ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲಾ ವಾಹನ ಅಪಘಾತ ತಡೆಗೆ ಉಚಿತ ತರಬೇತಿ

Srinivasa Murthy VN
Updated On : 30 Jul 2014, 1:12 am

ಬೆಂಗಳೂರು: ಶಾಲಾ ವಾಹನಗಳು ಇತ್ತೀಚೆಗೆ ಹೆಚ್ಚು ಅಪಘಾತಕ್ಕೀಡಾಗುತ್ತಿದ್ದು, ಇದನ್ನು ತಡೆಗಟ್ಟುವ ಕುರಿತು ಉಚಿತ ತರಬೇತಿ ನೀಡಲಾಗುವುದು ಎಂದು ಗ್ರಾಮೀಣ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ. ನಟರಾಜು ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುರಕ್ಷತೆಗೆ ಸಂಬಂಧಿಸಿ ವಾಹನಗಳಲ್ಲಿ ಅಳವಡಿಸುವ ಉಪಕರಣಗಳನ್ನು ಪೂರೈಸಲಾಗುವುದು. ಶಾಲಾ ವಾಹನಗಳ ಅಪಘಾತ ಪೋಷಕರಿಗೆ ಹಾಗೂ ಶಾಲಾ ಆಡಳಿತ ಮಂಡಳಿಗೆ ಆತಂಕಕ್ಕೀಡು ಮಾಡಿದೆ. ಇಂಥ ಅವಘಡಗಳನ್ನು ತಪ್ಪಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಉಚಿತ ತರಬೇತಿ ನೀಡಲಾಗುವುದು. ವಾಹನ ಸುರಕ್ಷತೆಗೆ ಸಂಬಂಧಿಸಿ ಸರ್ಕಾರ ಸೂಚಿಸಿದ ಉಪಕರಣಗಳ ಅಳವಡಿಕೆ ವ್ಯವಸ್ಥೆಗೆ ಪ್ರತಿಷ್ಠಾನ ಮುಂದಾಗಿದೆ ಎಂದು ಅವರು ಹೇಳಿದರು.ಸರ್ಕಾರದ ಆದೇಶದಂತೆ ಶಾಲಾ ವಾಹನಗಳಿಗೆ ಹಳದಿ ಬಣ್ಣ, ಶಾಲಾ ಚಿಹ್ನೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅಗ್ನಿಶಾಮಕ ಪೆಟ್ಟಿಗೆ, ಜಿಪಿಆರ್‌ಎಸ್, ಸ್ಪೀಡ್ ಗೌವರ್ನರ್ ಹಾಗೂ ಲಾಲಿಪಪ್ ಸಮವಸ್ತ್ರ ಸೇರಿದಂತೆ ಸಿ.ಸಿ. ಕ್ಯಾಮೆರಾ ಉಪಕರಣಗಳು ಇರಬೇಕೆಂದು ನಿಯಮವಿದೆ. ಆದರೆ ಹಲವು ಶಿಕ್ಷಣ ಸಂಸ್ಥೆಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ. ಸರ್ಕಾರದ ಆದೇಶದಂತೆ 10 ಉಪಕರಣಗಳ ಕಿಟ್ ಅನ್ನು ಪ್ರತಿಷ್ಠಾನದಿಂದ ಕಡಿಮೆ ವೆಚ್ಚದಲ್ಲಿ ವಾಹನಗಳಿಗೆ ಅಳವಡಿಸುವ ವ್ಯವಸ್ಥೆಯಿದೆ ಎಂದರು.ಮಾಹಿತಿ ಮತ್ತು ತರಬೇತಿಗಾಗಿ ಮೊ. 99801 26594.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement