ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿ

Srinivasa Murthy VN
Updated On : 14 Mar 2014, 12:51 pm

-ಮತ್ತೀಕೆರೆ ಜಯರಾಮ್
ರಾಮನಗರ:
ಜಿಲ್ಲೆಯ ನಾಲ್ಕೂ ಪೌರ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಗೊಂಡಿದೆ. ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಗೆ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಈ ಸ್ಥಳೀಯ ಸಂಸ್ಥೆ ಉನತ ಸ್ಥಾನಗಳ ಆಯ್ಕೆಯಲ್ಲಿ ಜಾತಿಯನೇ ಮಾನದಂಡ ಮಾಡಿಕೊಂಡಿವೆ.
ಆಯಾ ಮೀಸಲಿನಡಿ ಪಂಗಡ, ಉಪ ಪಂಗಡ ಮತ್ತು ಪ್ರಬಲ ಜಾತಿಗಳ ಅಭ್ಯರ್ಥಿಗಳಿಗೆ ಮಣೆ ಹಾಕುವ ಪ್ರಯತ ಪೌರ ಸಂಸ್ಥೆಗಳಲ್ಲಿ ನಡೆದಿದೆ. ಜಾತಿಯೇ ಮಾನದಂಡ ಆಗಿರುವ ಹಿನೆಲೆಯಲ್ಲಿ ಅರ್ಹತೆ, ಹಿರಿತನ, ಪಕ್ಷ ನಿಷ್ಠೆ, ಸೇವಾ ಚಟುವಟಿಕೆಗಳಿಗೆ ಇಲ್ಲಿ ಮನಣೆ ಇಲ್ಲದಂತಾಗಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಉಭಯ ಪಕ್ಷಗಳೂ ರಾಜಕೀಯ ಲಾಭದ ಲೆಕ್ಕಾಚಾರವನೇ ಇಲ್ಲಿ ನಡೆಸುತ್ತಿವೆ. ನಿರ್ಣಾಯಕ ಸಮುದಾಯದವರನು ಓಲೈಸುವ ತಂತ್ರ ನಡೆಯುತ್ತಿದೆ. ಇಲ್ಲಿ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆಯೂ ಇದೆ.
ಬದಲಾದ ಹಣೆಬರಹ: ಈ ಹಿಂದೆ ಘೋಷಣೆಯಾಗಿದ್ದ ಮೀಸಲಿನಡಿಯೇ ಈಗ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಈ ಮೊದಲು ಪ್ರಸ್ತಾಪವಾಗಿದ್ದ ಹೆಸರುಗಳಲ್ಲಿ ಕೆಲವು ಹಿಂದೆ ಸರಿದಿವೆ. ಅಚ್ಚರಿ ಎಂಬಂತೆ ಆಕಾಂಕ್ಷಿಯೇ ಅಲ್ಲದವರಿಗೆ ಅದೃಷ್ಟ ಒಲಿದು ಬರುತ್ತಿದೆ.
ಲೋಕಸಭೆ ಚುನಾವಣೆ ಮುಂಚೆ ನಡೆಯುತ್ತಿರುವ ಪೌರ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅಧಿಕಾರ ಹಂಚಿಕೆ ಸೂತ್ರವನೂ ರೂಪಿಸಲಾಗಿದೆ. ಒಂದೊಂದು ಸ್ಥಾನವನು 3-4 ಮಂದಿಗೆ ಹಂಚಿಕೆ ಮಾಡುತ್ತಿದ್ದು, ಮೊದಲು ಯಾರೆಂದು ಆಯ್ಕೆ ಮಾಡುವುದೇ ಕಗ್ಗಂಟಾಗಿ ಪರಿಣಮಿಸಿದೆ.
ಜಾತಿವಾರು ಒಗ್ಗಟ್ಟು: ಯಾವಾಗ ಪಕ್ಷದ ಮುಖಂಡರು ಜಾತಿಯನೇ ಪ್ರಧಾನವಾಗಿಟ್ಟುಕೊಂಡು ಅಭ್ಯರ್ಥಿ ಆಯ್ಕೆಗೆ ಮುಂದಾದರೋ ಅದರ ಬೆನಲ್ಲೇ ಸದಸ್ಯರು ಜಾತಿವಾರು ಒಗ್ಗಟ್ಟು ಪ್ರದರ್ಶನಕ್ಕೆ ಇಳಿದಿದ್ದಾರೆ. ಆಕಾಂಕ್ಷಿಗಳು ಜಾತಿ ಮುಂದಿಟ್ಟುಕೊಂಡೇ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.  ರಾಮನಗರ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಅವಕಾಶವಿದೆ. ಇಲ್ಲಿ ಒಕ್ಕಲಿಗ, ದಲಿತ ಮತ್ತು ಮುಸ್ಲಿಂ ಸದಸ್ಯರು ತಮ್ಮದೇ ಕೂಟಗಳನು ರಚಿಸಿಕೊಂಡು, ಅಭ್ಯರ್ಥಿಯನು ಬಿಂಬಿಸಲು ಹೊರಟಿರುವುದು ಕಬ್ಬಿಣದ ಕಡಲೆಯಾಗಿದೆ.
ಕಾಂಗ್ರೆಸ್‌ನಲ್ಲಿ ಬಿರುಸು: ಜೆಡಿಎಸ್ ಪಕ್ಷಕ್ಕೆ ಹೋಲಿಸಿದರೆ ಪೌರ ಸಂಸ್ಥೆ ವರಿಷ್ಠರ ಸ್ಥಾನಗಳ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಲೋಕಸಭೆಗೆ ಮರು ಆಯ್ಕೆ ಬಯಸಿ ಕಣಕ್ಕೆ ಸಜ್ಜಾಗಿರುವ ಸಂಸದ ಡಿ.ಕೆ.ಸುರೇಶ್ ಖುದ್ದು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸುರೇಶ್ ನೇತೃತ್ವದಲ್ಲಿ ಎರಡು ಸಭೆಗಳು ನಡೆದಿವೆ. ಅಲ್ಲಿ ಭಿನರಾಗ ವ್ಯಕ್ತವಾಗಿದೆ. ಒಕ್ಕಲಿಗರಾದ ಚೇತನ್ ಪರ ಮುಖಂಡ ಮರಿದೇವರು ಬ್ಯಾಟಿಂಗ್ ನಡೆಸುತ್ತಿದ್ದು, ಸ್ವಜಾತಿ ಸದಸ್ಯರ ಬೆಂಬಲವೂ ಸಿಕ್ಕಿದೆ. ಅಲ್ಪ ಸಂಖ್ಯಾತ ಸದಸ್ಯರು ಆರಿಫ್ ಖುರೇಷಿ ಹೆಸರನು, ದಲಿತ ಸದಸ್ಯರು ರವಿಕುಮಾರ್ ಅವರಿಗೆ ಅಧ್ಯಕ್ಷ ಹುದ್ದೆಗೆ ಪಟ್ಟು ಹಾಕಿದ್ದಾರೆ.
ರಾಜಿನಾಮೆ ಬೆದರಿಕೆ: ತಮ್ಮ ಬೇಡಿಕೆ ಮತ್ತು ಕೂಗಿಗೆ ವರಿಷ್ಠರಿಂದ ಸ್ಪಂದನೆ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವ ರವಿಕುಮಾರ್ ಸಭೆಯಿಂದ ದೂರ ಉಳಿದು, ಮುಖಂಡರ ಸಂಪರ್ಕಕ್ಕೆ ಸಿಗದಂತೆ  ಮೊಬೈಲ್  ಸ್ವಿಚ್ ಆಫ್ ಮಾಡಿಕೊಂಡಿರುವುದು ಪಕ್ಷದಲ್ಲಿನ ಒಡಕಿಗೆ ಕನಡಿಯಾಗಿದೆ. ರಾಮನಗರ ನಗರಸಭೆ ಇತಿಹಾಸದಲ್ಲಿ ಕಾಂಗ್ರೆಸ್‌ನಿಂದ ದಲಿತರೊಬ್ಬರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಈಗಲೂ ಅವಕಾಶ ನಿರಾಕರಿಸಿದ್ದೇ ಆದರೆ, ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ರವಿಕುಮಾರ್ ಈಗಾಗಲೇ ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ ಎಂದು ನಿಕಟವರ್ತಿ ಮೂಲಗಳು ತಿಳಿಸಿವೆ.
ಚುಕ್ಕಾಣಿಗಾಗಿ ಜಿದ್ದಾಜಿದ್ದಿ: ಕನಕಪುರ ಮತ್ತು ಮಾಗಡಿ ಪುರಸಭೆಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದೆ. ಹೀಗಾಗಿ  ಅವೆರಡೂ ಕಡೆ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಅಡ್‌ಡಗಾಲಿನ ಚಿಂತೆ ಇಲ್ಲ. ಆದರೆ, ಅತಂತ್ರ ಸ್ಥಿತಿ ಇರುವ ರಾಮನಗರ ಮತ್ತು ಚನಪಟ್ಟಣ ನಗರಸಭೆಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಉಭಯ ನಗರಸಭೆಗಳಲ್ಲಿ ತಲಾ 31 ಸದಸ್ಯ ಬಲವಿದೆ. ರಾಮನಗರದಲ್ಲಿ ಕಾಂಗ್ರೆಸ್ 16 ಮತ್ತು ಚನಪಟ್ಟಣದಲ್ಲಿ ಜೆಡಿಎಸ್ 16 ಸ್ಥಾನಗಳನು ಗೆದ್ದು, ಮೇಲುಗೈ ಸಾಧಿಸಿವೆ. ಆದರೆ, ಅವೆರಡೂ ಕಡೆ ಸಂಸದ ಮತ್ತು ಶಾಸಕರ ಮತಗಳು ಗಣನೆಗೆ ಬರುವುದರಿಂದ ಲೆಕ್ಕಾಚಾರ ಬದಲಾಗಿದೆ.  
ಕುದುರೆ ವ್ಯಾಪಾರ ಶುರು: ಪ್ರಮುಖವಾಗಿ ಚನಪಟ್ಟಣ ಮತ್ತು ರಾಮನಗರ ನಗರಸಭೆಗಳಲ್ಲಿ ಕುದುರೆ ವ್ಯಾಪಾರ, ಆಪರೇಷನ್ ಹಸ್ತ ಕಾರ್ಯಾಚರಣೆ ತೀವ್ರಗೊಂಡಿದೆ. ಲೋಕಸಭೆ ಚುನಾವಣೆ ಹಿನೆಲೆಯಲ್ಲಿ ಎರಡೂ ಪಕ್ಷಗಳು ಈ ಚುನಾವಣೆಯನು ಸಹಜವಾಗಿಯೇ ಪ್ರತಿಷ್ಠೆಯ ಪ್ರಶೆಯಾಗಿ ಸ್ವೀಕರಿಸಿವೆ.
ರಾಮನಗರದಲ್ಲಿ ಉಭಯ ಪಕ್ಷಗಳ ತಲಾ ಒಬ್ಬರು ಸದಸ್ಯರು ಎದುರು ಪಕ್ಷದ ಸಂಪರ್ಕದಲ್ಲಿರುವುದು ಗುಟ್ಟಿನ ಸಂಗತಿಯಲ್ಲ. ಇಲ್ಲಿ ಆಯ್ಕೆಗೊಂಡಿರುವ ಬಿಜೆಪಿಯ ಇಬ್ಬರು ಸದಸ್ಯರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜತೆ ತಲಾ ಒಬ್ಬರು ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಪ್ರವಾಸ

ರಾಮನಗರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಗುರುವಾರ ಪ್ರವಾಸಕ್ಕೆ ತೆರಳಿದ್ದಾರೆ. ರವಿಕುಮಾರ್ ಸಹಿತ ಕೆಲ ಸದಸ್ಯರು ಪ್ರವಾಸದಿಂದ ದೂರ ಉಳಿದಿದ್ದು, ಪಕ್ಷದ ಪಾಳಯದಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.
ಇಲ್ಲಿನ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಲೋಕೇಶ್, ರವಿಕುಮಾರ್, ಆರಿಫ್ ಖುರೇಷಿ, ಜೆಡಿಎಸ್ ಪಕ್ಷದಲ್ಲಿ ಮಂಜುನಾಥ್, ಜೆಡಿಎಸ್ ಜತೆಗೂಡಿರುವ ಪಕ್ಷೇತರ ಮೊಹಮದ್ ರಫೀಕ್, ಬಿಜೆಪಿಯಿಂದ ಆಯ್ಕೆಯಾಗಿ ಜೆಡಿಎಸ್ ಸೇರಿರುವ ನಾಗೇಶ್ ಆಕಾಂಕ್ಷಿಗಳು. ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟವರು ಉಭಯ ಪಕ್ಷಗಳಲ್ಲೂ ವಿರಳ.

ಚುನಾವಣೆ ದಿನಾಂಕ
ಚನಪಟ್ಟಣ ನಗರಸಭೆಗೆ         ಮಾ.15ರಂದು
ರಾಮನಗರ ನಗರಸಭೆ,
ಮಾಗಡಿ ಮತ್ತು ಕನಕಪುರ
ಪುರಸಭೆ ವರಿಷ್ಠರ ಸ್ಥಾನಗಳಿಗೆ         ಮಾ.17ಕ್ಕೆ

ಚುನಾಯಿತರ ಬಲಾಬಲ
31 ಸದಸ್ಯ ಬಲದ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 12, ಬಿಜೆಪಿ 2, ಪಕ್ಷೇತರ 1, ಚನಪಟ್ಟಣದ  31 ಸ್ಥಾನಗಳಲ್ಲಿ ಜೆಡಿಎಸ್ 16, ಕಾಂಗ್ರೆಸ್ 13, ಬಿಎಸ್ಸಾರ್ ಕಾಂಗ್ರೆಸ್ ಮತ್ತು ಪಕ್ಷೇತರ ತಲಾ 1 ಸದಸ್ಯರು ಆಯ್ಕೆಯಾಗಿದ್ದಾರೆ. ಕನಕಪುರ ಪುರಸಭೆಯ 27 ಸ್ಥಾನಗಳಲ್ಲಿ ಕಾಂಗ್ರೆಸ್ 23, ಜೆಡಿಎಸ್ 4, ಪಕ್ಷೇತರ 1, ಮಾಗಡಿ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 14, ಜೆಡಿಎಸ್ 8 ಮತ್ತು ಪಕ್ಷೇತರ 1 ಸದಸ್ಯ ಇದ್ದಾರೆ.

ಮೀಸಲು ವಿವರ
ರಾಮನಗರ ನಗರಸಭೆ       ಅಧ್ಯಕ್ಷ     - ಸಾಮಾನ್ಯ,
    ಉಪಾಧ್ಯಕ್ಷ     - ಹಿಂ.ವರ್ಗ ಅ,
ಚನಪಟ್ಟಣ ನಗರಸಭೆ       ಅಧ್ಯಕ್ಷ     - ಸಾಮಾನ್ಯ ಮಹಿಳೆ,
    ಉಪಾಧ್ಯಕ್ಷ     - ಸಾಮಾನ್ಯ,  
ಕನಕಪುರ ಪುರಸಭೆ      ಅಧ್ಯಕ್ಷ    - ಹಿಂ.ವರ್ಗ ಅ,
    ಉಪಾಧ್ಯಕ್ಷ     -ಸಾಮಾನ್ಯ ಮಹಿಳೆ,
ಮಾಗಡಿ ಪುರಸಭೆ     ಅಧ್ಯಕ್ಷ    - ಹಿಂ.ವರ್ಗ ಅ ಮಹಿಳೆ,
    ಉಪಾಧ್ಯಕ್ಷ     -ಸಾಮಾನ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement