ಬೆಂಗಳೂರು ನಗರ

ಯುವತಿ ಆತ್ಮಹತ್ಯೆ

ಬೆಂಗಳೂರು: ಹಾಲಿ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನನ್ನು ಹತ್ಯೆ ಮಾಡಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ದಾಸರಹಳ್ಳಿ ನಿವಾಸಿ ಎಸ್.ಕೆ.ಸೌಮ್ಯ (24) ಮೃತಳು. ರಾತ್ರಿ ಆಕೆಯ ಪೋಷಕರು ಹಾಗೂ ಸಹೋದರ ಮಲಗಿದ ನಂತರ ಹಾಲ್‌ನಲ್ಲಿದ್ದ ಫ್ಯಾನ್‌ಗೆ ನೇಣುಹಾಕಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮುನ್ನ ಪೋಷಕರು ಹಾಗೂ ಸಹೋದರ ಮಲಗಿದ್ದ ಕೊಠಡಿಗಳ ಬಾಗಿಲ ಚಿಲಕ ಹಾಕಿದ್ದಳು. ೆಮುಂಜಾನೆ 4.30ರ ವೇಳೆಗೆ ಆಕೆಯ ತಂದೆ ಮೂತ್ರವಿಸರ್ಜನೆಗೆ ಎದ್ದಾಗ ಬಾಗಿಲು ಹಾಕಿತ್ತು. ಪಕ್ಕದಲ್ಲಿ ಮಗಳು ಮಲಗಿರಲಿಲ್ಲ. ಅನುಮಾನಗೊಂಡ ಅವರು ಕೊಠಡಿಯಿಂದ ಹೊರಗೆ ಹೋಗಲು ಮುಂದಾದಾಗ ಘಟನೆ ಬೆಳಕಿಗೆ ಬಂದಿದೆ. 2013ರ ಮಾರ್ಚ್ 16ರಂದು ಸೌಮ್ಯ ಜಾಮೀನಿನ ಮೇಲೆ ಹೊರಬಂದಿದ್ದಳು. ಜೈಲಿನಿಂದ ಹೊರಬಂದ ನಂತರ ಸೌಮ್ಯ ಖಿನ್ನಳಾಗಿದ್ದಳು. ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಆಕೆಗೆ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಹಳೆಯ ಘಟನೆ ಹಾಗೂ ಜೈಲಿಗೆ ಹೋಗಿ ಬಂದ ಕಾರಣ ನೊಂದು ನೇಣಿಗೆ ಶರಣಾಗಿರಬಹುದು ಎಂದು ತಂದೆ ಪ್ರಕಾಶ್ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿ ಜೈಲಿಗೆ: ನಿತೀಶ್ ಹಾಗೂ ಸೌಮ್ಯ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಸುದ್ದಿತಿಳಿದ ಕುಟುಂಬ ಸದಸ್ಯರು ವಿವಾಹಕ್ಕೆ ಒಪ್ಪಿ ನಿಶ್ಚಿತಾರ್ಥ ನೆರವೇರಿಸಿದ್ದರು.
ಆದರೆ, ನಿತೀಶ್ ವರ್ತನೆ ಬಗ್ಗೆ ಸೌಮ್ಯಗೆ ಅನುಮಾನವಿತ್ತು. ಈ ನಡುವೆ ಸೌಮ್ಯಗೆ ಫೇಸ್‌ಬುಕ್‌ನಲ್ಲಿ ಬೆಳಗಾವಿ ಮೂಲದ ಪಾರ್ಶ್ವನಾಥ್ ಮಾಲಗತ್ತಿ ಎಂಬಾತನೊಂದಿಗೆ ಸ್ನೇಹವಾಗಿತ್ತು. ಇಬ್ಬರೂ ವಿವಾಹಕ್ಕೆ ನಿರ್ಧರಿಸಿದರು. ಸೌಮ್ಯ ಹಾಗೂ ಮಾಲಗತ್ತಿ ಸೇರಿ ನಿತೀಶ್ ಕೊಲೆಗೆ ಸಂಚು ರೂಪಿಸಿದರು.
 ಬನ್ನೇರುಘಟ್ಟಕ್ಕೆ ಹೋಗುವ ನೆಪದಲ್ಲಿ ಸೌಮ್ಯ, ನಿತೀಶ್‌ನನ್ನು ಕರೆದೊಯ್ದಳು. ಮಾರ್ಗಮಧ್ಯದಲ್ಲಿ ತಂಪು ಪಾನೀಯ ಖರೀದಿಸಿ ಅದರಲ್ಲಿ ರಾಸಾಯನಿಕ ಮಿಶ್ರಣ ಹಾಕಿ ನಿತೀಶ್‌ಗೆ ನೀಡಿದಳು. ಪ್ರಜ್ಞೆ ತಪ್ಪಿದ ನಂತರ, ಮಾಲಗತ್ತಿಗೆ ಕರೆ ಮಾಡಿದಳು. ಮೊದಲೇ ಸಿದ್ಧನಾಗಿದ್ದ ಆತ ಅಲ್ಲಿಗೆ ಬಂದು ನಿತೀಶ್‌ನನ್ನು ಇರಿದು ಕೊಲೆ ಮಾಡಿದ್ದ. ಇದಕ್ಕೆ ಮಾಲಗತ್ತಿ ತನ್ನ ಸ್ನೇಹಿತ ಪುರುಷೋತ್ತಮ್ ಸಹಾಯ ಪಡೆದಿದ್ದ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಅಕ್ಟೋಬರ್ 30ರಂದು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 4ನೇ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಸೌಮ್ಯಗೆ ಜಾಮೀನು ದೊರೆತಿತ್ತು. ಮತ್ತಿಬ್ಬರು ಆರೋಪಿಗಳು ಜೈಲಿನಲ್ಲಿದ್ದಾರೆ.
ಮಹಿಳೆ ನೇಣಿಗೆ: ಮತ್ತೊಂದು ಪ್ರಕರಣದಲ್ಲಿ ನವವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. 20 ವರ್ಷದ ಗೀತಾ ಮೃತರು. ವರದಕ್ಷಿಣೆ ಕಿರುಕುಳವೇ ಆತ್ಮಹತ್ಯೆಗೆ ಕಾರಣ. ರಾಘವೇಂದ್ರ ಅವರು ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ಆಕೆಯ ಅತ್ತೆ ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ಗೀತಾ ಹಾಗೂ ರಾಘವೇಂದ್ರ ಅವರ ವಿವಾಹವಾಗಿತ್ತು. ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಿ ಗೀತಾ ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ