ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರವೀಂದ್ರನಾಥರಿಗೆ ನ್ಯಾಯ ಒದಗಿಸಲು ಒತ್ತಾಯ

Srinivasa Murthy VN
Updated On : 3 Jun 2014, 12:11 pm

ದೇವನಹಳ್ಳಿ : ಎಡಿಜಿಪಿ ಡಾ.ರವೀಂದ್ರನಾಥ್ ಅವರ ರಾಜಿನಾಮೆಯನ್ನು ಸರ್ಕಾರ ತಿರಸ್ಕರಿಸಿ ಮತ್ತೆ ಅವರನ್ನು ಉನ್ನತ ಅಧಿಕಾರ ನೀಡಬೇಕೆಂದು ದೇವನಹಳ್ಳಿ ತಾಲೂಕು ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳಿಗೆ ರವಾನಿಸಬೇಕೆಂದು ಒತ್ತಾಯಿಸಿದರು.
ಬೆಂಗಳೂರು ಕಾಫಿ ಹೌಸ್‌ನಲ್ಲಿ ಯುವತಿಯೊಬ್ಬಳ ಫೋಟೋ ತೆಗೆಯಲಾಯಿತು ಎಂಬ ಆರೋಪದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪ್ರಾಮಾಣಿಕ ಅಧಿಕಾರಿ ಡಾ.ರವೀಂದ್ರನಾಥ್ ಅವರ ಮೇಲೆ ಸುಳ್ಳು ದೂರು ಸ್ವೀಕರಿಸಿ ಅವರನ್ನು ನಿಜವಾದ ಆರೋಪಿಗಿಂತ  ಕೀಳಾಗಿ ನಡೆಸಿಕೊಂಡು ದಲಿತ ಜಾತಿಗೆ ಅವಮಾನ ಮಾಡಲಾಗಿದೆ ಎಂದು ದಲಿತ ಮುಖಂಡ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು. ಈ ದುರುದ್ದೇಶದ ಹಿಂದೆ ಇರುವ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಡಿಸಿಪಿ ರವಿಕಾಂತೇಗೌಡ, ಪಿಎಸೈ ರವಿ ಇವರ ಮೇಲೆ ಕಾನೂನಿ ಕ್ರಮ ಜರುಗಿಸಬೇಕೆಂದು ತಿಳಿಸಿದರು.
ಜಾತೀಯ ಕಾರಣಕ್ಕೆ ನಿರಂತರ ಅಪಮಾನಕ್ಕೆ ಒಳಗಾಗುತ್ತಿರುವ ಡಾ.ರವೀಂದ್ರನಾಥ್ ಅವರಿಗೆ ದಲಿತ ಸಂಘಟನೆಗಳು ನೈತಿಕ ಬೆಂಬಲ ನೀಡುತ್ತಿವೆ ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರಲ್ಲದೆ ಉತ್ತರ ಪ್ರದೇಶದ ಕತ್ರಾ ಹಳ್ಳಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಕೇಂದ್ರ ಸರ್ಕಾರ ಯಾರದೇ ಮುಲಾಜಿಗೂ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ಡಾ.ರವೀಂದ್ರನಾಥರ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿ ಕ್ರಮ ತೆಗೆದುಕೊಳ್ಳಬೇಕು.
ಈ ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ರಜೆ ಮೇಲೆ ಕಳುಹಿಸಬೇಕು.
 ಪ.ಜಾತಿ, ಪ.ವರ್ಗಗಳ ದೌರ್ಜನ್ಯ ಕಾಯಿದೆಯಂತೆ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸದೇ ಇರುವುದು ಖಂಡಿಸುತ್ತೇವೆ ಎಂದು ದಲಿತ ಮುಖಂಡರಾದ ಎಂ.ಮೂರ್ತಿ ಒತ್ತಾಯಿಸಿದ್ದಾರೆ.  ಮುಖಂಡರಾದ ಮಾರಪ್ಪ, ಪುರಸಭಾ ಮಾಜಿ ಸದಸ್ಯ ಕುಮಾರ್, ವೆಂಕಟೇಶಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement