ನಿರಂತರ ಅಧ್ಯಯನದಿಂದ ಮಕ್ಕಳಲ್ಲಿ ಕ್ರಿಯಾಶೀಲ ಮನಸ್ಸು ಜಾಗೃತ
ಮಾಗಡಿ: ಸಾಹಿತ್ಯದ ನಿರಂತರ ಅಧ್ಯಯನದಿಂದ ಮಾತ್ರ ಮಕ್ಕಳಲ್ಲಿ ಕ್ರಿಯಾಶೀಲ ಮನಸ್ಸು ಜಾಗೃತಗೊಳ್ಳುತ್ತದೆ ಎಂದು ಸರಸ್ವತಿ ವಿದ್ಯಾಮಂದಿರದ ಮುಖ್ಯ ಶಿಕ್ಷಕ ಡಿ.ದೇವರಾಜು ನುಡಿದರು.
ಅವರು ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವದ ಅಂಗವಾಗಿ ಇಲ್ಲಿನ ಸರಸ್ವತಿ ವಿದ್ಯಾಮಂದಿರದಲ್ಲಿ ಏರ್ಪಡಿಸಿದ್ದ ಕನ್ನಡ ನುಡಿ ಕುಣಿದಾಡುವುದೆನ್ನೆದೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಸಾಹಿತ್ಯ ಓದುವ ಅಭ್ಯಾಸದಿಂದ ದೂರ ಉಳಿಯುತ್ತಿರುವುದರಿಂದ ಕ್ರಿಯಾಶೀಲತೆ ದೂರ ಸರಿಯುತ್ತಿದ್ದು, ತುಕ್ಕು ಹಿಡಿಯುತ್ತಿದೆ ಎಂದು ವಿಷಾದಿಸಿದರು.
ಕನ್ನಡ ಭಾಷೆ ಉಳಿದ ಭಾಷೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಶಿಕ್ಷಕ ನಾಗರಾಜುಬಾವಿ ಉದಾಹರಣೆ ಸಹಿತ ವಿವರಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ. ದಯಾನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಮಬದ್ಧ ಕನ್ನಡಭಾಷೆ ಕಲಿಕೆಯಿಂದ ಭಾಷಾ ಸಂವೇದನೆ ಹೆಚ್ಚುತ್ತದೆ. ಭಾಷೆ ಉಚ್ಚರಣೆಯಿಂದಲೇ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಿದೆ. ಕನ್ನಡ ಭಾಷೆಯನ್ನು ಮಕ್ಕಳು ಗಾಢವಾಗಿ ಅಧ್ಯಯನ ಮಾಡಬೇಕು. ಪ್ರಾಚೀನನ ಪರಂಪರೆಯ ಮೌಲ್ಯತೆಗಳನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿಕೊಟ್ಟರು.
ಕಸಾಪ ಜಿಲ್ಲಾ ಸಂಚಾಲಕ ಕು.ಮು.ದಯಾನಂದ್, ಸಿದ್ದಲಿಂಗೇಶ್ವರ್, ಗಣೇಶ್ ಭಟ್, ಮಾರೇಗೌಡ, ಬದರೀನಾಥ್, ಶಿವಾನಂದ್ ಹೆಗಡೆ, ನೇತ್ರಾವತಿ ಆರ್.ಭಟ್ ಇತರರು ಹಾಜರಿದ್ದರು.
ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ
ಗೌರಿಬಿದನೂರು: ಮಂಚೇನಹಳ್ಳಿಯಲ್ಲಿ ಏರ್ಪಡಿಸಿದ್ದ ತಾಲೂಕು ಚುಟುಕ ಸಾಹಿತ್ಯ ಪರಿಷತ್ ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾ.ನಾ. ಲಕ್ಷ್ಮಣಗೌಡ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಥಮ ಸಭೆ ನೆರವೇರಿತು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷರಾಗಿ ಬಿ.ಕೆ. ಶಾಂತರಾಜು, ಅಧ್ಯಕ್ಷರಾಗಿ ಪ್ರಭಾನಾರಾಯಣಗೌಡ, ಉಪಾಧ್ಯಕ್ಷರಾಗಿ ದೀಪಾ ಆಚಾರ್ಯ, ಕಾರ್ಯದರ್ಶಿಯಾಗಿ ಎಚ್.ಎನ್. ಕಿರಣ್ಕುಮಾರ್, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಾ ನಾಯಕ್ ಹಾಗೂ ರೇಣುಕಮ್ಮ, ಖಜಾಂಚಿ ಜಿ. ವೆಂಕಟೇಶ್, ಜಂಟಿ ಕಾರ್ಯದರ್ಶಿಗಳು ತಾರಾನಾಥ್, ಇಂದಿರಮ್ಮ, ಸಂಚಾಲಕರು ರಾಣಾಪ್ರತಾಪ್, ಸಲಹಾ ಸಮಿತಿಯ ಹಿರಿಯರು ಸಾ.ನಾ.ಲಕ್ಷ್ಮಣಗೌಡ, ಎಂ.ಆರ್. ನಾಗರಾಜ್ ರಾವ್, ಎಂ.ಜಿ. ರಾಜೇಂದ್ರ ಹಾಗೂ ಸದಸ್ಯರು ಮನೋಹರ್ ಕೋಲಾರ್, ಪವನ್ ಕುಮಾರ್, ಎಂ. ಮಲ್ಲಿಕಾರ್ಜುನ್, ಆದಿನಾರಾಯಣಗೌಡ ಎಚ್.ಎಸ್. ಎಚ್.ಎ. ಚನ್ನಕೃಷ್ಣೇಗೌಡ, ನವೀನ್ ಕುಮಾರ್ ಜಿ.ಟಿ, ಡಿ. ಹರ್ಷ, ಪಾರ್ಶ್ವನಾಥ್, ಮಾಧ್ಯಮ ಪ್ರತಿ ನಿಧಿ ಚಿಗೋರ ಇದ್ದರು.