ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೌಡಿ ಪಟ್ಟಿಯಲ್ಲಿರುವ 16 ಮಂದಿ ವಶಕ್ಕೆ, ವಿಚಾರಣೆ

Srinivasa Murthy VN
Updated On : 11 Feb 2014, 12:31 pm

ನೆಲಮಂಗಲ : ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಪಟ್ಟಿಯಲ್ಲಿರುವ 16 ಜನ ರೌಡಿಗಳನ್ನು ಭಾನುವಾರ ರಾತ್ರಿ ಇಡೀ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ತಿಳಿಸಿದ್ದಾರೆ.
ಬಂದಿತ 16 ರೌಡಿಗಳನ್ನು  ಉಮಾಶಂಕರ್, ಜಯರಾಮಯ್ಯ, ಶ್ರೀಧರ್, ರವಿ, ನಟರಾಜನಾಯಕ, ಕೆಂಪೇಗೌಡ, ಲಕ್ಷ್ಮಣಗೌಡ, ಚೇತನ್ಕುಮಾರ್, ಅರಸಪ್ಪ, ಚಂದ್ರಶೇಖರ್, ಮುನಿರಾಜು, ಮೋಹನ್ಕುಮಾರ್, ನಾಗರಾಜು, ಮಂಜುನಾಥ, ನಾಗರಾಜು, ಹೇಮಂತ್ಕುಮಾರ್ ಎಂದು ಗುರುತಿಸಲಾಗಿದೆ.
ತಾಲೂಕಿನ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೆಲ ರೌಡಿಗಳು ಮಾರಕಾಸ್ತ್ರ, ರಿವಾಲ್ವರ್ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದೇವೆ. ರೌಡಿ ಪಟ್ಟಿಯಲ್ಲಿರುವವರು ಯಾವ ರೀತಿ ಜೀವನ ನಿರ್ವಹಿಸುತ್ತಿದ್ದಾರೆ. ಅವರ ಚಲನ ವಲನಗಳ ಬಗ್ಗೆ ಮಾಹಿತಿ ಪಡೆದು ಅವರು ಉತ್ತಮ ನಡತೆ ಕಾಯ್ದುಕೊಳ್ಳುವಂತೆ ಹಾಗೂ ಶಾಂತಿಗೆ ಭಂಗವನ್ನುಂಟು ಮಾಡಬಾರದು ಎಂದು ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement