ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೂಲಿಬೆಲೆಯಲ್ಲಿ ಬಂಪರ್ ಆಲೂ ಬೆಳೆಗಾರ

Srinivasa Murthy VN
Updated On : 9 Feb 2014, 11:51 am

ಸೂಲಿಬೆಲೆ: ಹವಾಮಾನ ವೈಪರಿತ್ಯ, ಅಂತರ್ಜಲ ಕುಸಿತದಂತ ಸಮಸ್ಯೆಗಳಿಂದ ಕೈಗೆ ಬೆಳೆ ಸಿಗದೆ ಕೈ ಸುಟ್ಟುಕೊಂಡಿರುವ ಆಲೂಗಡ್ಡೆ ಬೆಳೆಗಾರರ ನಿದ್ದೆಗೆಡಿಸುವ ರೀತಿಯಲ್ಲಿ ಸೂಲಿಬೆಲೆಯಲ್ಲೊಬ್ಬ ರೈತ ಬಂಪರ್ ಬೆಳೆದಿದ್ದಾನೆ.
ನಾಲ್ಕಾರು ಆಲೂಗಡ್ಡೆಗಳನ್ನು ಹಾಕಿದರೆ ಒಂದು ಕೆಜಿ ತೂಗುವುದನ್ನು ನೋಡಿದ್ದೀರಿ. ಆಗರೇ ಈತ ಬೆಳೆದ  ಒಂದೊಂದು ಗಡ್ಡೆಯೂ ಒಂದು ಕೆಜಿಗಿಂತಲೂ ಹೆಚ್ಚಾಗಿ ತೂಗುತ್ತೆ ಅಂದರೇ ನೀವು ನಂಬಲೆಬೇಕು. ಇಂಥ  ಬೆಳೆಯನ್ನು ಬೆಳೆದ ಸೂಲಿಬೆಲೆಯ ರೈತ ಜನಾರ್ದನ್ ರೆಡ್ಡಿ ಈಗ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ಸೂಲಿಬೆಲೆಯ ಹೊರ ವಲಯದಲ್ಲಿ 2 ಎಕರೆ ಕೃಷಿ ಜಮೀನು ಹೊಂದಿರುವ ಜನಾರ್ದನ್ ರೆಡ್ಡಿ ಇಂಥ  ಬೆಳೆಯನ್ನು ಬೆಳೆದ ರೈತ. ರಾಜಕಾರಣದ ಜೊತೆಗೆ ವ್ಯವಸಾಯದ ವೃತ್ತಿಯನ್ನು ಮಾಡುತ್ತಿರುವ ಈತ ತನ್ನ ಜಮೀನಲ್ಲಿರುವ ಅಲ್ಪ ಪ್ರಮಾಣದ ನೀರನ್ನೇ ಬಳಿಸಿ ಕೆಲ ಬೆಳೆಗಳನ್ನು ಬೆಳೆದಿದ್ದರು. ಈ ಬಾರಿ ಸಾವಯಗೊಬ್ಬರ ಬಳಿಸಿಕೊಂಡು ಹಾಕಿದ್ದ ಆಲೂಗಡ್ಡೆ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಇಳುವರಿ ಪಡೆದಿದ್ದಾರೆ. ಒಂದೊಂದು ಆಲೂಗಡ್ಡೆಯೂ ಒಂದು ಕೆಜಿಗಿಂತಲೂ ಹೆಚ್ಚಿನ ತೂಕ ಬರುತ್ತಿದೆ. ಒಂದೊಂದು ಗಡ್ಡೆಯೂ ಕೈ ಮುಷ್ಟಿಗೆ ಸಿಗುವುದಿಲ್ಲ.
ಪ್ರತಿ ಗಿಡದಲ್ಲಿ ಬಾರಿ ಗಾತ್ರದ ನಾಲ್ಕಾರು ಗಡ್ಡೆಗಳು ಸಿಗುತ್ತಿರುವುದು  ವಿಶೇಷವಾಗಿದೆ. ಮೂರುವರೆ ತಿಂಗಳ ಬೆಳೆಯಾಗಿರುವ ಆಲೂ ಮುಕ್ತಾಯದ ಹಂತದಲ್ಲಿ ಗಿಡ ತನ್ನ ನೈಜ ಹಸಿರನ್ನು ಕಳೆದುಕೊಂಡು ಒಣಗಲಾರಂಭಿಸುತ್ತದೆ. ಈ ತೋಟದಲ್ಲಿ ಮೂರುವರೆ ತಿಂಗಳಾದರೂ ಗಿಡ ತನ್ನ ಹಸಿರನ್ನು ಕಳೆದುಕೊಂಡಿಲ್ಲ. ಈತ ಬೆಳೆದ ಜಮೀನಿನಲ್ಲಿ ಅಂದಾಜು 700 ರಿಂದ 800 ತುಂಡು (ಒಂದು ತುಂಡ ಅಂದರೆ 52 ಕೆಜಿಯಷ್ಟು) ಸಿಗುವ ನಿರೀಕ್ಷೆಯಿದೆ. ತಾಲೂಕಿನಲ್ಲಿಯೇ ಅಲ್ಲ, ಜಿಲ್ಲೆಯಲ್ಲೂ ಇಂಥ ಬೆಳೆಯನ್ನು ಕಂಡಿಲ್ಲ ಎಂದು ರೈತರು ಹುಬ್ಬೇರಿಸುವಂತ ಬೆಳೆ ಸಿಕ್ಕಿದೆ. ಬೆಳೆಗಿಂತ ಜನರಿಗೆ ಆಕರ್ಷಣಿಯಾಗಿರುವುದು ಗಡ್ಡೆಯಲ್ಲಿನ ಗಾತ್ರ.

ಇವರೇನಂತಾರೆ?
ಆಲೂಗಡ್ಡೆಯಲ್ಲಿನ ಗಾತ್ರ ಜನರಿಗೆ ಆಕರ್ಷಣಿಯಾಗಿದೆ. ಸಾವಯವಗೊಬ್ಬರ ಹಾಗೂ ಸಕಾಲಕ್ಕೆ  ತೇವಾಂಶವನ್ನು ನೀಡಿದ್ದು ಉತ್ತಮ ಬೆಳೆ ಕಾರಣವಾಯಿತು ಎಂತ ಅನಿಸುತ್ತಿದೆ. ಸಾವಯವ ಗೊಬ್ಬರ ರೈತನ  ಕೈ ಬಿಡುವುದಿಲ್ಲ. ಬೆಳೆಗೆ ಆರೈಕೆ ಮುಖ್ಯ.
- ಜನಾರ್ದನ್ ರೆಡ್ಡಿ, ರೈತ

ಗ್ರಾಮಾಂತರ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿಯೇ ಸೂಲಿಬೆಲೆಯ ಬೆಲೆಯ ಆಲೂಗಡ್ಡೆ ಉತ್ತಮ ಹೆಸರಿದೆ. ಭಾರಿ ಗಾತ್ರದ ಆಲೂಗಡ್ಡೆಯನ್ನು ಬೆಳೆದಿರುವುದು ಅಪರೂಪ.
- ಪರಮೇಶ್, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement