ್ರಪ್ಪ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಗುತ್ತಿಗೆದಾರ ರೇಣುಕಪ್ಪ, ಬಿ.ಎಸ್. ಪುಟ್ಟರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement