ಅಪಘಾತದಲ್ಲಿ ತಾಯಿ, ಮಗು ಸಾವು
ರಾಮನಗರ: ಪ್ರಯಾಣಿಕರಿದ್ದ ಆಪೇ ಆಟೋಗೆ ಬೋರ್ವೆಲ್ ಸರ್ವೀಸ್ ಲಾರಿ ಡಿಕ್ಕಿಯಾಗಿ ತಾಯಿ ಮತ್ತು ಮಗು ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿರುವರುವ ಘಟನೆ ತಾಲೂಕಿನ ಚಕ್ಕೆರೆದೊಡ್ಡಿ ಬಳಿ ಗುರುವಾರ ಸಂಭವಿಸಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಚನ್ನಪಟ್ಟಣ ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದ ಆಶಾ(25) ಮತ್ತು ಅವರ 10 ತಿಂಗಳ ಮಗಳು ಅಮೂಲ್ಯ ಸ್ಥಳದಲ್ಲೇ ಸಾವನ್ನಪ್ಪಿದರು. ಮೃತ ಆಶಾ ಬಾಣಂತನ ಮುಗಿಸಿ ಪತಿ ಮನೆಗೆ ತೆರಳುತ್ತಿದ್ದರು. ವಿಧಿ ಅವರನ್ನು ಇಹಲೋಕದಿಂದಲೇ ಕರೆದೊಯ್ದಿದೆ. ಪ್ರಯಾಣಿಕರನ್ನು ಹತ್ತಿಸಿಕೊಂಡು ಆಪೆ ಆಟೋ ಎನ್.ಆರ್.ಕಾಲೋನಿಯಿಂದ ರಾಮನಗರ ಕಡೆ ಬರುತ್ತಿತ್ತು. ಲಾರಿ ಎದುರುಗಡೆಯಿಂದ ಡಿಕ್ಕಿಯಾಗಿದೆ. ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದು, ಗಾಯಗೊಂಡಿರುವ ಮೂವರನ್ನು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅವಕಾಶ ವಂಚಿತರಿಗೆ ರಾಜಕೀಯ ಆದ್ಯತೆ ನೀಡಲಿ
ಮಾಗಡಿ: ಅವಕಾಶ ವಂಚಿತ ಸಮುದಾಯಗಳಿಗೆ ರಾಜಕೀಯ ಆದ್ಯತೆ ನೀಡಬೇಕು ಎಂದು ಮಾಗಡಿ ತಾಲೂಕು ಮಡಿವಾಳ ಮಾಚೀದೇವ ಸಂಘದ ಕಾರ್ಯದರ್ಶಿ ಟಿ.ಎಂ. ಶ್ರೀನಿವಾಸ್ ಸರ್ಕಾರವನ್ನು ಆಗ್ರಹಿಸಿದರು. ಮಾಗಡಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಬುಡಕಟ್ಟು, ಲೋಹಿತಾಶ್ವ ಸುಡುಗಾಡು ಸಿದ್ಧ, ಕ್ಷೌರಿಕ, ಬುಡ್ಡಜಂಗಮ, ಮಡಿವಾಳ, ಇನ್ಯತ್ ಪಿಂಜಾರ, ಉಪ್ಪಾರ, ವಿಶ್ವಕರ್ಮ, ದೊಂಬರ, ದರವೇಶಿ, ಕಾಡುಗೊಲ್ಲರಂಥ ತಳ ಸಮುದಾಯಗಳನ್ನು ಕೇಳುವವರೇ ಇಲ್ಲವಾಗಿದೆ ಎಂದರು.
'ವಿಕಲಚೇತನರ ಅಭಿವೃದ್ಧಿಗೆ ಬದ್ಧ'
ಸೂಲಿಬೆಲೆ: ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ವಿಕಲ ಚೇತನರಿಗೆ ವ್ಯಾಸಂಗ, ಉದ್ಯೋಗ ಆರೋಗ್ಯದ ಸವಲತ್ತು ನೀಡಿ ಅವರಿಗೆ ಪುನರ್ವಸತಿಗೊಳಿಸಿ ಸಮಾಜ ಮುಖ್ಯವಾಹಿನಿಗೆ ತರಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮೂಳೆ ತಜ್ಞರಾದ ಡಾ.ಸುಧಾಕರ್ ಹೇಳಿದ್ದಾರೆ.ಹೊಸಕೋಟೆ ತಾಲೂಕಿನ ನಂದಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಕಲ ಚೇತನ ಪುನರ್ವಸತಿ ಮೌಲ್ಯಮಾಪನ ತಾಲೂಕಿನ ನಂದಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಕಲ ಚೇತನ ಪುನರ್ವಸತಿ ಮೌಲ್ಯಮಾಪನ ಮತ್ತು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2014-15 ಸಾಲಿಗೆ ವಿಕಲಚೇತನ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ ನಾಲ್ಕು ತಾಲೂಕುಗಳಲ್ಲಿ ಕಾರ್ಯನಿರ್ವಹಣಿಗೆ ಅನುಕೂಲ ಮಾಡಲಾಗಿದೆ. ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ಅಂದರು, ಶ್ರವಣ ದೋಷ ಉಳ್ಳುವರು, ದೈಹಿಕ ವಿಕಲತೆ, ಬುದ್ಧಿ ಮಾಂದ್ಯರು, ಮಾನಸಿಕ ಅಸ್ವಸ್ಥರು,ಬಹು ವಿಧ ಅಂಗವಿಕಲರನ್ನು ಗುರುತಿಸಿ ಅವರಿಗೆ ತಪಾಸಣಿಗೆ ಒಳಪಡಿಸಿ ಸಕ್ಷಮ ಪ್ರಾಧಿಕಾರದಿಂದ ವಿಕಲ ಚೇತನರ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದರು.ಬ್ಯಾಪ್ಟಿಸ್ಟ್ ಆಸ್ಪತ್ರೆಯ ನೋಡಲ್ ಅಧಿಕಾರಿ ಮನು, ಮಾನಸಿಕ ತಜ್ಞ ಮಧುಶ್ರೀ, ಸಮಾಜ ಸೇವಕ ಶಿವಾನಂದ್, ಮೊದಲಾದವರು ಹಾಜರಿದ್ದರು.
ನಾರಾಯಣಪುರ ಗ್ರಾಪಂಗೆ ಆಯ್ಕೆ
ಕನಕಪುರ: ಕನಕಪುರ ತಾಲೂಕು ನಾರಾಯಣಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ನಿಡಗಲ್ಲು ಗ್ರಾಪಂ ಸದಸ್ಯೆ ರತ್ನಮ್ಮ ಗುರುರಾಜ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಗಳಾಗಿ ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ಜಿ.ಎನ್.ಮಹೇಂದ್ರಕುಮಾರ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜಯ್ಯ ಕಾರ್ಯ ನಿರ್ವಹಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜಯ್ಯ ಕಾರ್ಯ ನಿರ್ವಹಿಸಿದರು. ನಾರಾಯಣಪುರ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಥಮ ಆದ್ಯತೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪಡಿತರ ಸರಬರಾಜು, ಹಾಗೂ ಸರ್ಕಾರಿ ಸವಲತ್ತುಗಳ ವಿತರಣೆಯನ್ನು ಸಮರ್ಪಕವಾಗಿ ನೆರವೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ರತ್ನಮ್ಮ ಹೇಳಿದರು. ಕಾಂಗ್ರೆಸ್ ಮುಖಂಡರುಗಳಾದ ನಿಡಗಲ್ಲು ಗುರುರಾಜ್, ವಿಎಸ್ಎಸ್ಎನ್ ಅಧ್ಯಕ್ಷ ಎನ್.ಡಿ.ರಾಜೇಅರಸ್, ಉಪಾಧ್ಯಕ್ಷೆ ಪದ್ಮಮ್ಮ, ನಂಜುಂಡರಾಜೇಅರಸ್, ನಿಂಗರಾಜೇಅರಸ್, ರಮೇಶ್, ಸಿದ್ದಶೆಟ್ಟಿ, ಚಿಕ್ಕಮಾದೇಗೌಡ,ಚಲುವೇಗೌಡ, ಮರಸೇಗೌಡ, ಸಂಜೀವಯ್ಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.