ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೌರಶಕ್ತಿ ಆಧಾರಿತ ಕೋಳಿ ಸಾಕಣೆ

Srinivasa Murthy VN
Updated On : 17 Jun 2014, 12:53 pm

ದೊಡ್ಡಬಳ್ಳಾಪುರ: ಸೌರಶಕ್ತಿ ಆಧಾರಿತ ಕೋಳಿ ಸಾಕಣೆಗೆ ಪೂರಕವಾದ ಯಂತ್ರವನ್ನು ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶೋಧಿಸಿದ್ದಾರೆ. ಪ್ರಾಧ್ಯಾಪಕ ರಾಘವೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಅಂತಿಮವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಆರ್.ನಂದೀಶ್‌ಕುಮಾರ್, ಡಿ.ಆರ್.ನಾಗರಾಜ್, ಕೆ.ಆರ್.ನಾರಾಯಣಸ್ವಾಮಿ, ಗಂಗರಾಜು ಈ ಆವಿಷ್ಕಾರ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶೋಧನಾ ತಂಡ, ಹಿಂದಿನ ಕಾಲದಲ್ಲಿ ಕೋಳಿಮರಿ ಸಾಕಾಣಿಕೆಗೆ ಕಲ್ಲಿದ್ದಲು ಉರಿಸುವಿಕೆ ಮತ್ತು ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದರು. ಇದರಿಂದ ಪರಿಸರ ಅಸಮತೋಲನ ಮತ್ತು ವಿದ್ಯುತ್ ಶಕ್ತಿಗೆ ಅತಿಯಾದ ಅವಲಂಬನೆ ಆಗಿತ್ತು. ಈ ಹೊಸ ಆವಿಷ್ಕಾರ ಇಂದಿನ ಕಾಲಘಟ್ಟಕ್ಕೆ ಪೂರಕವಾಗಿದೆ. ಒಂದು ನೀರಿನ ಟ್ಯಾಂಕ್, ಸೌರಶಕ್ತಿ ಫಲಕ ಮತ್ತು ಚೌಕಾಕಾರದ ಡಬ್ಬ ಬಳಸಿ ಈ ಯಂತ್ರವನ್ನು ತಯಾರಿಸಲಾಗಿದೆ. ನೀರಿನ ಟ್ಯಾಂಕ್‌ನಿಂದ ನೀರು ಸೌರಶಕ್ತಿ ಫಲಕಕ್ಕೆ ಹಾಯಿಸಿ ಸೂರ್ಯನ ಶಾಖದಿಂದ ಬಿಸಿ ಮಾಡಿ ತಾಮ್ರದ ಪೈಪಿನ ಮೂಲಕ ಉಷ್ಣಾಂಶ 4 ದಿಕ್ಕಿಗೂ ಹರಡುವಂತೆ ಮಾಡಲಾಗಿದೆ.
ಉಷ್ಣ ನಿಯಂತ್ರಕವನ್ನೂ ಅಳವಡಿಸಲಾಗಿದೆ. ಇದಕ್ಕೆ ಒಂದು ಬಾರಿ ಹಣ ಹೂಡಿದರೆ ಜೀವನ ಪರ್ಯಂತ ಉಪಯೋಗಿಸಬಹುದಾಗಿದೆ. ಇದರಿಂದ ವಿದ್ಯುತ್ ಮೇಲಿನ ಅವಲಂಬನೆ ತಪ್ಪುತ್ತದೆ ಎಂದು ವಿವರಿಸಿದ್ದಾರೆ.
ವಿದ್ಯಾರ್ಥಿಗಳ ಶೋಧನೆಯಲ್ಲಿ ಕಾಲೇಜು ಆಡಳಿತ ಮಂಡಲಿ ಮತ್ತು ಬೋಧಕ ವರ್ಗ ಶ್ಲಾಘಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement