2014ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿಗೆ ಆಯ್ಕೆ
ವಿಜಯಪುರ: ಎಲ್ಲಿ ಐಕ್ಯತಾ ಮನೋಭಾವ ಇರುವುದೋ ಅಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಬ್ರಾಹ್ಮಣ ಸೇವಾ ಮಂಡಳಿಯ ಡಾ.ಟಿ.ಕೆ.ಸತ್ಯಪ್ರಸಾದ್ ತಿಳಿಸಿದರು.
ಅವರು ಪಟ್ಟಣದ ಬ್ರಾಹ್ಮಣ ಸೇವಾ ಮಂಡಳಿ ಭವನದಲ್ಲಿ ಮಂಡಳಿಯ 2013-14ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಮೂಲಭೂತ ಸೌಕರ್ಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
1991ನೇ ಇಸವಿಯಲ್ಲಿ ಪ್ರಾರಂಭವಾದ ಬ್ರಾಹ್ಮಣ ಸೇವಾ ಮಂಡಳಿಯು 23 ವರ್ಷಗಳು ಕಳೆದಿದೆ. ಇದರ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಎಲ್ಲರೂ ಕೂಡ ಸಂಪೂರ್ಣ ಸಹಕಾರ ಮತ್ತು ಸಹಯೋಗ ನೀಡುವ ಮುಖೇನ ಇಂದು ಎಲ್ಲಾ ತರಹದಲ್ಲಿಯೂ ಸಮುದಾಯಕ್ಕೆ ಬೇಕಾಗುವ ಸಕಲ ಮೂಲಸೌಕರ್ಯಗಳು ಸಿಕ್ಕಿದಂತಾಗಿದ್ದು ಇನ್ನೂ ಕೆಲವು ಮಾತ್ರ ಬಾಕಿ ಉಳಿದಿದೆ ಎಂದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಟಿ.ಎನ್.ಕೃಷ್ಣಮೂರ್ತಿ ಮಾತನಾಡಿ ಯಾವುದೇ ಸಮಾಜ ಸ್ಥಿತಿಯತ್ತ ದಾಪುಗಾಲಿಟ್ಟು ಮುಂದುವರೆಯಬೇಕಾದರೆ ಮುಂದಾಳತ್ವ ತೆಗೆದುಕೊಂಡವರಿಗೆ ಸಂಪೂರ್ಣ ಪ್ರೋತ್ಸಾಹದೊಂದಿಗೆ ಸಹಕಾರ ನೀಡಬೇಕು ಎಂದರು. ಬ್ರಾಹ್ಮಣ ಸೇವಾ ಮಂಡಳಿ ಅದ್ಯಕ್ಷ ಮುರುಳೀಧರ ಭಟ್ಟಾಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.