ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗೇಶ್ ಅವಿರೋಧ ಆಯ್ಕೆ
ಕನಕಪುರ: ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಪಂ ಅಧ್ಯಕ್ಷರ ಚುನಾವಣೆ ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ನಡೆಯಿತು. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗೇಶ್ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಗಳಾಗಿ ಸಹಾಯಕ ಕೃಷಿ ನಿರ್ದೇಶಕ ತಿಮ್ಮೇಗೌಡ ಕಾರ್ಯ ನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕಲಾಪಗಳನ್ನು ನಿರ್ವಹಿಸಿದ್ದರು. ಹಿಂದಿನ ಗ್ರಾಪಂ ಅಧ್ಯಕ್ಷ ವೆಂಕಟರಾಜು ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮೀಸಲಾತಿ ಎ ವರ್ಗಕ್ಕಾಗಿ ಚುನಾವಣೆ ನಡೆಯಿತು.
ಹಾರೋಹಳ್ಳಿ ಗ್ರಾಪಂ 31 ಸದಸ್ಯ ಬಲವನ್ನು ಹೊಂದಿದ್ದು 15 ಮಂದಿ ಜೆಡಿಎಸ್ ಸದಸ್ಯರು 11 ಮಂದಿ ಕಾಂಗ್ರೆಸ್ ಹಾಗೂ 5 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ನ ನಾಗೇಶ್ ಪಕ್ಷೇತರ ಹಾಗೂ ಜೆಡಿಎಸ್ ಕೆಲವು ಸದಸ್ಯರ ಬೆಂಬಲ ಪಡೆದು ಕೊನೇ ಅವಧಿಯ ಅಧ್ಯಕ್ಷ ಗಾಧಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನೂತನ ಅಧ್ಯಕ್ಷ ನಾಗೇಶ್ ಅವರನ್ನು ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ, ಪುರುಷೋತ್ತಮ್, ಸೋಮಶೇಖರ್,ನರಸಿಂಹಯ್ಯ, ರಮೇಶ್, ಪುಟ್ಟಸ್ವಾಮಿ ಮೊದಲಾದವರು ಅಭಿನಂದಿಸಿದರು.