ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೈಸರ್ಗಿಕ ಸಂಪತ್ತು ಸಮರ್ಪಕ ಬಳಕೆಯಾಗಲಿ: ಜಿಪಂ ಸಿಇಒ

Srinivasa Murthy VN
Updated On : 10 May 2014, 12:26 pm

ಮಾಗಡಿ: ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪತ್ತು ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ ಎಂದು ರಾಮನಗರ ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಭಿಪ್ರಾಯಪಟ್ಟರು.
ಮಾಗಡಿ ತಾಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭೂಚೇತನ ತಾಂತ್ರಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಭೂಮಿ ಮಾತ್ರ ಹೆಚ್ಚಾಗುವುದಿಲ್ಲ, ಭೂಮಿಯ ಫಲವತ್ತತೆ ಹೆಚ್ಚಿಸಿ, ಹೆಚ್ಚು ಇಳುವರಿ ನೀಡುವ ಆಹಾರ ಪದಾರ್ಥಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಭೂ ಚೇತನ ತಾಂತ್ರಿಕೆಯ ಮಾಹಿತಿ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಕೃಷಿ ಇಲಾಖೆ ರೈತರಿಗೆ ಸರ್ಕಾರದ ಸಹಾಯಧನ ವಿತರಣೆಗೆ ಸೀಮಿತವಾಗಿದೆ ಎಂಬ ಭಾವನೆ ಜನರಲ್ಲಿದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಡಾ.ವೆಂಕಟೇಶ್ ಅವರು ಭೂ ಚೇತನ ಪೋಸ್ಟರ್ ಮತ್ತು ರೈತ ಅನುವುಗಾರರ ಕೈಪಿಡಿ ಬಿಡುಗಡೆ ಮಾಡಿದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶ್ರೀನಿವಾಸ್ ರಾವ್, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ವಿ.ಎಸ್. ಅಶೋಕ್, ರೇಷ್ಮೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ,  ಎಚ್.ಎಸ್. ಚಂದ್ರಶೇಖರ್, ಸಿ. ಜೋಸೆಫ್, ಕೃಷಿ ಸಹಾಯಕ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ ಇದ್ದರು.

ವಾಸವಿ ಜಯಂತ್ಯುತ್ಸವ ಅದ್ಧೂರಿ
ಮಾಗಡಿ: ಪಟ್ಟಣದಲ್ಲಿ ಆರ್ಯ ವೈಶ್ಯ ಮಂಡಲಿ ವತಿಯಿಂದ ಅದ್ಧೂರಿ ವಾಸವಿ ಜಯಂತ್ಯುತ್ಸವ ನೆರವೇರಿತು.
ಹೋಮ, ಹವನ ಪೂರ್ಣಾಹುತಿ ಮತ್ತು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು. ದೇವಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು. ನಾಡಪ್ರಭು ಕೆಂಪೇಗೌಡ, ಕ್ರಾಂತಿಕಾರಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
 ಇದೇ ವೇಳೆ ಕಲ್ಯಗೇಟ್, ಬಸ್ ನಿಲ್ದಾಣ ಬಳಿ ಸಾರ್ವಜನಿಕವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆರ್ಯ ವೈಶ್ಯಮಂಡಲಿ ಅಧ್ಯಕ್ಷ ಎಸ್.ಎನ್. ನಟರಾಜ್, ಎನ್. ಕೇಶವಮೂರ್ತಿ, ಎಸ್.ಜಿ. ರಮೇಶ್ ಗುಪ್ತಾ, ಎಸ್. ಸುನೀಲ್, ಬಿ.ಎಸ್. ಶೆಂಕರ್, ಸುರೇಶ್, ಪುರಸಭಾ ಸದಸ್ಯ ಕೆ.ವಿ. ಬಾಲು, ವೆಂಕಟಾಚಲಪತಿಶೆಟ್ಟಿ, ಜೋತಿ ಸ್ವಾಮಿ, ನಳಿನಿ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement