ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೆಲಮಂಗಲ ಪುರಸಭೆ ಜೆಡಿಎಸ್ ಮಡಿಲಿಗೆ

Srinivasa Murthy VN
Updated On : 16 Mar 2014, 12:49 pm

ನೆಲಮಂಗಲ: ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಪುರಸಭೆ ನೂತನ ಅಧ್ಯಕ್ಷರಾಗಿ ಎಂ.ನಾರಾಯಣ್, ಉಪಾಧ್ಯಕ್ಷರಾಗಿ ಸುಜಾತ  ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಡಾ.ಗೀತಾ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 15ನೇ ವಾರ್ಡ್ನ ಜೆಡಿಎಸ್  ಸದಸ್ಯ ಎಂ.ನಾರಾಯಣ್ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು 18ನೇ ವಾರ್ಡ್ನ ಸುಜಾತ ನಾಮಪತ್ರ ಸಲ್ಲಿಸಿದ್ದರು. ನೆಲಮಂಗಲ ಪುರಸಭೆಯಲ್ಲಿ 23 ಸದಸ್ಯರ ಪೈಕಿ ಜೆಡಿಎಸ್ 16 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಮುಖಂಡರಾದ ಕೇಶವಮೂರ್ತಿ, ಗಂಗಣ್ಣ, ಗೋವೇನಹಳ್ಳಿ ಶಿವಣ್ಣ, ಎಂ.ಬಿ.ಟಿ ರಾಮಕೃಷ್ಣಪ್ಪ, ಜಿಪಂ ಸದಸ್ಯರಾದ ಕಾಂತರಾಜು, ರಾಮು, ಪುರಸಭೆ ಸದಸ್ಯರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement