ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಊರ್ಗೆ ನೆಂಟ್ರು ಬರ್ತಿಲ್ಲ, ಹೆಣ್ಣು ಮಕ್ಕಳಿಗೆ ವರ ಸಿಗ್ತಿಲ್ಲ...

Srinivasa Murthy VN
Updated On : 15 Jul 2014, 1:08 am

ಬೆಂಗಳೂರು: ಕಸ್ದ ವಾಸ್ನೆಗೆ ಆರೋಗ್ಯ ಕೆಡೋದು ಇರಲಿ, ಊರ್ಗೆ ನೆಂಟ್ರು ಬರ್ತಿಲ್ಲ, ಮದುವೆಗೆ ಬಂದ ಹೆಣ್ಣು ಮಕ್ಕಳಿಗೆ ವರ ಸಿಗ್ತಿಲ್ಲ. ಯಾರಿಗೇಳೋಣ ನಮ್ಗೋಳು...!?
ಇದು ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳ್ಳಿ ಗ್ರಾಮಸ್ಥರ ಅಳಲು. ಬಿಬಿಎಂಪಿ ಲಾರಿಗಳು ನಿತ್ಯ ಗುಂಡ್ಲಹಳ್ಳಿ  ಬಳಿ ಸುರಿಯುತ್ತಿರುವ ಕಸದಿಂದ ಈಗ ದುರ್ವಾಸನೆ ಬೀರತೊಡಗಿದೆ. ಇದರಿಂದ ಬೇಸತ್ತಿರುವ ಗುಂಡ್ಲಹಳ್ಳಿ ಗ್ರಾಮಸ್ಥರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಕಸದ ದುರ್ವಾಸನೆಯಿಂದ ತಾವು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಕಸದ ಕೊಂಪೆ: ಗ್ರಾಮಸ್ಥರ ಪರವಾಗಿ ರೈತ ಸಂಘದ ಕೋಲಾರ ಶಿವಪ್ಪ ಮಾತನಾಡಿ, ಮಂಡೂರು ನಂತರ ಬಿಬಿಎಂಪಿ ಈಗ ದೊಡ್ಡಬಳ್ಳಾಪುರವನ್ನು ಕಸದ ಕೇಂದ್ರವನ್ನಾಗಿ ಮಾಡಲು ಹೊರಟಿದೆ ಎಂದು ದೂರಿದರು.
ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗುಂಡ್ಲಹಳ್ಳಿ, ಚಿರೇನಹಳ್ಳಿ ಹಾಗೂ ಹುಸ್ಕೂರು ಗ್ರಾಮಗಳ ಬಳಿ ಬಿಬಿಎಂಪಿ ಲಾರಿಗಳು ನಿತ್ಯ ನೂರಾರು ಲೋಡ್ ಕಸ ತಂದು ಸುರಿಯುತ್ತಿವೆ. ಈ ಕಸದಿಂದ ಬರುತ್ತಿರುವ ದುರ್ವಾಸನೆ ಗ್ರಾಮಸ್ಥರ ನಿದ್ದೆಗೆಡಿಸಿದೆ. ಇಷ್ಟಾಗಿಯೂ ಬಿಬಿಎಂಪಿ ಅಧಿಕಾರಿಗಳು, ಕಸ ತಂದು  ಸುರಿಯಲು ಅಂಜನಾಮೂರ್ತಿನಗರ ಮತ್ತು ಕರೀಂಸೊಣ್ಣೇನಹಳ್ಳಿ ಬಳಿ ಜಾಗ ಪರಿಶೀಲನೆ ನಡೆಸಿದ್ದಾರೆ. ಪರ್ಯಾಯ ಮಾರ್ಗ ಕಂಡುಕೊಳ್ಳದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿಗೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement