ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ
ಹರಪನಹಳ್ಳಿ: ಸಾವಿರ ಪದಗಳಲ್ಲಿ ಹೇಳುವ ವಿವರಣೆಯನ್ನು ಒಂದು ಅತ್ಯುತ್ತಮ ಚಿತ್ರ ಹೇಳುತ್ತದೆ ಎಂದು ಖ್ಯಾತ ಹಿರಿಯ ಚಿತ್ರಕಲಾವಿದ ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟರು
ಪಟ್ಟಣದ ಅಂಬ್ಲಿದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೂವಿನ ಹಡಗಲಿ ರಂಗಭಾರತಿ, ಹರಪನಹಳ್ಳಿಯ ಕಲಾಭಾರತಿ ಅವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚಿತ್ರಕಲೆ ಒಂದು ಭಾಷೆ: ಭಾಷೆ ಹುಟ್ಟುವದಕ್ಕೂ ಮುನ್ನ ಮಾನವ ಪರಸ್ಪರರನ್ನು ಅರ್ಥಮಾಡಿಕೊಳ್ಳಲು, ಸಂವಹನ ನಡೆಸಲು ಕಂಡುಕೊಂಡ ಸುಲಭದ ಮಾರ್ಗವೇ ಈ ಚಿತ್ರಕಲೆ ಭಾಷೆಯದಾಗಿತ್ತು. ಚಿತ್ರಕಲೆಯಿಂದ ಮಾನವ ತನ್ನ ನಡೆ- ನುಡಿ, ಸಂಸ್ಕೃತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾನೆ ಎಂದರು.
ಖ್ಯಾತ ಚಿತ್ರಕಲಾವಿದ ಕೆ.ಕೆ. ಮಕಾಳಿ ಚಿತ್ರಕಲಾ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಡಿಬಿ ಕಾಲೇಜ್ ಪ್ರಾಂಶುಪಾಲ ಎಸ್. ನಾಗೇಂದ್ರಪ್ಪ, ಎಂ.ಎಸ್. ಉಮೇಶ, ಶಿವಪ್ರಕಾಶ, ಪ್ರಾಧ್ಯಾಪಕ ಡಾ.ಕೆ. ರುದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹಾಲೇಶ, ಇರ್ಫಾನ್ ಮದುಗಲ್, ಎಂ.ವಿ. ಅಂಜಿನಪ್ಪ, ಇತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.