ಲೋಕ ಸತ್ತಾ ಪಕ್ಷಬೆಂಬಲಿಸಿ: ಮನವಿ
ದಾವಣಗೆರೆ: ಭ್ರಷ್ಟರು, ಅನಾಚಾರಿಗಳು, ಅತ್ಯಾಚಾರ ಆರೋಪ ಹೊತ್ತ, ಜೈಲಿಗೆ ಹೋಗಿ ಬಂದ, ಲಂಚಕೋರರು, ಗಣಿ, ರಿಯಲ್ ಎಸ್ಟೇಟ್ ಮಾಫಿಯಾದವರೆ ತುಂಬಿದ ರಾಜಕೀಯ ಕ್ಷೇತ್ರವನ್ನು ಅಂತಹವರಿಂದ ಮುಕ್ತಗೊಳಿಸಿ, ಮೌಲ್ಯಾಧಾರಿತ ಪರ್ಯಾಯ ರಾಜಕಾರಣಕ್ಕಾಗಿ ಲೋಕಸತ್ತಾ ಪಕ್ಷವು ರಾಜ್ಯ ಪ್ರವಾಸ ಕೈಗೊಂಡು, ಜನಾರಿವು ಮೂಡಿಸುತ್ತಿದೆ ಎಂದು ಲೋಕಸತ್ತಾ ರಾಜ್ಯ ಕಾರ್ಯದರ್ಶಿ ಸಿ. ದೀಪಕ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸತ್ತಾ ಪಕ್ಷ ಬದಲಾವಣೆ ಸಂಕಲ್ಪದೊಂದಿಗೆ ರಾಜ್ಯದ 30ಕ್ಕೂ ಹೆಚ್ಚು ಕ್ಷೇತ್ರಕ್ಕೆ ಸ್ಪರ್ಧಿಸಲಿದೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೂ ಘೋಷಿಸಿದೆ. ಇತರೆ ಕ್ಷೇತ್ರಗಳಲ್ಲೂ ಪ್ರಾಮಾಣಿಕ, ನಿಸ್ವಾರ್ಥ ಸೇವಾ ಮನೋಭಾವದಿಂದ ಸ್ವಯಂ ಪ್ರೇರಣೆಯಿಂದ ಮುಂದೆ ಬರುವ ವ್ಯಕ್ತಿಗಳಿಗೆ ಅವಕಾಶ ನೀಡಲಿದೆ ಎಂದರು.
ಲೋಕ ಸತ್ತಾ ಪಕ್ಷ ಸೇರಲು ಇಚ್ಛಿಸುವವರು, ಬದಲಾವಣೆ ನಿರೀಕ್ಷೆ ಮಾಡುವವರು ಮೊ-93433- 88188ಗೆ ಸಂಪರ್ಕಿಸುವಂತೆ ಮನವಿ ಮಾಡಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.