ಜೆಡಿಎಸ್- ಕಾಂಗ್ರೆಸ್ ಹಗ್ಗ ಜಗ್ಗಾಟ
ರಾಮನಗರ: ಬೊಂಬೆ ನಗರಿ ಚನಪಟ್ಟಣ ನಗರಸಭೆಯ ಚುಕ್ಕಾಣಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಗ್ಗ ಜಗ್ಗಾಟವೇರ್ಪಟ್ಟಿದೆ. ಶತಾಯ ಗತಾಯ ಅಧಿಕಾರ ಹಿಡಿಯಬೇಕೆಂದು ಹೊರಟಿರುವ ಕಾಂಗ್ರೆಸ್‌ನಿಂದ ಮತ್ತೆ ಆಪರೇಷನ್ ಹಸ್ತ ಕಾರ್ಯಾಚರಣೆ ನಡೆಯುವ ಗುಮಾನಿ ಮೂಡಿದೆ.
ಇಲ್ಲೂ ಜೆಡಿಎಸ್‌ಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲೇ ಚಟುವಟಿಕೆ ಬಿರುಸುಗೊಂಡಿದೆ. ಸೈಕಲ್ ಇಳಿದು ಹಸ್ತ ಪಕ್ಷಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಸೇರ್ಪಡೆ ಬಳಿಕವಂತೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಾಕಾಂಕ್ಷಿಗಳು, ಪುರಪಿತೃಗಳಲ್ಲಿ ಮಿಂಚಿನ ಸಂಚಲನ ಮೂಡಿದೆ.
ಪಕ್ಷಗಳ ಬಲಾಬಲ : ಚುನಾವಣೆಯಲ್ಲಿ ಜೆಡಿಎಸ್ 16, ಕಾಂಗ್ರೆಸ್ 13, ಬಿಎಸ್ಸಾರ್ ಕಾಂಗ್ರೆಸ್ ಮತ್ತು ಪಕ್ಷೇತರ ತಲಾ 1 ಸ್ಥಾನಗಳಲ್ಲಿ ಗೆದ್ದಿದ್ದರು. ಬಿಎಸ್ಸಾರ್ ಸದಸ್ಯ ಕಾಂಗ್ರೆಸ್‌ನತ್ತ ವಾಲಿದ್ದಾರೆ. ಇದರೊಂದಿಗೆ ಶಾಸಕ ಮತ್ತು ಸಂಸದರ ಮತವೂ ಸೇರಿ ಕಾಂಗ್ರೆಸ್ ಮತಗಳು 16 ಆಗಲಿವೆ.
ಜೆಡಿಎಸ್ ಸದಸ್ಯರು ಒಗ್ಗಟ್ಟು ಕಾಯ್ದುಕೊಂಡು, ಪಕ್ಷೇತರ ಸದಸ್ಯನನು ಸೆಳೆದುಕೊಂಡರಷ್ಟೇ ಅಧಿಕಾರ ಹಿಡಿಯಬಹುದು. ಪಕ್ಷೇತರ ಸದಸ್ಯ ನಂದೀಶ್ ಸೆಳೆಯಲು ಉಭಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ನಂದೀಶ್ ಒಲಿದ ಕಡೆ ಜಯ ದಕ್ಕುವ ಅವಕಾಶ ಹೆಚ್ಚು. ಚುನಾವಣೆಯಲ್ಲಿ ಗೆಲವು ಸಾಧಿಸಿದ ಪ್ರಾರಂಭದಲ್ಲಿ ನಂದೀಶ್ ಜೆಡಿಎಸ್ ಕಡೆ ಗುರುತಿಸಿಕೊಂಡಿದ್ದರು. ಅವರಿಗೆ ವಿಪ್ ಸಹಿತ ಯಾವ ಆಜ್ಞೆಯೂ ಅನ್ವಯವಲ್ಲ. ಹೀಗಾಗಿ ಅವರು ಸರ್ವತಂತ್ರ ಸ್ವತಂತ್ರ. ಇದನೇ ಅವಕಾಶವಾಗಿ ಬಳಸಿಕೊಂಡು ಅವರು ಕಾಂಗ್ರೆಸ್ ಬೆಂಬಲಿಸಿ ಉಪಾಧ್ಯಕ್ಷ ಇಲ್ಲವೇ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆ ಗಿಟ್ಟಿಸಲೂ ಬಹುದು.
ಕಾಂಗ್ರೆಸ್ ಸದಸ್ಯರ ಸಭೆ: ಸಂಸದ ಡಿ.ಕೆ.ಸುರೇಶ್ ಸಾರಥ್ಯದಲ್ಲಿ ಚನಪಟ್ಟಣ ನಗರಸಭೆಯ ಕಾಂಗ್ರೆಸ್ ಸದಸ್ಯರ ಸಭೆ ರಾಮನಗರ ಬಳಿಯ ರೆಸಾರ್ಟ್‌ನಲ್ಲಿ ಗುರುವಾರ ನಡೆದಿದೆ. ಅಲ್ಲಿ ಸ್ಥಾನಾಕಾಂಕ್ಷಿಗಳು ಬೇಡಿಕೆ ಸಲ್ಲಿಸಿದ್ದಾರೆ. ಪಕ್ಷೇತರ ಸದಸ್ಯ ನಂದೀಶ್ ಕಾಂಗ್ರೆಸ್ ಕಡೆ ವಾಲುವ ಸಾಧ್ಯತೆಯನು ಈ ಸಭೆ ಪುಷ್ಟೀಕರಿಸಿದೆ.
ಕಳೆದ ಬಾರಿ ಸ್ಪಷ್ಟ ಬಹುಮತ ಇದ್ದಾಗ್ಯೂ ಅಧಿಕಾರ ಉಳಿಸಿಕೊಳ್ಳಲಾಗದೆ ಪರಿತಪಿಸಿದ ಜೆಡಿಎಸ್ ಈ ಬಾರಿಯೂ ಅಂಥದ್ದೇ ತಪ್ಪು ಹೆಜ್ಜೆ ಇಡುತ್ತಿದೆ. ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಅಧಿಕಾರ ಹಿಡಿಯುವ ಅವಕಾಶವನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಬಲ ಪ್ರಯತ ನಡೆಸಿಲ್ಲ.
ಮತ್ತೆ ಒಡೆದ ಮನೆ: ಚನಪಟ್ಟಣದಿಂದ ತೆರಳಿದ್ದ ಪುರಪಿತೃಗಳಿಗೆ ಬೆಂಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದರ್ಶನಭಾಗ್ಯ ಲಭಿಸಿತೇ ಹೊರತು, ಸಭೆ ಸೇರಿ ಚರ್ಚಿಸುವ ಸಮಯಾವಕಾಶ ಇರಲಿಲ್ಲ. ಚುನಾವಣೆಗೆ ಇನೊಂದೇ ದಿನ ಬಾಕಿ ಇರುವಾಗ ನಾಯಕತ್ವ ವಿಷಯದಲ್ಲಿ ಜೆಡಿಎಸ್ ಮತ್ತೆ ಒಡೆದ ಮನೆಯಾಗಿ ಮಾರ್ಪಟ್ಟಿದೆ.
ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಿ ಈಚೆಗೆ ಮಾತೃಪಕ್ಷಕ್ಕೆ ಮರಳಿರುವ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ನಾಯಕತ್ವವನು ಒಪ್ಪಲು ಪುರಪಿತೃಗಳ ಒಂದು ಗುಂಪು ಸುತಾರಾಂ ಸಿದ್ಧವಿಲ್ಲ. ಮತ್ತೊಂದು ಗುಂಪು ಅಶ್ವತ್ಥ್ ನಾಯಕತ್ವದಡಿ ಚುನಾವಣೆಗೆ ಒಲವು ತೋರಿದೆ. ಅಧಿಕಾರ ಸಿಗುವುದೇ ಅನುಮಾನವಾಗಿರುವಾಗ ಇಂಥದ್ದೆಲ್ಲ ಬೇಕಿತ್ತೇ ಎನುವುದು ಪಕ್ಷದ ನಿಷ್ಠಾವಂತರ ಆಕ್ಷೇಪವಾಗಿದೆ.
ಹೆಚ್ಚಿರುವ ಆಕಾಂಕ್ಷಿಗಳು: ಸಾಮಾನ್ಯ ಮಹಿಳೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಶ್ವೇತಾ, ಖುರ್ಷಿದ್ ಉನೀಸಾ, ಅಖಿಲಾಭಾನು, ಫರ್ಜಾನ ಭಾನು, ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ
ಮುದ್ದುಕೃಷ್ಣೇಗೌಡ, ರಾಮು, ಜಕೀರ್ ಅಹ್ಮದ್ ಪ್ರಬಲ ಆಕಾಂಕ್ಷಿಗಳು. ಜೆಡಿಎಸ್‌ನಲ್ಲಿ ಮಂಜುಳಾ ಅಶೋಕ್, ಉಜ್ಮಾ ಇಷ್ರತ್, ಕಮರ್ ನಿಜಾಮಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಲೋಕೇಶ್, ಶಶಿಕುಮಾರ್, ಹಮೀದ್ ಮುನಾವರ್ ಲಾಬಿಯಲ್ಲಿ ತೊಡಗಿದ್ದಾರೆ.