ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೀದಿ ಗುಡಿಸುವ ಟೆಂಡರ್ ಜಾರಿಗೆ ಒತ್ತಾಯ

Srinivasa Murthy VN
Updated On : 12 Feb 2014, 12:40 pm

ದೊಡ್ಡಬಳ್ಳಾಪುರ: ಇಲ್ಲಿನ ನಗರಸಭೆಯಲ್ಲಿ ಬೀದಿ ಕಸ ಗುಡಿಸುವ ಟೆಂಡರ್ ಪ್ರಕ್ರಿಯೆ ಅವಧಿ ಮುಗಿದಿದ್ದರೂ ಅದನ್ನು ಜಾರಿಗೊಳಿಸುತ್ತಿಲ್ಲ. ಬದಲಿಗೆ ಹಿಂದಿನ ಗುತ್ತಿಗೆದಾರರ ಹೆಸರಿನಲ್ಲಿ ಬಿಲ್ಲು ಪಾವತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾದಿಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ನರಸಿಂಹ ಮತ್ತು ಕಾರ್ಯದರ್ಶಿ ಪಿ.ಶಂಕರ್ ಆರೋಪಿಸಿದ್ದಾರೆ.
ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ಅವರು, ನಗರಸಭೆ ಪ್ರಸ್ತುತ ಗುತ್ತಿಗೆಯಾಧಾರಿತ ಪೌರಕಾರ್ಮಿಕರ ಗುತ್ತಿಗೆಯನ್ನು ಎವಿಆರ್ ಎಂಟರ್ ಪ್ರೈಸಸ್ ಮಾಲೀಕ ಎ.ವರದರಾಜು ಅವರಿಗೆ ನೀಡಿದೆ. ಕಳೆದ 4 ವರ್ಷಗಳಿಂದ ಅವರು ಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ಸಂಬಳವನ್ನು ಸರಿಯಾಗಿ ನೀಡುತ್ತಿಲ್ಲ. ಕಾರ್ಮಿಕರಿಗೆ ಕೆಲಸಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಸಹ ಸಮರ್ಪಕ ರೀತಿಯಲ್ಲಿ ಒದಗಿಸುತ್ತಿಲ್ಲ. 35 ಕಾರ್ಮಿಕರು ಮಾಡಬೇಕಿರುವ ಕೆಲಸವನ್ನು 15 ರಿಂದ 20 ಜನರಿಂದ ಮಾಡಿಸುತ್ತಿದ್ದಾರೆ. ಇದರಿಂದಾಗಿ ಬೀದಿ ಗುಡಿಸುವ ದಲಿತ ಪೌರ ಕಾರ್ಮಿಕರಿಗೆ  ಅನ್ಯಾಯವಾಗುತ್ತಿದೆ ಎಂದಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಶಂಕುಸ್ಥಾಪನೆ
ಕನಕಪುರ: ಕನಕಪುರ ತಾಲೂಕು ಕಡಸೀಕೊಪ್ಪ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರದ ಶಂಕುಸ್ಥಾಪನೆಯನ್ನು ಕೊಳ್ಳಿಗನಹಳ್ಳಿ ಗ್ರಾಪಂ ಅಧ್ಯಕ್ಷ ಆಂಜಿನಪ್ಪ ನೆರವೇರಿಸಿದರು.  ರಾಮನಗರ ಜಿಪಂ ಬಿಡುಗಡೆ ಮಾಡಿರುವ 4.5 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಕಾಮಗಾರಿ ಇದಾಗಿದ್ದು ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ. ಕಾರ್ಯಕ್ರಮದಲ್ಲಿ ರೈತ ಮುಖಂಡ ಬಾಲಾಜಿಸಿಂಗ್, ಅನಂತರಾಮ ಪ್ರಸಾದ್, ಹಸಿರುಸೇನೆಯ ಜಗದೀಶ್ವರ ರಾವ್, ಗಣೇಶಪ್ರಸಾದ್, ಹನುಮಾನ್‌ಸಿಂಗ್, ಪಿಡಿಒ ಶಿವರಾಜು, ಕಾರ್ಯದರ್ಶಿ ಶಂಭುಲಿಂಗಯ್ಯ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement