ಶೀಘ್ರ ಕೃಷಿ ಅಧ್ಯಯನ ಕೇಂದ್ರ
ಹರಪನಹಳ್ಳಿ: ಕೂಡಲ ಸಂಗಮದಲ್ಲಿ ಶೀಘ್ರ ಕೃಷಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು ಎಂದು ಕೂಡಲ ಸಂಗಮ ಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ತಾಲೂಕಿನ ಅರಸೀಕೆರೆಯ ಕೋಲುಶಾಂತೇಶ್ವರ ಮಠಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ ಸಂದರ್ಭ ನೆರೆದಿದ್ದ ಭಕ್ತ ಸಮೂಹ ಉದ್ದೇಶಿಸಿ ಆಶೀರ್ವಚನ ನೀಡಿದರು.
ಈಗಾಗಲೇ ಕೃಷಿ ಅಧ್ಯಯನ ಕೇಂದ್ರ ಆರಂಭಿಸುವ ಉದ್ದೇಶದಿಂದ ಕೂಡಲಸಂಗಮದ ಬಳಿ ಎಂಟು ಎಕರೆ ಭೂಮಿ ಖರೀದಿಗೆ ಪೀಠ ಮುಂದಾಗಿದೆ. ಅದರಲ್ಲಿ ಎರಡು ಎಕರೆ ಪ್ರದೇಶದಲ್ಲಿ ವಿಶೇಷ ತಳಿಯ ವಿವಿಧ ಬೆಳೆಗಳನ್ನು ಪ್ರಯೋಗಿಕವಾಗಿ ಬೆಳೆಯಲಾಗುವುದು ಎಂದರು.
ಹುಬ್ಬಳಿಯಲ್ಲಿ ನಡೆಯಬೇಕಾಗಿದ್ದ ಪೀಠದ ವಾರ್ಷಿಕ ಆಚರಣೆಯನ್ನು ಹರಿಹರ ಪೀಠದ ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಲಿಂಗೈಕ್ಯರಾದ ಪ್ರಯುಕ್ತ ಅವರ ಗೌರವಾರ್ಥ ಫೆಬ್ರವರಿ ಕೊನೆಯ ವಾರಕ್ಕೆ ವಾರ್ಷಿಕ ಆಚರಣೆ ಮುಂದೂಡಲಾಗಿದೆ. ಸಮಾಜದ ಮುಖಂಡರ ಜತೆ ಚರ್ಚಿಸಿ ದಿನಾಂಕ ನಿಗಧಿಗೊಳಿಸಿ ಪ್ರಕಟಿಸಲಾಗುವುದು ಎಂದರು.
ಗ್ರಾಮಸ್ಥರಾದ ಮಲ್ಲಿಕಾರ್ಜುನಗೌಡ, ಜಯಪ್ಪರ ಕೊಟ್ರೇಶ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಪಿ. ಮರಿಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಷಣ್ಮುಖಪ್ಪ, ದಾನಪ್ಪನರ ಅಜ್ಜಣ್ಣ, ಗ್ರಾಪಂ ಸದಸ್ಯ ವೈ. ಅಣ್ಣಪ್ಪ, ಚನ್ನವೀರಪ್ಪ, ಪಂಚಮಸಾಲಿ ಮುಖಂಡರಾದ ಅಡವಿಹಳ್ಳಿ ಮಂಜುನಾಥ, ಎನ್. ಮಂಜುನಾಥ, ವಿ.ವಿ. ಪಾಟೇಲ್ ಇತರರು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.