ಬಳ್ಳಾರಿ

ಹಿಂದುಳಿದ ಕಚೇರಿ!

 ರವಿ ಬಡಿಗೇರ
ಕಲಘಟಗಿ: ಹಾಳು ಕೊಂಪೆಯಾಗಿರುವ ಸರ್ಕಾರಿ ಕಚೇರಿಗಳ ಕಟ್ಟಡಗಳಿವು. ಇಲ್ಲಿ ಸಾರ್ವಜನಿಕರಿಗಿಲ್ಲ ಸೇವಾ ಸೌಲಭ್ಯ. ಮೂಲ ಸೌಕರ್ಯಗಳಿಲ್ಲದೇ ನಿತ್ಯ ಸಾರ್ವಜನಿಕರು ಪರದಾಡುವುದು ಇಲ್ಲಿ ಸಾಮಾನ್ಯ.
ಹಿಂದುಳಿದ ತಾಲೂಕು ಎನ್ನಿಸಿಕೊಂಡಿರುವ ಜಿಲ್ಲೆಯ ಕಲಘಟಗಿ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳ ದುಸ್ಥಿತಿ ಇದು. ಪಟ್ಟಣದ ಬಹುತೇಕ ಸರ್ಕಾರಿ ಕಚೇರಿಗಳ ಸ್ಥಿತಿ ಸರಿಯಿಲ್ಲ. ಸಾರ್ವಜನಿಕರಿಗೆ ಸೌಲಭ್ಯ ನೀಡಬೇಕಾದ ಈ ಕಚೇರಿಗಳಿಂದ ಸಾರ್ವಜನಿಕರಿಗೆ, ನೌಕರರಿಗೂ ತೀವ್ರ ಕಿರಿಕಿರಿ ಉಂಟಾಗಿದೆ.
ಇಲ್ಲಿನ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿ, ಉಪ ಖಜಾನೆ ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಥಿತಿ ಹೇಳತೀರದು. ಸ್ವಚ್ಛತೆಯಿಲ್ಲ, ಶೌಚಾಲಯಗಳಿಲ್ಲ. ಕುಡಿಯವ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಈ ಹಾಳು ಕೊಂಪೆಯಾಗಿರುವ ಕಚೇರಿಗಳಲ್ಲಿ ದಿನನಿತ್ಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನರು ತಮ್ಮ ಕಾರ್ಯಕಲಾಪಗಳಿಗೆ ಬಂದು ಹೋಗುವ ಅನಿವಾರ್ಯತೆ. ಈ ಸಂದರ್ಭ ಮೂಲ ಸೌಕರ್ಯಗಳಿಗಾಗಿ ಪರದಾಡುವುದು ಸಾಮಾನ್ಯ. ಚುನಾವಣೆ ಸಂದರ್ಭ ಬೇರೆ ಊರುಗಳಿಂದ ಬಂದ ಸಿಬ್ಬಂದಿ ಇಲ್ಲಿನ ಸಮಸ್ಯೆಗಳಿಂದ ಬೇಸತ್ತು ಹೋಗಿದ್ದಾರೆ. ಇಲ್ಲಿನ ನರಕಯಾತನೆ ಯಾರಿಗೂ ಬೇಡ ಎಂದು ದೂರಿ ಹೋಗಿದ್ದಾರೆಂದು ನೌಕರರೊಬ್ಬರು ಪತ್ರಿಕೆ ಮುಂದೆ ಗೋಳು ತೋಡಿಕೊಂಡರು.
ಶೌಚಾಲಯದಲ್ಲಿ ಪೀಠೋಪಕರಣ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿನ ಸಾರ್ವಜನಿಕ ಮೂತ್ರಾಲಯದ ಕೊಠಡಿಯಲ್ಲಿ ಹಾಳಾದ ಗಣಕಯಂತ್ರ, ಪೀಠೋಪಕರಣಗಳನ್ನು ಹಾಕಿ ಬೀಗ ಜಡಿಯಲಾಗಿದೆ. ಕಚೇರಿಯ ಸುತ್ತಲೂ ಸ್ವಚ್ಚತೆ ಇಲ್ಲದೇ ಗಿಡಗಂಟಿ ಬೆಳೆದು ನಿಂತಿವೆ. ಕಚೇರಿಯಲ್ಲಿ ಇಲಿ, ಹೆಗ್ಗಣ, ಚೇಳು, ಹಾವುಗಳ ವಾಸಸ್ಥಾನವಾಗಿದೆ. ಸೊಳ್ಳೆಗಳ ಕಾಟ ನೌಕರಸ್ಥರಿಗೂ ಸಾಕಾಗಿ ಹೋಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಅನಿಲ ಪಮ್ಮಾರ ಅಸಮಧಾನ ವ್ಯಕ್ತಪಡಿಸುತ್ತಾರೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಸೇವಾ ಸೌಲಭ್ಯಗಳ ಮಾಹಿತಿಯನ್ನು ಒದಗಿಸುವ ನಾಮಫಲಕಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ. ವಾಹನ ನಿಲುಗಡೆಗೆ ಸ್ಥಳಾವಕಾಶ ಇರದ ಕಾರಣ ತೊಂದರೆಯಾಗುತ್ತಿದೆ ಎಂದು ದಾಸ್ತಿಕೊಪ್ಪ ಗ್ರಾಮದ ರೈತ ಚಂದ್ರಗೌಡ ಪಾಟೀಲ ಆರೋಪಿಸಿದ್ದಾರೆ. ತಾಲೂಕು, ಜಿಪಂ, ಉಪ ವಿಭಾಗ, ತಾಪಂ ಕಚೇರಿ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಮುಂತಾದ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸೇವೆ ಲಭಿಸುವುದು ದುರ್ಲಭ.
ಈ ಕುರಿತು ತಹಸೀಲ್ದಾರ್ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಹೌದ್ರಿ. ಸಮಸ್ಯೆಗಳು ಸಾಕಷ್ಟಿವೆ. ಆದರೆ, ಅವುಗಳಿಗೆ ಪರಿಹಾರ ಬೇಕಲ್ಲ. ಲೋಕೋಪಯೋಗಿ ಇಲಾಖೆಯಿಂದ ಕೆಲಸ ಮಾಡಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ತಾಲೂಕು ಕೇಂದ್ರದಲ್ಲಿರುವ ಅಬಕಾರಿ ಇಲಾಖೆ, ಜಲಾನಯನ, ಸಹಾಯಕ ಅರಣ್ಯ ಸಂರಕ್ಷಣಾ, ಕಾರ್ಮಿಕ ಇಲಾಖೆಗಳು ಎಲ್ಲಿವೆ ಎಂದು ಹುಡುಕಾಡುವ ಸ್ಥಿತಿ ಇದೆ. ಸರ್ಕಾರಿ ಕಚೇರಿ ಬಗ್ಗೆ ನಾಮಫಲಕಗಳೇ ಇಲ್ಲ. ಈ ಬಗ್ಗೆ ತಾಪಂ ಸಭೆಯಲ್ಲಿ ಹಲವು ಬಾರಿ ಪ್ರಶ್ನಿಸಿದರೂ ಉತ್ತರ ಮಾತ್ರ ದೊರೆತಿಲ್ಲ.
ಸಾರ್ವಜನಿಕರ ಸೇವೇ ಮಾಡುವ ಸರ್ಕಾರಿ ಕಚೇರಿಗಳೇ ಅಸ್ತವ್ಯಸ್ತಗೊಂಡಿದ್ದು, ಸಮರ್ಪಕ ಸೇವೆ ನೀಡದಿದ್ದರೆ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)