ದೇವನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಚಿತ್ರಕಲಾ ಪ್ರದರ್ಶನ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಂ. ಗ್ರಾ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಿತ್ರಕಲೆ, ಸಂಗೀತ, ನೃತ್ಯ ಹಾಗೂ ನಾಟಕ ಶಿಕ್ಷಕರ ಪ್ರತಿಭಾ ಅನಾವರಣ ಅಲ್ಲೆದ ಜಿಲ್ಲಾ ಮಟ್ಟದ ಮಕ್ಕಳ ಚಿತ್ರಕಲಾ ಪ್ರದರ್ಶನ ಆಕೃತಿ-2014 ಇಲ್ಲಿನ ಗುರುಭವನದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಸರ್ಕಾರ ಮಾಡಬೇಕಾದ ಮಕ್ಕಳ ಕಲೆಯ ಬಗ್ಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವನ್ನು ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಸಂಘದವರು ಆಯೋಜಿಸಿರುವುದು ಅಭಿನಂದನೀಯ ಎಂದರಲ್ಲದೆ ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಆಯೋಜಿಸುವ ಇಂತಹ ಎಲ್ಲ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರಲ್ಲದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು ಅವರಲ್ಲಿನ ಯಾವುದೇ ರೀತಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಹ ಮುಖ್ಯವಾಗಿರುತ್ತದೆ ಎಂದರು.
ಸಮಾರಂಬದ ಉಧ್ಘಾಟನೆಯನ್ನು ಹಿರಿಯ ಚಿತ್ರನಟ ಹಾಗೂ ಕಲಾ ತಪಸ್ವಿ ರಾಜೇಶ್ ನೆರವೇರಿಸಿ ನಮ್ಮ ಭಾರತ ಅನೇಕ ಮಹಾ ಚಿತ್ರಕಲಾವಿದರಿಗೆ ಜನ್ಮಕೊಟ್ಟ ಭೂಮಿ, ಕಲೆಗೆ ಎಂದೂ ಸಾವಿಲ್ಲ. ಅನೇಕ ಚಿತ್ರಕಲಾವಿದರು ಸಾವನ್ನಪ್ಪಿದ್ದರೂ ಅವರ ಚಿತ್ರಕಲೆಗಳು ಜೀವಂತವಾಗಿವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಉಪನಿರ್ದೇಶಕರ ಕಚೇರಿಯ ಶಿಕ್ಷಣ ಅಧಿಕಾರಿ ನಾಗರತ್ನಮ್ಮ ವಹಿಸಿದ್ದರು. ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಸಿ.ಚಂದ್ರಶೇಖರ್, ಪತ್ರಕರ್ತ ಹುಣಸವಾಡಿ ರಾಜನ್, ರಂಗಕರ್ಮಿ ಚಂದ್ರಕುಮಾರ್ ಸಿಂಗ್, ಬಿಇಒ ಮುನಿರಾಜು ಮಾತನಾಡಿದರು. ದೊಡ್ಡಬಳ್ಳಾಪುರ ರುಮಾಲೆ ನಾಗರಾಜು ಉಪಸ್ಥಿತರಿದ್ದರು.