ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚಿಕ್ಕಕೋಲಿಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ

Srinivasa Murthy VN
Updated On : 10 Mar 2014, 11:56 am

ಸೂಲಿಬೆಲೆ : ಹೋಬಳಿಯ ಚಿಕ್ಕ ಕೋಲಿಗ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಡೆದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಶಿಬಿರದ  ಸಮಾರೋಪ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಾಂಜಿನಪ್ಪ, ಬೆಂಗಳೂರು ಬಳಿಯ ಎಸ್‌ಜಿಇಸಿ ಶಿಕ್ಷಣ ಸಂಸ್ಥೆಯವರು ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಿದ್ಯಾರ್ಥಿಗಳು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಡೆಸಿದ ಶ್ರಮದಾನ ಗ್ರಾಮದ ಸ್ವಚ್ಛತೆ ಹಾಗೂ ಅಭಿವೃದ್ಧಿ ಯುವಕರನ್ನು ಪ್ರೋತ್ಸಾಹಿಸಿದಂತಾಗಿದೆ. ವಿದ್ಯಾರ್ಥಿಗಳು ಕಲಿಕೆ ಮಾತ್ರವಲ್ಲದೇ ಗ್ರಾಮೀಣಾಭಿವೃದ್ಧಿಯತ್ತ ಚಿತ್ತ ಹರಿಸಿ ಶ್ರಮದಾನದ ಮೂಲಕ ರಾಷ್ಟ್ರ ಸೇವೆ ತಾವು ಸಿದ್ಧ ಎಂಬುದನ್ನು ತೋರಿಸುವ ಈ ವಿಶೇಷ ಶಿಬಿರದ ಪ್ರಯೋಜನೆ ಗ್ರಾಮಕ್ಕೆ ಸಿಕ್ಕಿದ್ದು ತುಂಬಾ ಉಪಕಾರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಚೌಡೇಗೌಡ ಮಾತನಾಡಿ, ವಿದ್ಯಾರ್ಥಿಗಳ ಶ್ರಮದಾನ ಇತರರಿಗೆ  ಮಾದರಿಯಾಗಿರಬೇಕು. ಕಲಿಕೆ ಮಾತ್ರವಲ್ಲದೇ ದೇಶಕ್ಕಾಗಿ ದುಡಿಯಲು ಸಿದ್ಧ ಎಂಬುದನ್ನು ಶಿಬಿರದ ಮೂಲಕ ತೋರಿಸುವ ಪ್ರಯತ್ನ ಕಲಿಕೆಯ ಒಂದು ಭಾಗವಾಗಿದೆ ಎಂದರು.

ಕಲಾ ಮಹೋತ್ಸವ ಇಂದು
ದೊಡ್ಡಬಳ್ಳಾಪುರ: ಶ್ರೀ ಪ್ರತಿಭಾ ಜಾನಪದ ಕಲಾ ವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಸಾಂಸ್ಕೃತಿಕ ಕಲಾ ಮಹೋತ್ಸವ ಕಾರ್ಯಕ್ರಮ ಮಾ.11ರ ಮಂಗಳವಾರ ಬೆಳಗ್ಗೆ 10.30ಕ್ಕೆ ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.
ಬೆಂ.ಗ್ರಾ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಎನ್. ಸುಶೀಲ ಉದ್ಘಾಟಿಸಲಿದ್ದು, ಡಾ.ಸಿದ್ಧರಾಜು ಸ್ವಾಮೀಜಿ, ನರಸಿಂಹಮೂರ್ತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
  ಶನಿಮಹಾತ್ಮ ದೇಗುಲ ಅಧ್ಯಕ್ಷ ಜಿ. ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯಣ್ಣ, ಶಿವರಾಜ್, ರಾಜಶೇಖರಯ್ಯ, ರಾಜೇಶ್, ರಾಮಚಂದ್ರಶ್ಯಾಕಲದೇವನಪುರ, ಸುಶೀಲಮ್ಮ, ರಾಮಾಂಜಿನಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶನಿದೇವರ ಬ್ರಹ್ಮರಥೋತ್ಸವ
ದೊಡ್ಡಬಳ್ಳಾಪುರ: ಚಿಕ್ಕಮಧುರೆ ಎಂದೇ ಖ್ಯಾತವಾಗಿರುವ ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳ ಕನಸವಾಡಿ ಶ್ರೀಶನಿಮಹಾತ್ಮ ದೇವರ ಬ್ರಹ್ಮರಥೋತ್ಸವ ಕಾರ್ಯಕ್ರಮ ಮಾ.11ರ ಮಂಗಳವಾರ ಮಧ್ಯಾಹ್ನ 1.15ರಂದ 1.55ರ ಶುಭ ಮುಹೂರ್ತದಲ್ಲಿ ನಡೆಯಲಿದೆ. ಬ್ರಹ್ಮರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಧೂಳೋತ್ಸವ, ದಿವ್ಯಾಲಂಕೃತ ಪಲ್ಲಕ್ಕಿ ಉತ್ಸವ, ಸಂಗೀತ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

ನೂತನ ಅಧ್ಯಕ್ಷೆ ಅಕ್ಕಮಹಾದೇವಿ
ನೆಲಮಂಗಲ: ಬಸವನಹಳ್ಳಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಮೈಲನಹಳ್ಳಿ ಗ್ರಾಮದ ಅಕ್ಕಮಹಾದೇವಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ನಿಗದಿಯಾಗಿತ್ತು. ಸಂದರ್ಭದಲ್ಲಿ  ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ಪಿ.ಡಿ.ಓ. ಶ್ರುತಿಗೌಡ ಹಾಗೂ ಸಿಬ್ಬಂದಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement