ಹುಲ್ಲಿನ ಬಣವೆಗೆ ಬೆಂಕಿ: ರು. 3 ಲಕ್ಷ ನಷ್ಟ
ದೇವನಹಳ್ಳಿ: ತಾಲೂಕಿನ ಹೊರವಲಯದಲ್ಲಿರುವ ಪಾರಿವಾಳಗುಟ್ಟದ ಬಂಡೆಯಲ್ಲಿದ್ದ 4 ರಾಗಿ ಬಣವೆಗಳಿಗೆ ಗುರುವಾರ ಮಧ್ಯಾಹ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ರಾಗಿ ಸಮೇತ ಹುಲ್ಲು ಸಹ ಬೆಂಕಿಗೆ ಆಹುತಿಯಾಗಿದೆ.
ಪಾರಿವಾಳ ಗುಟ್ಟದ ಸಮೀಪವೇ ರಾಗಿ ಬೆಳೆದಿದ್ದ ರೈತರಾದ ವಿ. ಗೋಪಾಲ್, ಕೃಷ್ಣಪ್ಪ, ರಾಮಕೃಷ್ಣಪ್ಪ ಹಾಗೂ ರಾಮದಾಸಪ್ಪ ಅವರು ಪ್ರತ್ಯೇಕವಾಗಿ ರಾಗಿ ಹುಲ್ಲಿನ ಮೆದೆಗಳನು ಇಡಲಾಗಿದ್ದು ಬೇಸಿಗೆ ಕಾಲವಾದ್ದರಿಂದ ರಸ್ತೆಯ ಬದಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದು ಸಾಮಾನ್ಯವಾಗಿರುತ್ತದೆ. ಇದರ ಬೆಂಕಿಯ ಕಿಡಿ ಹಾರಿ ಮೆದೆಗಳಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎನಲಾಗಿದೆ.
ಮಧ್ಯಾಹ ಒಂದು ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು ವಿಷಯ ತಿಳಿದ ರೈತರು ಮತ್ತು ನಾಗರಿಕರು ಆಗಮಿಸಿ ಬೆಂಕಿ ಆರಿಸಲು ಪ್ರಯತ ಪಟ್ಟರೂ ಬೆಂಕಿ ಹತೋಟಿಗೆ ಬರಲಿಲ್ಲ ಎನಲಾಗಿದೆ. ಸುಮಾರು ಒಂದು ಗಂಟೆಯ ನಂತರ ಚಿಕ್ಕಬಳ್ಳಾಪುರ ಮತ್ತು ಯಲಹಂಕದಿಂದ ಅಗಿಶಾಮಕ ದಳದ ಎರಡು ವಾಹನಗಳು ಮತ್ತು ದೇವನಹಳ್ಳಿ ಪುರಸಭೆಯ ಒಂದು ಟ್ಯಾಂಕರ್ ನೀರು ತಂದು ಆರಿಸುವ ಹೊತ್ತಿಗೆ ಸಂಪೂರ್ಣವಾಗಿ ರಾಗಿಬಣವೆಗಳು ಭಸ್ಮವಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರಲ್ಲದೆ ಸರ್ಕಾರದಿಂದ ಪರಿಹಾರಕ್ಕಾಗಿ ಅರ್ಜಿಗಳನು ಪಡೆದರು.
ಆದಿಚುಂಚನಗಿರಿಯ ಜಾತ್ರಾ ಮಹೋತ್ಸವಕ್ಕೆ ವಿಶೇಷ ಬಸ್
ರಾಮನಗರ: ಮಂಡ್ಯದ ನಾಗಮಂಗಲ ತಾಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿಯ ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ರಾಮನಗರದಿಂದ ಆದಿಚುಂಚನಗಿರಿಗೆ ವಿಶೇಷ ಬಸ್ಗಳನು ಓಡಿಸಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕದ ವ್ಯವಸ್ಥಾಪಕ ಮಂಜುನಾಯ್ಕ್ ತಿಳಿಸಿದ್ದಾರೆ. ಮಾ.15ರಂದು ಬೆಳಗ್ಗೆ 7ರಿಂದ ರಾತ್ರಿ 9.30ರವರೆಗೆ ಪ್ರತಿ 30 ನಿಮಿಷಕ್ಕೆ ಒಂದರಂತೆ ಬಸ್ಗಳು ಸಂಚರಿಸಲಿವೆ. ಜಿಲ್ಲೆಯ ಭಕ್ತರು ಈ ವಿಶೇಷ ಬಸ್ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು.
ಇಂದು ಶನಿಪ್ರಭಾವ ನಾಟಕ ಪ್ರದರ್ಶನ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಮುತ್ಯಾಲಮ್ಮ ಕೃಪಾ ಪೋಷಿತ ನಾಟಕ ಮಂಡಲಿ ನೇತೃತ್ವದಲ್ಲಿ ತಾಲೂಕು ಸುಪ್ರಸಿದ್ಧ ಯಾತ್ರಾ ಸ್ಥಳ ಶ್ರೀಮಧುರೆ ಶನಿಮಹಾತ್ಮ ಸನಿಧಿಯಲ್ಲಿ ರಥೋತ್ಸವದ ಅಂಗವಾಗಿ ರಾಜಾಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಪ್ರದರ್ಶನ ಮಾ.14ರ ಶುಕ್ರವಾರ ರಾತ್ರಿ 9 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನು ಜಿ. ಗೋಪಿನಾಥ್ ವಹಿಸಲಿದ್ದಾರೆ. ಉಳಿದಂತೆ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ತಾ.ಅಧ್ಯಕ್ಷ ರಾಮಮೂರ್ತಿ, ಮಧುರೆ ಹೋಬಳಿ ಅಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಬಿ.ಚಂದ್ರಶೇಖರ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಹರಿಕಥಾ ವಿದ್ವಾನ್ ಬೈರಪ್ಪ ಅವರ ನೆನಪಿನಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.