ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ತಪ್ಪಿಸಿಕೊಂಡಿದ್ದ ಜಿಂಕೆ ರಕ್ಷಣೆ

Parashurama
Updated On : 10 Feb 2013, 10:24 am

ಹೊನ್ನಾಳಿ: ತಾಲೂಕಿನ ಗಡಿಭಾಗದ ಗ್ರಾಮವಾದ ಅರಸಿನಘಟ್ಟ ಗ್ರಾಮದಲ್ಲಿ ಭದ್ರಾವತಿ ತಾಲೂಕಿನ ಜೋಳದಾಳ್ ಅರಣ್ಯ ಪ್ರದೇಶದಿಂದ ಆಕಸ್ಮಿಕವಾಗಿ ತಪ್ಪಿಸಿಕೊಂಡು ಗ್ರಾಮದ ಸಮೀಪ ಬಂದ ಜಿಂಕೆಯನ್ನು ನಾಯಿಗಳು ಬೇಟೆಯಾಡಲು ಮುಂದಾದಾಗ ಇದನ್ನು ಕಂಡ ಗ್ರಾಮದ ಯುವಕರು ಜಿಂಕೆಯನ್ನು ಸಂರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಜಯರಾವ್ ಹಾಗೂ ಹಾಲೇಶ್ ಜಿಂಕೆಯನ್ನು ತಮ್ಮ ವಶಕ್ಕೆ ಪಡೆದು ಶಾಂತಿಸಾಗರ ವಲಯ ಅರಣ್ಯಾಧಿಕಾರಿ ಕೆ.ಎಚ್. ಮಂಜುನಾಥ್ ಅವರ ವಶಕ್ಕೆ ನೀಡಿದ್ದಾರೆ. ವಲಯ ಅರಣ್ಯಾಧಿಕಾರಿ ಗ್ರಾಮಸ್ಥರ ನೆರವಿನೊಂದಿಗೆ ಗಾಯಗೊಂಡಿದ್ದ ಜಿಂಕೆಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೂಡಿಸಿ ನಂತರ ಜೋಳದಾಳ್ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಜಿಂಕೆ ರಕ್ಷಿಸಲು ಗ್ರಾಮದ ಯುವಕರಾದ ಬಿ.ಸಿ. ನಂದೀಶ್, ಬಿ.ಸಿ. ಗಣೇಶ್, ರುದ್ರೇಶ್ ಹಾಗೂ ಪ್ರವೀಣ್ ಪಾಲ್ಗೊಂಡಿದ್ದರು.
ಛಲವಿದ್ದರೆ ಯಶಸ್ಸು ಖಚಿತ: ಮಾಡಾಳ್
ಚನ್ನಗಿರಿ: ವಿದ್ಯಾರ್ಥಿಗಳಲ್ಲಿ ಓದುವ ಛಲವಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಶನಿವಾರ ಇಲ್ಲಿನ ಸಪಪೂ ಕಾಲೇಜಿನ 2012-13ನೇ ಸಾಲಿನ ಕಾಲೇಜಿನ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಠ ಇದ್ದರೆ ಎಂತಹ ಕೆಲಸಗಳೂ ಕೂಡ ನಮ್ಮ ಅಧೀನದಲ್ಲಿರುತ್ತವೆ ಎಂದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಓದಿನ ಕಡೆ ಹೆಚ್ಚಿನ ಗಮನ ಹರಿಸಿ ಪರೀಕ್ಷೆಯಲ್ಲಿ ಶೇ.100ಕ್ಕೆ 100ಫಲಿತಾಂಶ ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿ ಸಮೂಹಕ್ಕೆ ಉತ್ತೇಜನ ನೀಡಿದರು.
ರಾಜ್ಯದಲ್ಲಿ ಬಡತನ ರೇಖೆಯಲ್ಲಿರುವಂತವರು ಶೇ.35ರಷ್ಟು ಭಾಗ ಜನರಿದ್ದು, ಇಂತಹವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರವು ಸಾಕಷ್ಟು ಹಣವನ್ನು ಕಾಯ್ದಿರಿಸಿದೆ ಎಂದರು.
 ವಡ್ನಾಳ್ ರುದ್ರೇಶ್ ವಿಶೇಷ ಉಪನ್ಯಾಸ ನೀಡಿದರು. ತಾ.ಪಂ. ಅಧ್ಯಕ್ಷ ಕಗತೂರು ಪಾಲಾಕ್ಷಿ, ಪ.ಪಂ. ಅಧ್ಯಕ್ಷೆ ಪುಷ್ಪಲತಾ ಜಗದೀಶ್, ಉಪಾಧ್ಯಕ್ಷ ರೇವಣ್ಣ, ಎಸ್.ಎ. ಸುಭಾನ್, ಎನ್.ಎಸ್. ರಾಜಪ್ಪ, ಸತೀಶ್ ಪವಾರ್, ಶಿವರಾಜ್, ಕರಿಯಣ್ಣ, ಆಂಜನೇಯ, ಪ.ಪಂ. ಸದಸ್ಯ ರಹಮತ್ತುಲ್ಲಾಖಾನ್, ಫೈಜುನ್ನಿಸಾ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments