ಗಲ್ಲು ಶಿಕ್ಷೆಯಿಂದ ಉಗ್ರರಿಗೆ ಎಚ್ಚರಿಕೆ
ದಾವಣಗೆರೆ: ಉಗ್ರ ಅಫ್ಜಲ್ನನ್ನು ಬೆಳಿಗ್ಗೆ ಗಲ್ಲಿಗೇರಿಸಿರುವುದನ್ನು ದೇಶದ ಸಮಸ್ತರೂ ಸ್ವಾಗತಿಸುವ ವಿಚಾರವಾಗಿದೆ. ಭಯೋತ್ಪಾದನೆಯನ್ನು ಭಾರತ ಸಹಿಸದು ಎಂಬ ಸಂದೇಶವನ್ನು ಈ ಮೂಲಕ ಮತ್ತೊಮ್ಮೆ ಸಾರಿದಂತಾಗಿದೆ ಎಂದು ಬಿಜೆಪಿ ಮುಖಂಡ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಲೋಕೇಶ ತಿಳಿಸಿದರು.
ಅಫ್ಜಲ್ನನ್ನು ಗಲ್ಲಿಗೇರಿಸಿದ್ದು ಇಡೀ ದೇಶವೇ ಹೆಮ್ಮೆಪಡುವ ಸಂಗತಿ. 13.12.2001ರಂದು ಸಂಸತ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಸಂಸತ್ ಆವರಣದಲ್ಲಿ 9 ಜನರ ಸಾವಿಗೆ ಅಫ್ಜಲ್ ಗುರು ಕಾರಣವಾಗಿದ್ದ. ಇಂತಹ ದೇಶದ್ರೋಹಿಯನ್ನು 12 ವರ್ಷಗಳ ನಂತರ ಗಲ್ಲಿಗೇರಿಸಿ ತಡವಾದರೂ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು.
ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ನನ್ನು ಗಲ್ಲಿಗೇರಿಸಿದ್ದು ಇದೀಗ ಅಫ್ಜಲ್ನನ್ನೂ ಗಲ್ಲಿಗೇರಿಸಿದೆ. ಇದು ಉಗ್ರರಿಗೆ ಪಾಠವಾಗಲಿದೆ. ಮುಂದೆ ಯಾರೂ ಕೂಡ ಇಂತಹ ದುಷ್ಕೃತ್ಯಕ್ಕೆ ಕೈ ಹಾಕಿದರೆ ಕಠಿಣ ಕ್ರಮವಂತೂ ನಿಶ್ಚಿತ ಎಂಬುದನ್ನು ಸಾರುವ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ಉಗ್ರರಿಗೆ, ದೇಶದ್ರೋಹಿಗಳಿಗೆ ಸಾರುವಲ್ಲಿ ಯಶಸ್ವಿಯಾಗಿದೆ ಎಂದು ಲೋಕೇಶ್ ಅಭಿಪ್ರಾಯಪಟ್ಟರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.