ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜಿಗೆ ಪ್ರವೇಶ ಆರಂಭ
ಕನಕಪುರ: ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜಿಗೆ 2014-15 ನೇ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿವೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ನೀಡಲಾಗುತ್ತಿದೆ. ಬಿ,ಎ.,ಬಿ.ಕಾಂ., ಪದವಿಗಳೊಂದಿಗೆ ಪ್ರಸಕ್ತ ಸಾಲಿನಿಂದ ಬಿಎಸ್‌ಸಿ, ಪದವಿ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದು ಪ್ರಾಂಶುಪಾಲ ಎ.ಸಿ.ಚೂಡಲಿಂಗಯ್ಯ ತಿಳಿಸಿದ್ದಾರೆ.
ಅತ್ಯಲ್ಪ ವೆಚ್ಚದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸರ್ಕಾರಿ ಕಾಲೇಜುಗಳಲ್ಲಿ ಸಾಧ್ಯವಿದ್ದು ಕೋಡಿಹಳ್ಳಿ ಪದವಿ ಕಾಲೇಜು ಉತ್ತಮ ಕಟ್ಟಡ, ಪ್ರಯೋಗಾಲಯ, ಆಟದ ಮೈದಾನ, ಗ್ರಂಥಾಲಯ ಹಾಗೂ ನುರಿತ ಶಿಕ್ಷಕರನ್ನು ಒಳಗೊಂಡಿದೆ. ಪ್ರತೀವರ್ಷ ಶೇ. 90 ಕ್ಕೂ ಹೆಚ್ಚಿನ ಫಲಿತಾಂಶದ ಸಾಧನೆ ಮೆರೆಯುತ್ತಿದ್ದು ಕಳೆದ ಸಾಲಿನಲ್ಲಿ ಬೆಂಗಳೂರು ವಿವಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ 6ನೇ ರ್ಯಾಂಕ್ ಪಡೆದಿದ್ದಾರೆ. ಸರ್ಕಾರದಿಂದ ಲಭ್ಯವಾಗುವ ಎಲ್ಲಾ ರೀತಿಯ ಸವಲತ್ತುಗಳು, ವಿದ್ಯಾರ್ಥಿವೇತನ ಹಾಗೂ ಸಾಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ದಾಖಲಿಸುವ ಮೂಲಕ ಸವಲತ್ತುಗಳನ್ನು ಬಳಸಿಕೊಳ್ಳಬೇಕೆಂದು ಪ್ರಾಂಶುಪಾಲ ಎ.ಸಿ.ಚೂಡಲಿಂಗಯ್ಯ ಕೋರಿದ್ದಾರೆ.
ಕನಕಪುರದ ಎಕ್ಸ್‌ಮುನಿಸಿಪಲ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2014-15 ನೇ ಸಾಲಿಗೆ ದಾಖಲಾತಿಗಳು ಪ್ರಾರಂಭವಾಗಿವೆ. ಪಿಯುಸಿ ಕಲಾ, ವಾಣಿಜ್ಯ ಕೋರ್ಸ್‌ಗಳ ಜೊತೆಗೆ ಪ್ರಸಕ್ತ ಸಾಲಿನಿಂದಲೇ ವಿಜ್ಞಾನ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ಅರ್ಜಿಗಳಿಗಾಗಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಾಂಶುಪಾಲರಾದ ವಿ.ಎಂ.ಪುಷ್ಪಾ ಕೋರಿದ್ದಾರೆ.
ಸರ್ಕಾರಿ ಪಪೂ ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು ಖಾಸಗಿ ಕಾಲೇಜುಗಳಲ್ಲಿ ಹತ್ತಾರು ಸಾವಿರ ಶುಲ್ಕ ನೀಡಬೇಕಾಗಿದೆ. ಸರ್ಕಾರಿ ಕಾಲೇಜಿನಲ್ಲಿ ನಾಮಮಾತ್ರ ಶುಲ್ಕಕ್ಕೆ ಉತ್ತಮ ಶಿಕ್ಷಣ, ಅಧ್ಯಾಪಕರು, ಪ್ರಯೋಗಾಲಯ, ವಾಚನಾಲಯ, ಗ್ರಂಥಾಲಯ, ವಿದ್ಯಾರ್ಥಿವೇತನ ಸೌಲಭ್ಯಗಳು ಲಭ್ಯವಿದೆ. ಪೋಷಕರು ಮಕ್ಕಳನ್ನು ಶೀಘ್ರವೇ ದಾಖಲಿಸಬೇಕೆಂದು ಪ್ರಾಂಶುಪಾಲರಾದ ವಿ.ಎಂ.ಪುಷ್ಪಾ ಕೋರಿದ್ದಾರೆ.