ಬೀದರ್

ಕಾಲುವೆ ನವೀಕರಣ ಕಳಪೆ

ಹುಣಸಗಿ: ನಾರಾಯಣಪುರ ಎಡದಂಡೆ ಕಾಲುವೆ ನವೀಕರಣ ಕಾಮಗಾರಿಯು ಕಳಪೆ ಆಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ಮಾಡಲು ಆಗ್ರಹಿಸಿ, ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ವಾಲ್ಮೀಕಿ ವೃತ್ತದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ನೂರಾರು ಕಾರ್ಯಕರ್ತರು ಹಾಗೂ ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಮುಖ್ಯ ಎಂಜಿನಿಯರ್ ಕಚೇರಿಗೆ ತೆರಳಿದರು.
ಹಗಲು ದರೋಡೆ: ರೈತರ ಜೀವನಾಡಿಯಾಗಿರುವ ಈ ಕಾಲುವೆ ನವೀಕರಣ ಕಾಮಗಾರಿಯು ಗುತ್ತಿಗೆದಾರ ಹಾಗೂ ಕೃಭಾಜನಿನಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ಭಾಗದ ರೈತರಿಗೆ ಅನ್ಯಾಯವೆಸಗಿ ನೂರಾರು ಕೋಟಿ ರೂಪಾಯಿ ಹಗಲು ದರೋಡೆಯಿಂದ ಸಂಬಂಧಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಅಲ್ಪ ದಿನಗಳಲ್ಲೇ ಆಗರ್ಭ ಶ್ರೀಮಂತರಾಗಿದ್ದಾರೆಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆರೋಪ ಮಾಡಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪದಾಧಿಕಾರಿಗಳು, ರೈತರ ಜೀವನಾಡಿಯಾಗಿರುವ ಎಡದಂಡೆ ಕಾಲುವೆ ನವೀಕರಣ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ. ಅಲ್ಲದೇ ಅಂದಾಜು ಪತ್ರಿಕೆಯಲ್ಲಿ ಸಿದ್ಧಪಡಿಸಿದಂತೆ ಕಾಲುವೆಯ ಯಾವ ಭಾಗದಲ್ಲೂ ಸಮರ್ಪಕವಾಗಿ ಗುಣಮಟ್ಟದ ಕಾಮಗಾರಿ ಆಗದೇ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಸಂತೋಷ ಪಾಟೀಲ ಆರೋಪಿಸಿದರು.
ಮೇಲಧಿಕಾರಿಗಳಿಗೆ ವಿಷಯ ರವಾನೆ: ಪ್ರತಿಭಟನಾ ಸ್ಥಳಕ್ಕೆ ಹುಣಸಗಿ ಉಪ-ತಹಸೀಲ್ದಾರ್ ಸುರೇಶಕುಮಾರ ಚವಲಕರ ಭೇಟಿ ನೀಡಿ, ಕರವೇ ಪ್ರತಿಭಟನಾಕಾರರಿಂದ ಮನವಿ ಪತ್ರ ಪಡೆದು, ಕೃಭಾಜನಿನಿ ಅಧೀಕ್ಷಕ ಅಭಿಯಂತರ ಡಿ.ಆರ್. ಕೃಷ್ಣಮೂರ್ತಿ ಅವರಿಗೆ ನೀಡಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ವಿಷಯವನ್ನು ರವಾನಿಸಲು ತಿಳಿಸಿದರು.
ಹುಣಸಗಿ ಸಿಪಿಐ ವಿಜಯ ಮರಗುಂಡಿ ನೇತೃತ್ವದಲ್ಲಿ ಕೆಂಭಾವಿ ಪಿಎಸ್ಐ ಮಂಜುನಾಥ, ಕೊಡೇಕಲ್ ಪಿಎಸ್ಐ ಪ್ರದೀಪ್ ಬಿಸೆ, ಸ್ಥಳೀಯ ಪಿಎಸ್ಐ ಶೈಲಜಾ ಪ್ಯಾಟಿಶೆಟ್ಟರ ಹಾಗೂ ಎಎಸ್ಐ ಲಕ್ಷ್ಮಣ ಹೋಟ್ಕರ್, ವೀರಣ್ಣ ಕೋಳೂರು, ಸಮ್ಮುಖದಲ್ಲಿ ಮುಖ್ಯ ಎಂಜಿನಿಯರ್ ಕಚೇರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಜರುಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!