ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ಮಾಜಿ ಶಾಸಕ ಹಾಲಪ್ಪ

Parashurama
Updated On : 8 Feb 2013, 10:18 am

ಹರಪನಹಳ್ಳಿ: ಹೂವಿನ ಹಡಗಲಿ ಕ್ಷೇತ್ರದ ಮಾಜಿ ಶಾಸಕ ನಂದಿಹಳ್ಳಿ ವಿ.ಬಿ. ಹಾಲಪ್ಪ ಅವರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಅವರು ಈ ಕುರಿತು 'ಕನ್ನಡಪ್ರಭ'ಕ್ಕೆ ಗುರುವಾರ ಹೇಳಿಕೆ ನೀಡಿದ್ದು, ಬೆಂಗಳೂರಿನಲ್ಲಿ ಪಕ್ಷದ ಕಚೇರಿಗೆ ತೆರಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದರು.  ಬಿಜೆಪಿ ಕಾರ್ಯವೈಖರಿ, ನಡವಳಿಕೆ ನನಗೆ ಹಿಡಿಸಲಿಲ್ಲ. ಐದು ವರ್ಷದಲ್ಲಿ ಪಕ್ಷ ಮೂರು ಹೋಳಾಗಿದೆ. ಪಕ್ಷದ ಸಂಘಟನೆ ಇಲ್ಲ, ಅಭಿವೃದ್ಧಿ ಚಿಂತನೆ ಮೊದಲೇ ಇಲ್ಲ ಎಂದು ದೂರಿದರು. ಮುಖಂಡರು ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದಾರೆ. ಪಕ್ಷ ಕೋಮಾ ಸ್ಥಿತಿಯಲ್ಲಿದೆ. ಈ ಪಕ್ಷಕ್ಕೆ ಯಾಕೆ ಬಂದೆ ಎಂದು ಅನ್ನಿಸಿಬಿಟ್ಟಿದೆ ಎಂದರು. ಬೇರೆ ಯಾವ ಪಕ್ಷ ಸೇರಬೇಕು ಎಂದು ಇನ್ನೂ ತೀರ್ಮಾನಿಸಿಲ್ಲ. ಹರಪನಹಳ್ಳಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುದ್ದಿ ಹಬ್ಬಿದೆ, ಹಬ್ಬಲಿ ಬಿಡಿ. ಆ ರೀತಿ ಸುದ್ದಿ ಹಬ್ಬಿದ್ದರಿಂದ ನನಗೇನು ತೊಂದರೆ ಇಲ್ಲ ಎಂದು ಚುನಾವಣಾ ಸ್ಪರ್ಧೆ ವಿಚಾರ ಗೌಪ್ಯವಾಗಿಯೇ ಇಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments