ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟೋಲ್ ದರ ಶೀಘ್ರ ಇಳಿಸಿ

Srinivasa Murthy VN
Updated On : 20 May 2014, 1:57 am

ಕ.ಪ್ರ.ವಾರ್ತೆ ದೇವನಹಳ್ಳಿ ಮೇ 19
ಪ್ಲಾಜಾ ಬಳಿ ಜೆಡಿಎಸ್ ಧರಣಿ2 ಗಂಟೆ ಕಾಲ ಹೆದ್ದಾರಿ ಬಂದ್
ಬೇಡಿಕೆ ಈಡೇರದಿದ್ದರೆ ನೀವೇ ಜವಾಬ್ದಾರರು: ನಿಖಿಲ್ ಗೌಡ
ಇಲ್ಲಿನ ಟೋಲ್ ಪ್ಲಾಜಾ ಬಳಿ ಟೋಲ್ ಏರಿಕೆ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಿಖಿಲ್ ಗೌಡ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಟೋಲ್ ಶುಲ್ಕ ಬಗ್ಗೆ ಒಡಂಬಡಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿದೆ, ಅಲ್ಲದೆ ಶುಲ್ಕ ದಿಢೀರನೆ ಏರಿಸುವ ಈ ವ್ಯವಹಾರದಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ. ಕೇಂದ್ರದಲ್ಲಿ ಈಗ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತಿದೆ.  ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಇಲ್ಲಿನ ಜನಕ್ಕೆ ನವಯುಗ ಸಂಸ್ಥೆಯಿಂದ ಆಗುತ್ತಿರುವ ಹಗಲು ದರೋಡೆಯನ್ನು ತಡೆಗಟ್ಟಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಸರ್ವೀಸ್ ರಸ್ತೆ ಬಿಡಲೇಬೇಕು, ಹಣವಿದ್ದವರು ಟೋಲ್ ಶುಲ್ಕ ಕೊಟ್ಟು ಹೋಗಲಿ, ನಮ್ಮ ಅಭ್ಯಂತರವಿಲ್ಲ. ಬಡ ಟ್ಯಾಕ್ಸಿ ಚಾಲಕರು ದೇವನಹಳ್ಳಿ ಕಡೆಯಿಂದ ಬರುವ ತರಕಾರಿ ಹಣ್ಣು ಹಂಪಲು ಸಣ್ಣಪುಟ್ಟ ವಾಹನಗಳಲ್ಲಿ ಸಾಗಿಸುತ್ತಾರೆ. ಆದ್ದರಿಂದ ಇನ್ನು 15 ದಿನದೊಳಗಾಗಿ ಜನರ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಾವಿರಾರು ಮಂದಿ ಸೇರಿ ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದರು.  ಶಿಡ್ಲಘಟ್ಟ ಕ್ಷೇತ್ರದ ಶಾಸಕ ರಾಜಣ್ಣ, ದೇವನಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ಮಾಜಿ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಆರ್. ಮುನೇಗೌಡ, ಹೋರಾಟ ಸಮಿತಿಯ ಬಿ.ಕೆ.ಶಿವಪ್ಪ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ನಮ್ಮ ಗಮನಕ್ಕೆ ತಂದಿಲ್ಲ
ಟೋಲ್ ಶುಲ್ಕ ಏರಿಕೆ ಬಗ್ಗೆ ಯಾವುದೇ ವ್ಯವಹಾರ ನಮ್ಮ ಗಮನಕ್ಕೆ ಬರದಂತೆ ಮಾಡಿದ್ದಾರೆ ಶಾಸಕ ಪಿಳ್ಳಮುನಿಶಾಮಪ್ಪ ಎಂದರು.ನಮ್ಮ ರೈತರ ಜಮೀನು ಪಡೆದವರು ನಮ್ಮ ಮೇಲೆ ಸವಾರಿ ಮಾಡುವುದನ್ನು ಸಹಿಸುವುದಿಲ್ಲ.  ಸರ್ಕಾರ ಮುಂದಿನ ತೀರ್ಮಾನ ಏನೇ ತೆಗೆದುಕೊಳ್ಳಲಿ, ಆದರೆ ದೇವನಹಳ್ಳಿ ತಾಲೂಕಿನಲ್ಲಿ ವಾಹನ ಹೊಂದಿರುವ ಎಲ್ಲರಿಗೂ ಯಾವುದೇ ಶುಲ್ಕ ಪಡೆಯಬಾರದು ಎಂದು ತಿಳಿಸಿ ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಸಂಸ್ಥೆ ಬಡಜನರ ಹೊಟ್ಟೆಯ ಮೇಲೆ ಹೊಡೆಯುವಂತಹ ಕೆಲಸಕ್ಕೆ ಸರ್ಕಾರಗಳು ಅವಕಾಶ ಮಾಡಬಾರದು ಎಂದರು.

ಪ್ರತಿಭಟನಾಕಾರರ ಬಂಧನ
ಪೊಲೀಸರ ಬಂದೋಬಸ್ತ್ ಇದ್ದರೂ ನಿಖಿಲ್ ಗೌಡ ಶಾಸಕರು ಹಾಗೂ ಕಾರ್ಯಕರ್ತರು ಹೆದ್ದಾರಿಯನ್ನು ಸುಮಾರು ಎರಡು ಗಂಟೆಗಳ ಕಾಲ ಬಂದ್ ಮಾಡಿದರು.  ಕನ್ನಡ ಪರ ಹೋರಾಟಗಾರರರು ಸೇರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದರು. ಹೆದ್ದಾರಿ ಬಂದ್ ಮಾಡಿದ ಕಾರಣಕ್ಕಾಗಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಬುಳ್ಳಹಳ್ಳಿ ರಾಜಪ್ಪ, ಕಲ್ಯಾಣಕುಮಾರ್ ಕಾರ್ಯದರ್ಶಿ ಜಿ.ಎ.ರವೀಂದ್ರ, ಚಿ.ಮಾ.ಸುಧಾಕರ್, ಬಿ.ವಿ ನಾಗರಾಜು, ಬಾಬು ಹಾಗೂ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement