ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನ ಸಾಮಾನ್ಯರ ಸೇವೆಗೆ ಬದ್ಧ

Srinivasa Murthy VN
Updated On : 5 Mar 2014, 12:47 pm

ಆನೇಕಲ್: ತಾಲೂಕಿನಲ್ಲಿ 5 ಕೈಗಾರಿಕೆಗಳಿದ್ದು ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ವಿವಿಧ ರಾಜ್ಯಗಳ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ. ರೈಲ್ವೆ ಟಿಕೆಟ್ ಮುಂಗಡ ಕಾದಿರಿಸುವಿಕೆಗಾಗಿ ಬೆಂಗಳೂರು ನಗರ ಅಥವಾ ತಮಿಳುನಾಡಿನ ಹೊಸೂರಿಗೆ ಹೋಗಬೇಕಾದ ಪ್ರಮೇಯ ತಪ್ಪಿಸಿ ತಾಲೂಕಿನಲ್ಲಿ ಇ ಟಿಕೆಟ್ ಕೌಂಟರ್ ಉದ್ಘಾಟಿಸಲು ಹೆಮ್ಮೆಯಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಅವರು ಇಲ್ಲಿನ ರೈಲ್ವೆ ನಿಲ್ಧಾಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ರಾಜ್ಯದ ಹೆಮ್ಮೆಯ ನಾಯಕ ಮಲ್ಲಿಕಾರ್ಜುನ ಖರ್ಗೆರವರು ಅತ್ಯಲ್ಪ ಅವಧಿಯಲ್ಲಿ ರಾಜ್ಯಕ್ಕೆ 17 ಹೊಸ ರೈಲುಗಳನ್ನು ತಂದರು. 23 ಹೊಸ ಯೋಜನೆಗಳ ಪ್ರಸ್ತಾವದೊಡನೆ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಬಹುತೇಕ ಸಾಮಾನ್ಯ ಪ್ರಯಾಣಿಕರನ್ನೇ ಅವಲಂಬಿಸಿರುವ ರೈಲ್ವೆ ಸಾರಿಗೆ ದಿನ ನಿತ್ಯ ಕೋಟ್ಯಂತರ ದೇಶವಾಸಿಗಳಿಗೆ ಸೇವೆ ನೀಡುತ್ತಿದ್ದು ಪ್ರಯಾಣಿಕರ ದರ ಹೆಚ್ಚಸದೇ ಜನಪರ ಕಾಳಜಿ ಮೆರೆದಿದ್ದಾರೆ.
ಆನೇಕಲ್ ಪ್ರಾಂತ್ಯದ ಅಭಿವೃದ್ಧಿಗಾಗಿ ಶಾಸಕ ಶಿವಣ್ಣ ಜೊತೆ ಕೇಂದ್ರ ರೈಲ್ವೆ ಸಚಿವರ ಜೊತೆ ಮಾಡಿದ ಚರ್ಚೆ ಫಲ ನೀಡಿದ್ದು ಇ-ಟಿಕೆಟ್ ಕೌಂಟರ್ ಪ್ರಥಮ ಹೆಜ್ಜೆಯಾಗಿದೆ. ರೈಲ್ವೆ ಪ್ಲಾಟ್‌ಫಾರಂ ಉನ್ನತೀಕರಣ ಮತ್ತು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅನುಮತಿ ಪಡೆಯಲಾಗಿದೆ. ಸ್ಕೈಫುಟ್‌ಟ್ವಾಕ್, ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಅನುಷ್ಠಾನ ಮುಂದಿನ ಗುರಿಯಾಗಿದೆ ಎಂದರು.
ಶಾಸಕ ಬಿ. ಶಿವಣ್ಣ ಮಾತನಾಡಿ ಜನತೆಗೆ ನೀಡಿದ ವಚನದಂತೆ ಆನೇಕಲ್ ಚಂದಾಪುರದ ನಾಲ್ಕು ಪಥ ರಸ್ತೆ ಕಾಮಗಾರಿ 17 ಕೋಟಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ 4.5 ಕೋಟಿ, ಬಿದರಗುಪ್ಪೆ ತಿರುವಿನ ಎರಡು ಸೇತುವೆ ನಿರ್ಮಾಣಕ್ಕೆ ಅಂದಾಜು  2 ಕೋಟಿ, ನಿರಂತರ ಹಾಗೂ 3 ಫೇಸ್ ವಿದ್ಯುತ್ ನೀಡಲು ಉಪಕೇಂದ್ರ ರು 7.64 ಕೋಟಿ, ಬೆಸ್ಕಾಂ ಕಚೇರಿ ಕಟ್ಟಡ  2 ಕೋಟಿ ಸೇರಿದಂತೆ ಅಂದಾಜು 35 ಕೋಟಿ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.  ರೈಲ್ವೆ ಡಿಆರ್ ಎಂ. ಅಗರವಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮರ್ಷಿಯಲ್ ಮ್ಯಾನೇಜರ್
ಎನ್. ರಮೇಶ್ ಸ್ವಾಗತಿಸಿದರು. ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ, ರಾಮೋಜಿಗೌಡ, ಸೋಮಶೇಖರರೆಡ್ಡಿ, ಚಂದ್ರಪ್ಪ, ರಾಜಣ್ಣ, ಜಿ. ಗೋಪಾಲ್, ಕೆಂಪರಾಜು, ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಪುರಸಭಾ ಸದಸ್ಯ ಅರ್ಜುನ್, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement