ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತದಾರರ ಪಟ್ಟಿ ಪರಿಷ್ಕರಣೆ: ತಹಸೀಲ್ದಾರ್ ಭೇಟಿ

Srinivasa Murthy VN
Updated On : 10 Mar 2014, 1:57 am

ಸೂಲಿಬೆಲೆ: ಹೊಸಕೋಟೆ ತಾಲೂಕಿನ 264 ಮತಗಟ್ಟೆಗಳಲ್ಲಿ ಮಾ.9ರಂದು ನಡೆದ ಮತದಾರರ ಪರಿಷ್ಕರಣೆ ಪಟ್ಟಿ ವಿಶೇಷ ಶಿಬಿರದ ಮತಗಟ್ಟೆಗಳಿಗೆ ಹೊಸಕೋಟೆ ತಹಸೀಲ್ದಾರ್ ಬಿ.ಟಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಲಿಬೆಲೆಯಲ್ಲಿ ಒಟ್ಟು 8 ಮತಗಟ್ಟೆಗಳಿದ್ದು, ವಿವೇಕಾನಂದ ಪ್ರೌಢಶಾಲೆ ಹಾಗೂ ಕನ್ನಡ ಶಾಲೆಗಳಲ್ಲಿರುವ ತಲಾ 4 ಮತಗಟ್ಟೆಗಳಿಗೆ  ಭೇಟಿ ನೀಡಿದ ಅವರು, ಹೊಸದಾಗಿ ಸೇರ್ಪಡೆಯಾಗುವ ಮತದಾರರ ವಯಸ್ಸು,
ಅದಕ್ಕೆ ಸ್ವೀಕರಿಸುತ್ತಿರುವ ದಾಖಲೆಗಳು, ಪಟ್ಟಿ ಮಾಹಿತಿ ಇತ್ಯಾದಿ ವಿಷಯಗಳ ಬಗ್ಗೆ ಸ್ಥಳದಲ್ಲಿದ್ದ ಬಿಎಲ್‌ಓ(ನೋಂದಾಣಾಧಿಕಾರಿ)ಗಳ ಜೊತೆ ಚರ್ಚಿಸಿದರು.
 ಅರ್ಹತೆ ಇರುವ ಗ್ರಾಮದ ಮತದಾರರು ಮತದಾನ ಹಕ್ಕುನಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಚುನಾವಣೆ ಆಯೋಗ ಎಲ್ಲ ಕಡೆ ಈ ವಿಶೇಷ ಶಿಬಿರಗಳನ್ನು ಆಯೋಜಿಸಿದ್ದು, ಇದರ ಪ್ರಯೋಜನ ಪಡೆಯಲು ಆಯಾ ವಾರ್ಡ್‌ನ ಜನರಲ್ಲಿ ಜಾಗೃತಿ ತರಬೇಕು.
ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಿ ಹೆಸರು ಸೇರ್ಪಡೆ ಮಾಡಿಕೊಳ್ಳಲು, ತಿದ್ದುಪಡಿ ಇತ್ಯಾದಿ ಕಾರ್ಯಗಳಿಗೆ ಶಿಬಿರದ ಉಪಯೋಗವನ್ನು ಪಡೆಯಬೇಕು ಎಂದರು.
ರಾಜಸ್ವ ನಿರೀಕ್ಷಕ ಶ್ರೀನಿವಾಸ ಶೆಟ್ಟಿ, ಗ್ರಾಮ ಲೆಕ್ಕಿಗ ಸುಜ್ಞಾನ ಮೂರ್ತಿ, ಶಿಕ್ಷಕ ವೆಂಕಟೇಶ್ ಹಾಗೂ ಬಿಎಲ್‌ಓ  ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement