ತಾಂತ್ರಿಕ ತೊಂದರೆಯಿಂದಾಗಿ ಪುಷ್ಪುಲ್ ರೈಲು ನಿಲುಗಡೆ
ಚನ್ನಪಟ್ಟಣ: ತಾಂತ್ರಿಕ ತೊಂದರೆಯಿಂದಾಗಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಪುಷ್ಪುಲ್ ರೈಲುಗಾಡಿ ಸುಮಾರು 40 ನಿಮಿಷಗಳ ಕಾಲ ತಾಲೂಕಿನ ವಂದಾರಗುಪ್ಪೆ ಬಳಿ ನಿಂತ ಕಾರಣ ಪ್ರಯಾಣಿಕರು ಪರದಾಡು ವಂತಾಯಿತು.
8.15ರ ಸುಮಾರಿನಲ್ಲಿ 52ನೇ ಮೈಲು ಕಲ್ಲು ವಂದಾರಗುಪ್ಪೆ ಬಳಿಗೆ ಬಂದ ರೈಲು ಹಠಾತ್ತನೆ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರು ಆತಂಕಕ್ಕೀಡಾದರು. ಕೆಲ ಸ್ಥಳೀಯರು ಅಲ್ಲೇ ಇಳಿದು ಪರ್ಯಾಯ ವಾಹನಗಳನ್ನು ಅವಲಂಬಿಸಿದರೆ ದೂರದ ಊರಿಗೆ ತೆರಳ ಬೇಕಾದ ಪ್ರಯಾಣಿಕರು ಮುಂದೇನು ಎಂದು ಎದುರು ನೋಡುತ್ತಾ ಕಾಯ್ದುಕುಳಿತರು.
ಬ್ರೇಕ್ ಸಮಸ್ಯೆ: ಬ್ರೇಕ್ನ ಒತ್ತಡ ವೈಫಲ್ಯದಿಂದಾಗಿ ರೈಲುಗಾಡಿಯನ್ನು ನಿಲುಗಡೆ ಮಾಡ ಬೇಕಾಯಿತು ಎಂದು ರೇಲ್ವೆ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.