'ಆದಾಯ ಪ್ರಮಾಣ ಪತ್ರಕ್ಕೆ 5ವರ್ಷ ಅವಧಿ'
ಹರಪನಹಳ್ಳಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರವನ್ನು ಒಂದು ಬಾರಿ ಪಡೆದರೆ ಜೀವನ ಪೂರ್ತಿ ನಡೆಯುತ್ತದೆ. ಜನತೆ ಪದೇ ಪದೇ ತಾಲೂಕು ಕಚೇರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಬರಬೇಡಿ ಎಂದು ತಹಸೀಲ್ದಾರ ಕೆ.ಮಲ್ಲಿನಾಥ ತಿಳಿಸಿದ್ದಾರೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಬಹಳಷ್ಟು ಜನರು ಆಗಿಂದಾಗ್ಗೆ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಕೊಡುತ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲ. ಆದಾಯ ಪ್ರಮಾಣ ಪತ್ರ ಮಾತ್ರ 5 ವರ್ಷಕ್ಕೊಮ್ಮೆ ಹೊಸದಾಗಿ ಪಡೆಯಬೇಕು, ಈ ಕುರಿತು ಸರ್ಕಾರದಿಂದ ಬಂದಿರುವ ಸುತ್ತೊಲೆಯನ್ನು ಎಲ್ಲಾ ಕಚೇರಿಗಳಿಗೆ, ಶಾಲಾ -ಕಾಲೇಜುಗಳಿಗೆ ಕಳಿಹಿಸಿ ಕೊಡಲಾಗಿದೆ ಎಂದು ತಿಳಿಸಿದರು.
ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಕೋರಿ ನಮಗೆ ಎರಡು ಅರ್ಜಿಗಳು ಬಂದಿದ್ದು, ಸರ್ಕಾರದಿಂದ ಈ ಕುರಿತು ಯಾವುದೇ ಆದೇಶ ಬಾರದಿರುವುರಿಂದ ಆ ರೀತಿ ಪ್ರಮಾಣ ಪತ್ರ ಕೊಡಲಾಗುವುದಿಲ್ಲ. ನಮ್ಮ ಭಾಗದಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿದ ಬೇಡ ಜಂಗಮರು ಇಲ್ಲ ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದರು.
14,15 ಜಾತ್ರಾ ಮಹೋತ್ಸವ
ನ್ಯಾಮತಿ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿ ನ್ಯಾಮತಿ ಸಮೀಪದಲ್ಲಿ ಸವಳಂಗ- ಚಿನ್ನಿಕಟ್ಟೆ ಮಾರ್ಗವಾಗಿ ಸೂರಗೊಂಡನಕೊಪ್ಪ ಗ್ರಾಮ ಭಾರತ್ ಬಂಜಾರ ಸಮುದಾಯದ ಆರಾಧ್ಯ ದೇವರಾದ ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಳವಾಗಿದೆ. ಫೆ.15ರಂದು ಸಂತಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಫೆ.14 ಮತ್ತು 15ರಂದು ಸೂರಗೊಂಡನಕೊಪ್ಪ ಗ್ರಾಮದ ಸೇವಲಾಲ್ ಮತ್ತು ಮರಿಯಮ್ಮದೇವಿ ಪುಣ್ಯಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸಂತ ಸೇವಾಲಾಲ್ ಮಹಾರಾಜರ 274ನೇ ಜಯಂತ್ಯುತ್ಸವದ ಅಂಗವಾಗಿ ಭಾರತ್ ಬಂಜಾರ ಸೇವಾಲಾಲ್ ಸೇನೆ ಆಶ್ರಯದಲ್ಲಿ ಸೇವಾಲಾಲ್ ಜ್ಯೋತಿಯಾತ್ರೆ 'ನಮ್ಮ ನಡಿಗೆ ಬೆಳಕಿನೆಡೆಗೆ' ಹೊರಟಿದೆ.
ಚಿತ್ರದುರ್ಗ ಸೀಬಾರ ಬಂಜಾರ ಗುರಪೀಠಾಧ್ಯಕ್ಷರಾದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕ್ ಕೋಗಳಿ ತಾಂಡಾ ಶಾಂತಿದಾಮ ಸೇವಾ ಟ್ರಸ್ಟ್ ಗೋಪಾಲ್ ಮಹಾರಾಜ್ ಸ್ಥಳದಿಂದ ಸೇವಲಾಲ್ ಜ್ಯೋತಿಯಾತ್ರೆ ಪ್ರಾರಂಭವಾಗಿ ಜ.29ರಿಂದ ಫೆ.6ಕ್ಕೆ ಯಾತ್ರೆ ಮುಕ್ತಾಯವಾಗಲಿದೆ. ನ್ಯಾಮತಿ ಮಾರ್ಗವಾಗಿ ಸಂತ ಶ್ರೀ ಸೇವಲಾಲ್ ಮಹಾರಾಜರ ಜನ್ಮಸ್ಥಳ ಸೂರಗೊಂಡನಕೊಪ್ಪಕ್ಕೆ ಹೊರಡುವ ಮಾರ್ಗದಲ್ಲಿ ಜಿಪಂ ಸದಸ್ಯ ಶಿವರಾಮನಾಯ್ಕ ಹಾಗೂ ತಾಪಂ ಮಾಜಿ ಅಧ್ಯಕ್ಷ ಭೂಪಾಲನಾಯ್ಕ, ಗೋಪಾಲನಾಯಕ ನ್ಯಾಮತಿ ಸುರಹೊನ್ನೆ ಗಡಿಭಾಗದಲ್ಲಿ ಸ್ವಾಗತಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.