ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಹಾಲಿಂಗಯ್ಯ ಸಂಘಟನಾ ಚತುರ, ಸ್ನೇಹ ಜೀವಿಯಾಗಿದ್ದರು

Srinivasa Murthy VN
Updated On : 17 Jun 2014, 12:54 pm

ನೆಲಮಂಗಲ: ಸೋಂಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಮಹಾಲಿಂಗಯ್ಯನವರು ಸಂಘಟನಾ ಚತುರರಾಗಿದ್ದರಲ್ಲದೇ  ಸ್ನೇಹಜೀವಿಯಾಗಿದ್ದರು. ಅವರು ನಮ್ಮನ್ನಗಲಿರುವುದು ತುಂಬಲಾರದ ನಷ್ಟವಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಎಂ.ಜಿ. ತಿಮ್ಮರಾಜು ತಮ್ಮ ಹೇಳಿದರು. ಅವರು ಸೋಂಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಅಕಾಲಿಕ ಮರಣಕ್ಕೀಡಾದ ಮಹಾಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ ಉತ್ತಮ ಸಂಘಟನಾ ಚತುರರಾಗಿದ್ದು ಎಲ್ಲರಲ್ಲೂ ಉತ್ತಮ ಭಾಂದವ್ಯ ಹೊಂದಿದ್ದರು ಎಂದರು. ವನಕಲ್ಲು ಪೀಠಾಧ್ಯಕ್ಷ  ರಮಾನಂದಸ್ವಾಮೀಜಿ ಮಾತನಾಡಿ  ಮನುಷ್ಯ ಬಯಲಿನಲ್ಲೆ ಹುಟ್ಟಿ ಬಯಲಲ್ಲೇ ಜೀವನ ನಡೆಸಿ ಬಯಲಲ್ಲೇ ಸಾವನ್ನಪ್ಪುತ್ತಾನೆ. ಮನುಷ್ಯ ತನ್ನನ್ನು ತಾನು ಅರಿತಾಗ ಪರಿಪೂರ್ಣನಾಗುತ್ತಾನೆ  ಎಂದರು.  ನೌಕರರ ಸಂಘದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್ ಮಾತನಾಡಿದರು. ನೆಲಮಂಗಲ ತಾಲೂಕು ಹಾಲು ಒಕ್ಕೂಟದ 146 ಸಹಕಾರ ಸಂಘಗಳಿಂದ ಮೃತರ ಕುಟುಂಬಕ್ಕೆ 2,25,000  ನಗದನ್ನು ನೀಡಲಾಯಿತು. ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯಸ್ವಾಮೀಜಿ , ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ಹಿರಿಯ ಮುಖಂಡ ಗೋವೇನಹಳ್ಳಿ ಶಿವಣ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಎಂ.ಉಮಾಶಂಕರ್, ಸೋಂಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮರಳಸಿದ್ದಯ್ಯ, ಬೋರಮಾರನಹಳ್ಳಿ ಕಾರ್ಯದರ್ಶಿ ಚಂದ್ರಕುಮಾರ್, ವಾದಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್, ಹಳೆನಿಜಗಲ್ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕುಮಾರ್, ತಟ್ಟೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗೇಶ್ ಹಾಗೂ ಕಾರ್ಯದರ್ಶಿಗಳಾದ ಪುರುಷೋತ್ತಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement