ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ
ಕನಕಪುರ: ಹಾರೋಹಳ್ಳಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಹಾಗೂ ಜಾತ್ರೆಗಳು ಮಾ. 14 ರಿಂದ 20 ರ ವರೆಗೆ ನಡೆಯಲಿದೆ. ಮಾ.14 ರಂದು ಅಂಕುರಾರ್ಪಣ, ಪಾದಪೂಜೆ, ಕುಂಕುಮಾರ್ಚನೆ, ಮಾ.15ರಂದು ಆರತಿ ಮತ್ತು ಅಭಿಷೇಕ, ಮಾ.16 ರಂದು ಪಾದಪೂಜೆ, ರಥೋತ್ಸವ, ಹೂವಿನಪಲ್ಲಕಿ ಉತ್ಸವ, ಮಾ.17 ರಂದು ಜಾತ್ರೆ ಮತ್ತು ಹೂವಿನಪಲ್ಲಕಿ ಉತ್ಸವ, ಮಾ.18 ಮತ್ತು 19 ರಂದು ಜಾತ್ರಾಮಹೋತ್ಸವ ಹೂವಿನಪಲ್ಲಕಿ ಉತ್ಸವಗಳು ನಡೆಯಲಿವೆ.
'ಮಾನವೀಯ ಮೌಲ್ಯಗಳ ಮರೆ'
ಕನಕಪುರ: ಇಂದಿನ ಉದಾರೀಕರಣ, ಜಾಗತೀಕರಣದ ಯುಗದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ, ಯುವಕರು ವಿದ್ಯಾರ್ಥಿ ದಿಸೆಯಲ್ಲಿಯೇ ಮಾನವೀಯ ಗುಣಗಳನ್ನು, ವೈಚಾರಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಬೆಂವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ಜಾನಪದ ತಜ್ಞ ಡಾ.ಗಂಗಾಧರ್ ತಿಳಿಸಿದ್ದಾರೆ.
ಫ್ಲೆಕ್ಸ್ ತೆರವುಗೊಳಿಸದೆ ಜಾಣಕುರುಡು ಪ್ರದರ್ಶನ
ಕನಕಪುರ: ಲೋಕಸಭಾ ಚುನಾವಣಾ ದಿನಾಂಕಗಳು ಘೋಷಣೆಯಾಗಿ ನೀತಿಸಂಹಿತೆ ಜಾರಿಗೊಂಡಿದ್ದರೂ ತಾಲೂಕು ಆಡಳಿತ ಸರ್ಕಾರದ ಜಾಹಿರಾತುಗಳು ಹಾಗೂ ಸವಲತ್ತುಗಳನ್ನು ಪ್ರಚುರಪಡಿಸುವ, ನಾಯಕರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸದೆ ಜಾಣಕುರುಡು ಪ್ರದರ್ಶಿಸುತ್ತಿದೆ. ಕನಕಪುರ ಪಟ್ಟಣ, ಗ್ರಾಮಾಂತರ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಹಾಗೂ ಹೋಬಳಿ ಕೇಂದ್ರಗಳಾದ ಹಾರೋಹಳ್ಳಿ, ಮರಳವಾಡಿ, ಸಾತನೂರು ಮೊದಲಾದ ಕಡೆಗಳಲ್ಲಿ ಸರ್ಕಾರದ ಜಾಹೀರಾತು ಫಲಕಗಳು ಪ್ರದರ್ಶನಗೊಳ್ಳುತ್ತಿವೆ. ಅಧಿಕಾರಿಗಳು ನೀತಿಸಂಹಿತೆ ಪಾಲಿಸದೆ ನಿರ್ಲಕ್ಷ್ಯ ವ್ಯಕ್ತಪಡಿಸುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.